ಕಲಿಕಾ ಹಬ್ಬವನ್ನು ಕಲಿಕೆಯ ರೂಪದಲ್ಲಿ ಆಚರಿಸಿ: ನವೀನ ಜಿಗಜಿನ್ನಿ
Celebrate the festival of learning in the form of learning: Naveen Jigajinni
ಮಹಾಲಿಂಗಪೂರ 05: ಕಲಿಕೆಯನ್ನು ಉತ್ಸವ ರೂಪದಲ್ಲಿ ಆಚರಿಸುವ ಉದ್ದೇಶದಿಂದ ಆಯೋಜಿಸಲಾಗುವ ಕಾರ್ಯಕ್ರಮವೇ ಕಲಿಕಾ ಹಬ್ಬವೆಂದು ಸಿ ಆರ್ ಪಿ ನವೀನ್ ಜಿಗಜಿನ್ನಿ ಹೇಳಿದರು. ಸಮೀಪದ ಢವಳೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಮಹಾಲಿಂಗಪೂರ ಹಾಗೂ ಮದಭಾವಿ ಕ್ಲಸ್ಟರ್ ಮಟ್ಟದ ಕಲಿಕಾಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಕಲಿಕೆಯ ಮೇಲಿನ ಆಸಕ್ತಿ, ಸೃಜನಶೀಲತೆ, ಆತ್ಮವಿಶ್ವಾಸ ಮತ್ತು ಸಹಕಾರ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಈ ಹಬ್ಬವನ್ನು ಶಾಲಾ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತದೆ,
ಪಾಠ ಪುಸ್ತಕಗಳ ಮಿತಿಯನ್ನು ಮೀರಿ, ಅನುಭವಾಧಾರಿತ ಹಾಗೂ ಚಟುವಟಿಕೆ ಆಧಾರಿತ ಕಲಿಕೆಗೆ ಒತ್ತು ನೀಡುವುದು ಕಲಿಕಾ ಹಬ್ಬದ ಪ್ರಮುಖ ಆಶಯವಾಗಿದೆ, ಕಲಿಕಾ ಹಬ್ಬವು ಮಕ್ಕಳಲ್ಲಿರುವ ಅಡಗಿದ ಪ್ರತಿಭೆಯನ್ನು ಹೊರತಂದು ಕಲಿಕೆಯನ್ನು ಸಂತೋಷದಾಯಕ ಅನುಭವವನ್ನಾಗಿ ರೂಪಿಸಿದ ಶೈಕ್ಷಣಿಕ ಉತ್ಸವವಾಗಿದ್ದು, ಕಲಿಕೆ ಎಂದರೆ ಬದುಕಿಗೆ ದಾರಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಮುಖ್ಯಗುರು ಡಿ ಎಂ ಮಹಾಜನ್, ಪಿಡಿಓ ಸಿದ್ದರಾಮೇಶ ಕುಂದರಗಿಮಠ, ರೂಪಾ ಗುರವ, ಹಣಮಂತ ಮಾರಾಪೂರ, ಎಂ ಡಿ ನರಗಟ್ಟಿ, ಶಿವಾನಂದ ಪಟ್ಟೇದ,ಅಶ್ವಿನಿ ಬಡಿಗೇರ, ಪಿ ಎಂ ಬ್ಯಾಕೋಡಿ, ರೇಖಾ ಕುರುಬಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 