ಶಾಂತಿ, ಸೌಹಾರ್ದತೆಯಿಂದ ಯುಗಾದಿ ಹಾಗೂ ರಂಜಾನ್ ಹಬ್ಬ ಆಚರಿಸಿ : ಪ್ರಸಾದ್ ಗೋಖಲೆ

Celebrate Ugadi and Ramzan with peace and harmony: Prasad Gokhale

ಶಾಂತಿ, ಸೌಹಾರ್ದತೆಯಿಂದ ಯುಗಾದಿ ಹಾಗೂ ರಂಜಾನ್ ಹಬ್ಬ ಆಚರಿಸಿ : ಪ್ರಸಾದ್ ಗೋಖಲೆ 

ಕಂಪ್ಲಿ 27: ಯಾವುದೇ ಸಮುದಾಯದ ಹಬ್ಬಗಖ ಆಚರಣೆಗಳಾಗಲಿ ಎಲ್ಲರಲ್ಲಿ ಮಾನಸಿಕ ಶಾಂತಿ,ನೆಮ್ಮದಿ ತರುವಂತಿರಬೇಕೆ ಹೊರತು ಶಾಂತಿ ಭಂಗವಾಗುತ್ತಿರಬಾರದು ಎಂದು ತೋರಣಗಲ್ಲು ಉಪವಿಭಾಗದ ಡಿವೈಎಸ್ಪಿ ಪ್ರಸಾದ ಗೋಖಲೆ ಹೇಳಿದರು. ಅವರು ಬುಧವಾರ ಸಂಜೆ ಕಂಪ್ಲಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಯುಗಾದಿ ಹಬ್ಬ ಹಾಗೂ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಈ ವರ್ಷ ಹಿಂದೂಗಳ ಪವಿತ್ರ ಹಾಗೂ ನೂತನ ವರ್ಷದ ಮೊದಲ ಹಬ್ಬ ಯುಗಾದಿ ಮತ್ತು ಮುಸ್ಲಿಂ ಸಮುದಾಯದ ಪವಿತ್ರ ಹಬ್ಬವಾದ ರಂಜಾನ್ ಹಬ್ಬಗಳು ಏಕಕಾಲದಲ್ಲಿ ಬಂದಿದ್ದು, ಎರಡು ಹಬ್ಬಗಳು ಅತ್ಯಂತ ಪವಿತ್ರವಾಗಿದ್ದು ಎಲ್ಕರೂ ಸೇರಿ ಹಬ್ಬಗಳನ್ನು ಶಾಂತಿ ಸೌಹಾರ್ಧತೆಯಿಂದ ಆಚರಿಸಿ, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೇ ಎಲ್ಲಾ ಸಮುದಾಯದವರೂ ತಮ್ಮ, ತಮ್ನ ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಸೂಚಿಸಿ ಎರೆಡು ಹಬ್ಬಗಳಿಗೆ ಅಗತ್ಯವಾದ ಬಂದೋ ಬಸ್ತ್‌ ಒದಗಿಸಲಾಗುವುದು ಎಂದರು. ಇದಕ್ಕೂ ಮುನ್ನ ಮಾತನಾಡಿದ ಎರಡು ಸಮುದಾಯಗಳ ಮುಖಂಡರು ಕಂಪ್ಲಿಯಲ್ಲಿ ಯಾವುದೇ ಹಬ್ಬಗಳಲ್ಲಿ ಅಹಿತಕರ ಸಂಘಟನೆಗಳು ಸಂಭವಿಸಿಲ್ಲ. ಸಣ್ಣ ಪುಟ್ಟ ಮಾತಿನ ಚಕಮಕಿಗಳು ಕಂಡು ಬಂದಿದ್ದರೂ ಹಿರಿಯರು ಸರಿಪಡಿಸಿದ್ದು ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಪರಸ್ಪರ ಹಬ್ಬಗಳನ್ನು ಆಚರಿಸುತ್ತೇವೆಂದರಲ್ಲದೇ ರಂಜಾನ ಹಬ್ಬದ ದಿನವಾದ ಸೋಮವಾರ ಅಥವಾ ಮಂಗಳವಾರದಂದು ಬೆಳಿಗ್ಗೆ ಮೆರವಣಿಗೆ ಸಮಯದಲ್ಲಿ ಮಧ್ಯದ ಅಂಗಡಿಗಳನ್ನು ಕೆಲವು ಸಮಯ ಬಂದ್ ಮಾಡುವಂತೆ ಮನವಿ ಮಾಡಿದರು. ಸಿ.ಪಿ.ಐ ವಾಸುಕುಮಾರ ಕೆ.ಬಿ. ಪುರಸಭೆ ಅಧ್ಯಕ್ಷ ಬಿ.ಪ್ರಸಾದ್, ಪಿಎಸ್‌ಐ ಅವಿನಾಶ್ ಕಾಂಬಳೆ ಮಾತನಾಡಿದರು.ಸಭೆಯಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು, ವಿವಿಧ ಗ್ರಾಮಗಳ ಎರಡು ಸಮುದಾಯಗಳ ಮುಖಂಡರು, ಹಾಲಿ,ಮಾಜಿ ಜನಪ್ರತಿನಿಧಿಗಳು, ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.