ಲೋಕದರ್ಶನ ವರದಿ
ಶಿರಹಟ್ಟಿ 29: ಹಬ್ಬಗಳ ಆಚರಣೆ ನೆಪದಲ್ಲಿ ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿ ಕೆಣಕುವ ಕೃತ್ಯ ಎಸಗಿದರೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅಡಚಣೆ ಉಂಟುಮಾಡಿದರೆ ಅಂಥವರ ಮೇಲೆ ನಿದರ್ಾಕ್ಷಣಿಯವಾಗಿ ಕಾನೂನು ಬದ್ಧ ಕ್ರಮ ಕೈಗೊಳ್ಳುವಲಾಗುವದು ಹಾಗೂ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ಈ ನೆಲದಲ್ಲಿ ಅಹಿತಕರ ಘಟನೆ ನಡೆಯದ ಹಾಗೆ ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸೋಣ ಎಂದು ಸಿ.ಪಿ.ಐ ಆರ್.ಎಚ್.ಕಟ್ಟಿಮನಿ ಹೇಳಿದರು.
ಅವರು ಪಟ್ಟಣದ ತಾಲೂಕ ಪಂಚಾಯತಿ ಸಾಮಥ್ರ್ಯ ಸೌಧದಲ್ಲಿ ನಡೆದ ಗಣೇಶೋತ್ಸವ ಮತ್ತು ಮೋಹರಂ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿದರು. ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತಿಕವಾಗಿವೆ. ಅವುಗಳ ಆಚರಣೆಯಲ್ಲಿ ಸಂಪ್ರದಾಯಕ್ಕೆ ಧಕ್ಕೆ ಬರದಂತೆ ಆಚರಿಸುವದು ಬಹುಮುಖ್ಯವಾದುದು. ಇನ್ನೂ ಹಬ್ಬಗಳ ಆಚರಣೆಯಲ್ಲಿ ದುಂದುವೆಚ್ಚ ಮಾಡದೆ ಆ ಹಣವನ್ನು ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ಥರ ನೆರುವಿಗೆ ನೀಡುವಂತೆ ಸಲಹೆ ಮಾಡಿದರು.
ನಂತರ ಪಿ.ಎಸ್.ಐ ಬಸವರಾಜ ತಿಪ್ಪರಡ್ಡಿ ಮಾತನಾಡಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪಿಸುವ ಮಂಡಳಿಗಳು ಅದಕ್ಕೆ ಸಮಬಂಧಪಟ್ಟ ಎಲ್ಲ ಇಲಾಖೆಗಳ ಅನುಮತಿ ಪಡೆಯುವದು ಕಡ್ಡಾಯವಾಗಿದೆ. ಇನ್ನು ಯಾವುದೆ ಅಹಿತಕರ ಘಟನೆಗಳು ನಡೇಯದಂತೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೋಲಿಸ್ ಇಲಾಖೆಯೊಂದಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಶಾಂತಿ ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಪೋಲಿಸ್ ಬಂದೊಬಸ್ತ ಎರ್ಪಡಿಸಲಾಗಿದೆ ಮತ್ತು ಅಹಿತಕರ ಘಟನೆಗಳ ಮೇಲೆ ನಿಗಾಯಿಡಲು ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಲಾಗಿದೆ ಎಂದು ಹೇಳಿದರು.
ತಹಶೀಲ್ದಾರ ಎಲ್ಲಪ್ಪ ಗೋಣೆಣ್ಣವರ, ಪಪಂ ಸದಸ್ಯರಾದ ಸಂದೀಪ ಕಪ್ಪತ್ತನವರ, ಮಂಜುನಾಥ ಘಂಟಿ, ಪರಮೇಶ ಪರಬ, ಮುತ್ತುರಾಜ ಭಾವಿಮನಿ, ಸಿ.ಕೆ.ಮುಳಗುಂದ, ಜಾನು ಲಮಾಣಿ, ನಾಗರಾಜ ಪೋತರಾಜ, ಬುಡನಶ್ಯಾ ಮಕಾನದಾರ, ಈರಣ್ಣ ಚವ್ಹಾಣ, ಸುಧಿರ ಜಮಖಂಡಿ, ಸಂತೋಷ ಕುಬೇರ, ಈರಣ್ಣ ಕೋಟಿ, ಅಕ್ಬರ ಯಾದಗಿರಿ ಮುಂತಾದವರು ಉಪಸ್ಥಿತರಿದ್ದರು.