ಹೋಳಿ ರಂಜಾನ್ ಹಬ್ಬ ಶಾಂತಿ ಸೌಹಾರ್ದದಿಂದ ಆಚರಿಸಿ: ಸಿಪಿಐ ನಾಗರಾಜ್
ಶಿರಹಟ್ಟಿ 09: ಹೋಳಿ ಹಬ್ಬಕ್ಕೆ ಭಾರತೀಯ ಪರಂಪರೆಯಲ್ಲಿ ವಿಶೇಷವಾದ ಸ್ಥಾನವಿದ್ದು, ಈ ಹೋಳಿ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಸಿಪಿಐ ನಾಗರಾಜ್ ಮಾಡಳ್ಳಿ ಹೇಳಿದರು. ಶನಿವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜರುಗಿದ ಹೋಳಿ ಹಾಗೂ ರಂಜಾನ್ ಹಬ್ಬಗಳ ಶಾಂತಿ ಸಭೆಯಲ್ಲಿ ಮಾತನಾಡಿದರು ಶಿರಹಟ್ಟಿ ಶಾಂತಿಯ ಕೋಮು ಸೌಹಾರ್ದತೆಯ ಸ್ಥಳವಾಗಿದ್ದು, ಈ ಹಬ್ಬಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಚರಣೆ ಮಾಡಲು ನಮ್ಮ ಇಲಾಖೆಯ ಸಹಕಾರ ವಿದೆ. ಯಾರು ಕಾನೂನನ್ನ ಕೈಗೆ ತೆಗೆದುಕೊಳ್ಳದೆ ಶಾಂತ ರೀತಿಯಿಂದ ಆಚರಣೆ ಮಾಡಬೇಕು. ಯಾವುದೇ ಕಾನೂನು ಬಾಹಿರ ಚಟುವಟಿಕೆ ಕಂಡುಬಂದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಬೇರೆ ಕಡೆ ಹಬ್ಬ ಆಚರಣೆಗಿಂತ ವಿಶೇಷವಾಗಿ ಶಿರಹಟ್ಟಿಯಲ್ಲಿ ಹೋಳಿ ಹಬ್ಬವು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದು, ಸ್ಥಳೀಯ ಮುಖಂಡರು ಸೇರಿ ಮುಂದೆ ಇದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ಎಲ್ಲ ಜನಾಂಗದವರು ಸೇರಿ ಎರಡು ಹಬ್ಬಗಳನ್ನು ಆಚರಣೆ ಮಾಡಬೇಕು, ಶಾಂತಿ ಸೌಹಾರ್ದತೆ ಕಾಪಾಡಬೇಕು ಎಂದು ತಿಳಿಸಿದರು. ನಂತರ ಮಾತನಾಡಿದ ಪಿ,ಎಸ್,ಐ ಚೆನ್ನಯ್ಯ ದೇವೂರ್ ಮಾತನಾಡಿ, ಎಸ್,ಎಸ್,ಎಲ್,ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳು ಹಾಗೂ ರಂಜಾನ್ ಹಬ್ಬ ಇರುವುದರಿಂದ ಎಲ್ಲರೂ ಸೌಹಾರ್ದ ಮನೋಭಾವನೆಯಿಂದ ಆಚರಿಸಬೇಕು. ಪೊಲೀಸ್ ಇಲಾಖೆ ಸಹಾಯ ಸಹಕಾರ ನಿಮ್ಮ ಜೊತೆಗೆ ಇರುತ್ತದೆ ಎಂದರು. ಈ ಸಂದರ್ಭದಲ್ಲಿ ಪ,ಪಂ, ಸದಸ್ಯ ಪರಮೇಶ ಪರಬ, ಹಾಗೂ ಸ್ಥಳೀಯ ಮುಖಂಡರಾದ ಚಾಂದ್‌ಸಾಬ್ ಮುಳಗುಂದ, ಅಜ್ಜುಗೌಡ ಪಾಟೀಲ್, ಯಲ್ಲಪ್ಪ ಇಂಗಳಗಿ, ಪರಶುರಾಮ್ ಡೊಂಕಬಳ್ಳಿ, ನಾಗೇಶ್ ಇಂಗಳಗಿ, ವಿನಾಯಕ ಕುರಿ, ಸಂತೋಷ ಕೋಳಿ, ಫಕ್ಕಿರೇಶ್ ಲೋಹಾರ್, ಪರಮೇಶ್ ಗುಡಿಮನಿ ಹಾಗೂ ಎಸ್,ಟಿ ಕಡವಿನ್ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.