ಹಬ್ಬಗಳನ್ನು ಸೌಹಾರ್ದದಿಂದ ಆಚರಿಸಿ: ತಹಸೀಲ್ದಾರ್ ಸಿಂದಗಿ

Celebrate festivals with harmony: Tahsildar Sindagi

ಹಬ್ಬಗಳನ್ನು ಸೌಹಾರ್ದದಿಂದ ಆಚರಿಸಿ: ತಹಸೀಲ್ದಾರ್ ಸಿಂದಗಿ 

ದೇವರಹಿಪ್ಪರಗಿ 11: ಹಿಂದೂ ಮತ್ತು ಮುಸ್ಲಿಂ ಬಾಂಧವರು ಸೌಹಾರ್ದದಿಂದ ಮುಂಬರುವ ರಂಜಾನ್ ಹಾಗೂ ಹೋಳಿ ಹಬ್ಬವನ್ನು ಶಾಂತ ರೀತಿಯಿಂದ ಆಚರಿಸಬೇಕು. ಎಲ್ಲರೂ ಕಾನೂನು ಸುವ್ಯವ್ಯಸ್ಥೆಗೆ ಧಕ್ಕೆ ಬಾರದಂತೆ ನಡೆದು ಕೊಳ್ಳಬೇಕೆಂದು ತಹಸೀಲ್ದಾರ್ ಪ್ರಕಾಶ ಸಿಂದಗಿ ಹೇಳಿದರು. ಪಟ್ಟಣದ ಪೋಲಿಸ್ ಠಾಣೆ ಆವರಣದಲ್ಲಿ ಸೋಮವಾರದಂದು ನಡೆದ ಹೋಳಿ, ರಂಜಾನ್ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಮೊದಲಿನಿಂದಲೂ ಹಿಂದೂ-ಮುಸ್ಲಿಂ ಬಾಂಧವರಲ್ಲಿ ಶಾಂತಿ ಸೌಹಾರ್ದತ ನೆಲೆಸಿದ್ದು ಸಂತಸದ ವಿಷಯವಾಗಿದೆ ಮುಂದೆಯೂ ಇದೇ ರೀತಿ ಕಾನೂನು ಸುವ್ಯವಸ್ಥೆಗೆ ದಕ್ಕೆ ಆಗದ ಹಾಗೆ ಸರ್ಕಾರದ ಮಾರ್ಗ ಸೂಚಿಗಳನ್ನು ಪಾಲಿಸಿ ಹಬ್ಬಗಳನ್ನು ಆಚರಿಸಿ ಎಂದು ಹೇಳಿದರು. ಪಿಎಸ್‌ಐ ಬಸವರಾಜ ತಿಪ್ಪರಡ್ಡಿ ಅವರು ಮಾತನಾಡಿ, ಹೋಳಿ ರಂಜಾನ್ ಹಬ್ಬದ ಸಂದರ್ಭದಲ್ಲಿ ಎಲ್ಲರೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಹಿಂದೂ-ಮುಸ್ಲಿಂ ಬಾಂಧವರು ಶಾಂತಿ ಸೌಹಾರ್ದವಾಗಿ ಹಬ್ಬವನ್ನು ಆಚರಿಸಿ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲು ಸೂಚಿಸಿ, ಇಲಾಖೆ ಜೊತೆ ಸಹಕರಿಸಿ, ಬಣ್ಣ ಆಡುವಾಗ ನೈಸರ್ಗಿಕ ಬಣ್ಣದ ಉಪಯೋಗ ಮಾಡಿ ಎಂದರು. ಪಟ್ಟಣದ ಪ್ರಮುಖರಾದ ಮೈಹಿಬೂಬ ಹುಂಡೆಕಾರ, ವಿನೋದಗೌಡ ಪಾಟೀಲ, ರೀಯಾಜ ಯಲಿಗಾರ ಸೇರಿದಂತೆ ಹಲವಾರು ಮುಖಂಡರು ಮಾತನಾಡಿ, ಪಟ್ಟಣ ಮೊದಲಿನಿಂದಲೂ ಹಿಂದೂ-ಮುಸ್ಲಿಂ ಬಾಂಧವರು ಶಾಂತಿ ಸೌಹಾರ್ದವಾಗಿ ಹಬ್ಬಗಳನ್ನು ಆಚರಿಸುತ್ತ ಬಂದಿದ್ದಾರೆ. ಸರ್ಕಾರದ ಮಾರ್ಗ ಸೂಚಿಗಳನ್ನು ಪಾಲಿಸಿ, ಪೊಲೀಸ್ ಇಲಾಖೆಗೆ ಸಹಕಾರ ನೀಡುತ್ತೇವೆ ಎಂದು ಹೇಳಿದರು. ಪ.ಪಂ ಉಪಾಧ್ಯಕ್ಷ ರಮೇಶ ಮಸಿಬಿನಾಳ, ಸದಸ್ಯರುಗಳಾದ ಕಾಸುಗೌಡ ಬಿರಾದಾರ ಜಲಕತ್ತಿ, ಬಸೀರ ಅಹ್ಮದ್ ಬೇಪಾರಿ, ಮುಖಂಡರುಗಳಾದ ಶಂಕರಗೌಡ ಪಾಟೀಲ, ಕಾಶಿನಾಥ ತಳಕೇರಿ, ಅಜೀಜ ಯಲಿಗಾರ, ಶ್ರೀಧರ ನಾಡಗೌಡ ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು ಹಾಗೂ ಇಲಾಖೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.