ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಕುರಿತು ಕಾಯರ್ಾಗಾರ ಆಯೋಜಿಸಲಾಗುವುದು: ಬಸವರಾಜು

ಧಾರವಾಡ30:ಅಂಗವಿಕಲ ವ್ಯಕ್ತಿಗಳ ಅಧಿನಿಯಮ-2016 ಬಹು ಉಪಯುಕ್ತವಾಗಿದ್ದು, ಈ ಕುರಿತು ಅಧಿಕಾರಿಗಳಿಗೆ, ಅಂಗವಿಕಲ ವ್ಯಕ್ತಿಗಳಿಗೆ ಹಂತ ಹಂತವಾಗಿ ಮಾಹಿತಿ ಕಾಯರ್ಾಗಾರ ಆಯೋಜಿಸಲಾಗುವುದು ಎಂದು ಅಧಿನಿಯಮ ರಾಜ್ಯ ಆಯುಕ್ತ ವಿ.ಎಸ್. ಬಸವರಾಜು ಹೇಳಿದರು.

ಅವರು ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಂಗವಿಕಲ ವ್ಯಕ್ತಿಗಳಿಂದ ಅಹವಾಲು ಸ್ವಿಕರಿಸಿದ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

     ಅಧಿನಿಯಮದ ಕುರಿತು ಮಾಹಿತಿ ಹಾಗೂ ಪರಿಶೀಲನೆಗಾಗಿ ಜಿಲ್ಲಾವಾರು ಸಭೆಗಳನ್ನು ನಡೆಸಲಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಅಂಗವಿಕಲರ ಸಂಖ್ಯೆ ಹೆಚ್ಚಿರುವುದರಿಂದ ಪೂರಕ ಮೂಲಸೌಕರ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಕೋರಲಾಗಿದೆ.

   ಹೊಸ ಅಧಿನಿಯಮದ ಪ್ರಕಾರ ವಿವಿಧ ಪ್ರಮಾಣ ಮತ್ತು ಪ್ರಕಾರದ 21 ಅಂಗವಿಕಲತೆಗಳನ್ನು ಗುರುತಿಸಿಲಾಗಿದೆ. ಈ ಕುರಿತು ವೈದ್ಯರಿಗೆ ಹೆಚ್ಚಿನ ತಿಳುವಳಿಕೆ ನೀಡುವ ಅಗತ್ಯವಿದೆ. ಹುಬ್ಬಳ್ಳಿ ಕಿಮ್ಸ್ ಮತ್ತು ಧಾರವಾಡ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಈ ಕುರಿತು ಪರಿಶೀಲಿಸಲಾಗಿದ್ದು, ವೈದ್ಯರು ಸಹಕಾರ ನೀಡುತಿದ್ದಾರೆ ಎಂದು ಆಯುಕ್ತರು ಹೇಳಿದರು.

2011 ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಅಂದಾಜು 40 ಸಾವಿರ ಅಂಗವಿಕಲರಿದ್ದಾರೆ. ಅದು 2021 ರ ಹೊತ್ತಿಗೆ 60 ಸಾವಿರಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ಅಧಿನಿಯಮದ ಸಮರ್ಪಕ ಅನುಷ್ಠಾನಕ್ಕಾಗಿ ಅಗತ್ಯ ತರಬೇತಿ ನೀಡುವ ಕಾರ್ಯವಾಗಬೇಕು. ಅಂಗವಿಕಲರ ಕಲ್ಯಾಣ ಇಲಾಖೆ ತೃಪ್ತಿಕರವಾಗಿ ಕಾರ್ಯ ಮಾಡುತ್ತಿದ್ದು ಹೊಸ ಯೋಜನೆಗಳನ್ನು ರೂಪಿಸಲು ಕ್ರಮಕೈಗೊಳ್ಳಲಾಗಿದೆ.

ಅಂಗವಿಕಲರ ಪ್ರಮಾಣಪತ್ರ ದುರುಪಯೋಗವಾಗದಂತೆ ತಡೆಯಲು ಸೂಕ್ತ ಕ್ರಮ ತೆಗೆದುಕೋಳ್ಳಲಾಗಿದೆ. ಅಂಗವಿಕಲರಿಗೆ ಇರುವ ಆದಾಯ ತೆರಿಗೆ ವಿನಾಯಿತಿ ಕುರಿತು ಆಯೋಗದಿಂದ ಸ್ಪಷ್ಟ ನಿದರ್ೆಶನ ನೀಡಲಾಗುವುದು ಎಂದು ಹೇಳಿದರು.

     ಪತ್ರಿಕಾಗೋಷ್ಠಿಯಲ್ಲಿ ಅಧಿನಿಯಮದ ಸಹಾಯಕ ಆಯುಕ್ತ ಪದ್ಮನಾಭ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಉಪನಿದರ್ೆಶಕ ಬಸವರಾಜ ವರವಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಆರ್.ಎಸ್. ಮುಳ್ಳುರ, ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಕೆ.ಎಂ.ಅಮರನಾಥ ಉಪಸ್ಥಿತರಿದ್ದರು.