ಧಾರವಾಡ 10: ಪ್ರಜಾಪ್ರಭುತ್ವ ವ್ಯವಸ್ಥೆಯ ಮಹತ್ವದ ಘಟ್ಟವಾಗಿರುವ ಚುನಾವಣೆ ಜರುಗುವ ದಿನದಂದು ಭಾರತದ ಪ್ರತಿಯೋಬ್ಬ ಮತದಾರ ತಮ್ಮ ಮನೆಯ ಹಬ್ಬದಂತೆ ಖುಷಿಯಿಂದ ಸಕ್ರೀಯವಾಗಿ, ತಪ್ಪದೆ ಭಾಗವಹಿಸಿ, ಮತದಾನ ಮಾಡಬೇಕೆಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ ಹೇಳಿದರು.
ಕನರ್ಾಟಕ ಕಾಲೇಜು ಆವರಣದಲ್ಲಿ ಜಿಲ್ಲಾ ಸ್ವೀಪ್ ಕಾರ್ಯಕ್ರಮದಡಿ ಆಯೋಜಿಸಿದ್ದ, ಚಿತ್ರಕಲಾ ಶಿಬಿರ ಉದ್ಘಾಟಿಸಿ, ಮಾತನಾಡಿದರು.
ಮತದಾನ ಭಾರತದ ಪ್ರತಿಯೋಬ್ಬ ವಯಸ್ಕ ಪ್ರಜೆಗೆ ನೀಡಿರುವ ಸಂವಿಧಾನಾತ್ಮಕ ಹಕ್ಕು ಇದನ್ನು ಕರ್ತವ್ಯದಂತೆ ಪಾಲಿಸಬೇಕು. ಅಭಿವೃದ್ಧಿ ಸ್ಥಿರ ಸಕರ್ಾರ, ಉತ್ತಮ ನಾಯಕತ್ವ ಮತ್ತು ದೀರ್ಘಕಾಲಿನ ಏಳ್ಳಿಗೆ, ಚುನಾವಣೆ ಫಲಿತಾಂಶ ಪ್ರಮುಖ ಕಾರಣವಾಗಿದೆ.
ಸಾರ್ವತ್ರಿಕ ಚುನಾವಣೆಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಮತದಾರರು ತೋರುವ ಹುರುಪು, ಹುಮ್ಮಸ್ಸು, ಅಭಿಮಾನ ಮತ್ತು ಸಕ್ರೀಯತೆಯನ್ನು ನಗರ ಪ್ರದೇಶ, ಅದರಲ್ಲೂ ವಿದ್ಯಾವಂತ ಮತದಾರರು ತೋರುತ್ತಿಲ್ಲ. ಆದ್ದರಿಂದ ಪ್ರತಿ ಕುಟುಂಬದ ಸದಸ್ಯರು ಚುನಾವಣಾ ದಿನಗಳಂದು ತಪ್ಪದೆ ತಮ್ಮ ಹೆಸರಿರುವ ಮತದಾನ ಕೇಂದ್ರಗಳಿಗೆ ಹೋಗಿ ಮತದಾನ ಮಾಡುವ ವಾತಾವರಣ, ಮನಸ್ಥತಿ ಉಂಡಾಗುವಂತೆ ಮಾಡಬೇಕಾಗಿದೆ.
ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾರರ ಜಾಗೃತಿಗಾಗಿ ವಿದ್ಯಾಥರ್ಿಗಳು ಸೇರಿದಂತೆ ವಿವಿಧ ಜನ ಸಮುದಾಯಗಳಿಗೆ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ. ಚಿತ್ರಕಲೆ ಮೂಲಕ ಪ್ರತಿಭಾವಂತರ ಮತದಾರರ ಮನಸ್ಥಿತಿ ಬದಲಾಗಿ, ಭಾಗವಹಿಸುವಂತೆ ಪ್ರೇರೆಪಿಸುವಂತೆ ಮಾಡಬೇಕೆಂದು ಚಿತ್ರಕಲಾವಿದರಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಾತನಾಡಿ, ಇಂದಿನ ಚಿತ್ರಕಲಾ ಸ್ಪಧರ್ೆಯಲ್ಲಿ ಮೂಡಿಬರುವ ಚಿತ್ರಗಳನ್ನು ಅವಳಿನಗರದ ಜನನಿಬಿಡ ಪ್ರದೇಶದ ಒಂದು ಪ್ರಮಾನ ಗೊಡೆ ಮೇಲೆ ಅಂಟಿಸಿ, ಆ ಮೂಲಕ ಮತದಾರರ ಜಾಗೃತಿ ಶ್ರಮಿಸಲಾಗುತ್ತದೆ. ವಿಜೇತ ಚಿತ್ರಕಲಾವಿದರಿಗೆ ಬಹುಮಾನ ಮತ್ತು ಗೌರವಧನ ನೀಡಲಾಗುವುದು ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕ ಗಜಾನನ.ಬಿ.ಮುನ್ನಿಕೇರಿ ಅವರು ಸ್ವಾಗತಿಸಿದರು. ಕೆ.ಎಂ.ಶೇಖ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಲ್.ಹಂಚಾಟೆ ವಂದಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರಿಕಟ್ಟಿ, ಎಸ್.ಎಂ.ಹುಡೆದಮನಿ, ವಿದ್ಯಾ ನಾಡಿಗೇರ, ವಿಷಯ ಪರಿವೀಕ್ಷಕರಾದ ಬಿ.ಬಿ.ದುಬ್ಬನಮರಡ್ಡಿ ಉಪಸ್ಥಿತರಿದ್ದರು.
ಬಿ.ವಾಯ್.ಭಜಂತ್ರಿ ಮತ್ತು ಕೆ.ಎಂ.ಶೇಖ ಅವರು ಶಿಬಿರ ನಿದರ್ೇಶಕರಾಗಿ ಕಾರ್ಯ ಮಾಡಿದರು.
ಚಿತ್ರಕಲಾ ಸ್ಪಧರ್ೆಯಲ್ಲಿ ಚಿತ್ರಕಲಾ ಶಿಕ್ಷಕರು, ಕಾಲೇಜು ವಿದ್ಯಾಥರ್ಿಗಳು ಮತ್ತು ಚಿತ್ರಕಲಾ ಶಾಲೆ ವಿದ್ಯಾಥರ್ಿಗಳು, ಪ್ರೌಢಶಾಲಾ ವಿದ್ಯಾಥರ್ಿಗಳು ಸೇರಿದಂತೆ ಸುಮಾರೂ 200ಕ್ಕೂ ಹೆಚ್ಚು ವಿದ್ಯಾಥರ್ಿಗಳು ಭಾಗವಹಿಸಿದ್ದರು.