ಲೋಕದರ್ಶನ ವರದಿ
ಯಲಬುರ್ಗಾ 05: ಶಾಂತಿ ಸುವ್ಯವಸ್ಥೆಗೆ ಹೆಸರಾದಂತಹ ಪಟ್ಟದ ಇದಾಗಿದೆ ಇಲ್ಲಿ ಎಲ್ಲಾ ಧರ್ಮದವರು ಒಂದಾಗಿ ಹಿಂದೂ ಮುಸ್ಲಿಂರು ಭಾವೈಕ್ಯೆತೆಯಿಂದ ಆಚರಿಸುತ್ತಾ ಬಂದಿದ್ದು ಅದು ಈ ಹಬ್ಬದಲ್ಲಿಯೂ ಮುಂದುವರೆಯಬೇಕು ಎಂದು ಸಿಪಿಐ ರಮೇಶ ರೊಟ್ಟಿ ಹೇಳಿದರು.
ಪಟ್ಟಣದ ಪೋಲಿಸ್ ಠಾಣೆಯಲ್ಲಿ ಬಕ್ರೀದ್ ಹಾಗೂ ಗಣೇಶ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಕ್ರೀದ್ ಹಬ್ಬವನ್ನು ಆಚರಣೆ ಮಾಡುವ ವೇಳೆ ಶಾಂತಿ, ಸೌಹಾರ್ದತೆ ಕಾಪಾಡಬೇಕು ಹಾಗೂ ಯಾವುದೇ ಪ್ರಾಣಿಗಳನ್ನು ಬಲಿಕೊಡಬಾರದು ಯಾವುದೇ ಗಲಾಟೆಗಳಿಗೆ ಅವಕಾಶ ನೀಡಬಾರದು ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಕೋಮು ಗಲಬೆಗಳಾಗುವಂತಹ ಪೋಸ್ಟ್ ಗಳನ್ನು ಹಾಕಬಾರದು ನಮ್ಮ ಪೋಲಿಸ್ ಇಲಾಖೆ ಎಲ್ಲಾ ಸಾಮಾಜಿಕ ಜಾಲತಾಣದ ಮೇಲೆ ಹದ್ದಿನ ಕಣ್ಣು ಇಟ್ಟಿರುತ್ತೇವೆ ಆದ್ದರಿಂದ ಎಲ್ಲರೂ ಶಾಂತಿಯುತವಾಗಿ ಹಬ್ಬವನ್ನು ಆಚರಿಸಬೇಕು ಎಂದರು.
ಯಲಬುಗರ್ಾ ಠಾಣೆಯ ಪಿಎಸ್ಐ ಬಸವರಾಜ ಅಡವಿಭಾವಿ ಮಾತನಾಡಿ ಮುಂಬರುವ ಬಕ್ರೀದ್ ಹಾಗೂ ಗಣೇಶ ಹಬ್ಬಗಳು ಎರಡನ್ನು ಎಲ್ಲರೂ ಶಾಂತಯುತವಾಗಿ ಆಚರಿಸಬೇಕು ಹಾಗೂ ಗಣೇಶ ಹಬ್ಬದಲ್ಲಿ ಡಿಜೆಗೆ ಅವಕಾಶವಿಲ್ಲಾ ಮತ್ತು ಪಟಾಕಿಗಳನ್ನು ಸಿಡಿಸಿ ಶಬ್ದ ಮಾಲಿನ್ಯ ಮಾಡುವ ಬದಲು ಯಾವುದಾದರು ಕಲಾ ತಂಡಗಳನ್ನು ತಂದು ಕಾರ್ಯಕ್ರಮಗಳನ್ನು ಮಾಡುವದು ಉತ್ತಮ ಎಂದರು.
ಬೇವೂರು ಪಿಎಸ್ಐ ಆಂಜನೇಯ ಮಾತನಾಡಿ ಯಾವುದೇ ಕಾರಣಕ್ಕೂ ಪಿಓಪಿ ಗಣೇಶ ಮೂತರ್ಿಗಳನ್ನು ಉಪಯೋಗಿಸದೆ ಮಣ್ಣಿನಿಂದ ತಯಾರಿಸಿದ ಗಣೇಶ ಮೂತರ್ಿಗಳನ್ನು ಉಪಯೋಗಿಸಬೇಕು ಇದರಿಂದ ಪರಿಸರದ ಮೇಲಾಗುವ ದುಸ್ಪರಿಣಾಮಗಳನ್ನು ತಡೆಗಟ್ಟಬಹುದು ಎಂದರು.
ಈ ಸಂದರ್ಭದಲ್ಲಿ ಕುಕನೂರು ಪಿಎಸ್ಐ ಜಿ ಎಸ್ ರಾಘವೇಂದ್ರ, ಪೆದೆಗಳಾದ ತಮ್ಮನಗೌಡ ಪೂಜಾರ, ಪಪಂ ಸದಸ್ಯರಾದ ಬಸವಲಿಂಗಪ್ಪ ಕೊತ್ತಲ, ಮುಖಂಡರಾದ ವೀರಣ್ಣ ಹುಬ್ಬಳ್ಳಿ, ಮುಸ್ಲಿಂ ಸಮಾಜದ ತಾಲೂಕ ಅದ್ಯಕ್ಷ ಮೈಬೂಸಾಬ ಮಕಾಂದಾರ, ಎಮ್ ಎಪ್ ನದಾಫ್, ಇಮಾಮ್ ಹೊಸಮನಿ, ಅಕ್ತರಸಾಬ ವಣಗೇರಿ, ಬುಡ್ನೇಸಾಬ ಧಪೆದಾರ, ಗೌಸುಸಾಬ ಕನಕಗಿರಿ, ಶಿವಾನಂದ ಬಣಕಾರ, ಯಮನೂರಪ್ಪ ಕೆಂಪಳ್ಳಿ, ಅಲ್ಲಾಸಾಬ ಬಳೂಟಗಿ, ಇಮಾಮಸಾಬ ಹೊಸಮನಿ, ಶಮಿಸುದ್ದಿನ್ ಖಾಜಿ, ಎ ಸಿ ಕಾಲಿಮಿಚರ್ಿ ಸೇರಿದಂತೆ ಅನೇಕರು ಹಾಜರಿದ್ದರು.