ಗುಳೇದಗುಡ್ಡ22: ಸಮೀಪದ ತೋಗುಣಶಿ ಗ್ರಾಮದ ಶ್ರೀ ಅಮರೇಶ್ವರ ಮಠದ ಶ್ರೀ ಜಗದ್ಗುರು ವಿಶ್ವಾರಾಧ್ಯರ ರಥೋತ್ಸವ ಮಹಾಶಿವರಾತ್ರಿಯಾದ ಶುಕ್ರವಾರ ರಂದು ಸಂಜೆ 6 ಗಂಟೆಗೆ ಅತ್ಯಂತ ಸಂಭ್ರಮದಿಂದ ಜರುಗಿತು.
ರಥದ ಕಳಸ, ನಂದಿಕೋಲು, ಬಾಳೆಕಂಬ, ಕಬ್ಬು, ಹೂವಿನಹಾರ, ಛತ್ರ ಚಾಮರ ಹಪ್ತಾಗಿರಿಗಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಮುಂಜಾನೆ 6 ಗಂಟೆಗೆ ವಿಶ್ವಾರಾಧ್ಯರ ಮೂತರ್ಿಗೆ ಮಹಾರುದ್ರಾಭಿಷೇಕ ಜರುಗಿತು. ಮುಂಜಾನೆ ಶ್ರೀ ಅಮರೇಶ್ವರ ನೀಲಕಂಠ ಶಿವಾಚಾರ್ಯ ನೇತೃತ್ವದಲ್ಲಿ ವಿಶ್ವರಾಧ್ಯರ ಪಾಲಕಿ ಪೂಜಾ ಸಮಾರಂಭ ಹಾಗೂ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು.
ಈ ರಥೋತ್ಸವದಲ್ಲಿ ಕಾಶಿನಾಥ ಶ್ರೀಗಳು, ಸಸ್ತಾಪುರದ ಈಶ್ವರಾನಂದ ದೇವರು, ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯ ಶ್ರೀಗಳು ಸಾನಿಧ್ಯವಹಿಸಿದ್ದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಹನಮಂತ ಮಾವಿನಮರದ, ಗ್ರಾಮದ ಬಸವರಾಜ ಚಿಲ್ಲಾಪೂರ, ಶಿವು ವಾಲಿಕಾರ, ಎಸ್.ಎಂ.ಪಾಟೀಲ, ಯಲಗುರದಪ್ಪ ಬಸರಕೋಡ, ಗಿರಿಮಲ್ಲಪ್ಪ ರೇವಡಿ, ಮಹಾಗುಂಡಪ್ಪ ಸುಂಕದ, ಚನ್ನಮಲ್ಲಪ್ಪ ಮೂಲಿಮನಿ, ಮುತ್ತು ಸಂಗಳದ ಸೇರಿದಂತೆ ಕೋಟೆಕಲ್, ಮುರುಡಿ, ತಿಮ್ಮಸಾಗರ, ತೆಗ್ಗಿ, ಹಾನಾಪೂರ ಗ್ರಾಮದ ನೂರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.