ಲೋಕದರ್ಶನ ವರದಿ
ಕೊಪ್ಪಳ 19:
ಸಂಘ, ಸಂಸ್ಥೆಗಳು, ಸೇವಾ ಸಮಿತಿಗಳು ನಾನಾ
ಸ್ಥಳಗಳಲ್ಲಿ ವಿವಿಧ ದೇವರ ಮೂತರ್ಿಗಳನ್ನು ಪ್ರತಿಷ್ಠಾಸುವುದೇ
ಅಷ್ಟೇ ಅಲ್ಲಾ ಆ ದೇವರ ಮೂತರ್ಿಗಳಿಗೆ
ಪ್ರತಿನಿತ್ಯ ಭಕ್ತಿಯಿಂದ ವಿಶೇಷ ಪೊಜೆ ನಾನಾ ಧಾಮರ್ಿಕ
ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಉತ್ಸವಗಳನ್ನು ಆಚರಿಸಬೇಕು
ಎಂದು 15ನೇ ವಾರ್ಡನ ನಗರಸಭೆ
ಸದಸ್ಯ ಚನ್ನಪ್ಪ ಕೋಟ್ಯಾಳ ಸಲಹೆ ನೀಡಿದರು.
ನಗರದ ಪಲ್ಲೇದವರ ಓಣಿಯ
ಶ್ರೀಬಸವೇಶ್ವರ ಸೇವಾ ಸಮಿತಿ, ನವರಾತ್ರಿ
ಉತ್ಸವ ಸಮಿತಿ ಕೊಪ್ಪಳ ಇವರ ವತಿಯಿಂದ ಬುಧುವಾರ
ನಗರಸಭೆ ಸದಸ್ಯರಿಗೆ ಜವಾಹರ ರಸ್ತೆಯ ವೇದಿಕೆಯಲ್ಲಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ದೇವರ ಹೆಸರಿನಲ್ಲಿ ವಿವಿಧ
ಕಾರ್ಯಕ್ರಮಗಳನ್ನು ಆಯೋಜಿಸಿ ಇಂದಿನ ಯುವ ಪೀಳಿಗೆ ದುಶ್ಚಟಕ್ಕೆ
ದಾಸರಾಗಿದ್ದಾರೆ ಇದರಿಂದಾಗಿ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಸ್ಥಾನ ಶ್ರೀಗವಿಮಠ ಅಭಿನವ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳು ಕೊಪ್ಪಳ ಹಾಗೂ ಹೊಸಪೇಟೆ ತಾಲೂಕಿನ
ಬುಕ್ಕಸಾಗರ ಮಠದ ಶ್ರೀಕರಿಸಿದ್ದೇಶ್ವರ ಶಿವಾಚಾರ್ಯರರು ಕಾರ್ಯಕ್ರಮದ
ದಿವ್ಯ ಸಾನಿಧ್ಯವಹಿಸಿದ್ದರು. ನಗರಸಭೆ ಸದಸ್ಯರಾದ 9ನೇ ವಾರ್ಡನ ಬಸಮ್ಮ ಗವಿಸಿದ್ದಪ್ಪ
ದಿವಟರ, 13ನೇ ಸಿದ್ದು ಮ್ಯಾಗೇರಿ,
15ನೇ ಚನ್ನಪ್ಪ ಕೋಟ್ಯಾಳ, 16ನೇ ಸೋಮಣ್ಣ ಹಳ್ಳಿ,
17ನೇ ಪರುಶುರಾಮ ಹುಡೇಜಾಲಿ, 18ನೇ ಸಬೀಯಾ ಆದೀಲ್
ಪಟೇಲ್, 20ನೇ ಲತಾ ಗವಿಸಿದ್ದಪ್ಪ
ಚಿನ್ನೂರ, 25ನೇ ಅರುಣ ಅಪ್ಪುಶೆಟ್ಟಿ
ಇವರನ್ನು ನಗರದ ಪಲ್ಲೇದವರ ಓಣಿಯ
ಶ್ರೀಬಸವೇಶ್ವರ ಸೇವಾ ಸಮಿತಿ, ನವರಾತ್ರಿ
ಉತ್ಸವ ಸಮಿತಿಯವರು ಗೌರವ ಪೂರ್ವಕವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪಲ್ಲೇದವರ ಓಣಿಯ ಶ್ರೀಬಸವೇಶ್ವರ ಸೇವಾ
ಸಮಿತಿ, ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷರು ಸರ್ವಸದಸ್ಯರು ಉಪಸ್ಥಿತರಿದ್ದರು.
ನಂತರ ಬಸವರಾಜ ಪಾಗದ
ಅವರ ನೇತೃತ್ವದ ಬಸವ ಬಳಗ ಸಾಂಸ್ಕೃತಿಕ
ಕಲಾ ತಂಡ ಕೊತಬಾಳ ಇವರಿಂದ
ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಶ್ರೀಕಾಂತ ಚಿಕ್ಕನಗೌಡರ ಕಾರ್ಯಕ್ರಮ ಸ್ವಾಗತಿಸಿದರು. ಮಲ್ಲಿಕಾಜರ್ುನ ಸಿದ್ನೆಕೊಪ್ಪ ನಿರೂಪಿಸಿದರು. ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷ ಬಸವರಾಜ ಪಲ್ಲೇದ ವಂದಿಸಿದರು.