ಕೊಪ್ಪಳ25: ನಿರಂತಕ ಇದೊಂದು ಕನ್ನಡ ಪರ ಕಾಳಜಿ ಇರುವ ಸಂಸ್ಥೆ ( ಎನ್ ಜಿ ಓ ) ಆಗಿದ್ದು, 2017 ರಲ್ಲಿ ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಮಾನವ ಸಂಪನ್ಮೂಲ ವೃತ್ತಿ ನಿರತರ ಕನ್ನಡ ಸಮ್ಮೇಳನವನ್ನು ಯಶಸ್ವಿಯಾಗಿ ಸಂಯೋಜಿಸಿದ್ದರು.
ಈ ವರ್ಷವೂ ಸಹ ದ್ವಿತೀಯ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನವನ್ನು ಬೆಂಗಳೂರಿನ ಹೋಟಲ್ ಕ್ಯಾಪಿಟೋಲ್ನಲ್ಲಿ ಆಯೋಜಿಸಿದ್ದರು. ನಾಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಪೂರಕ ವಾತಾವರಣ ನಿಮರ್ಿಸುತ್ತಾ , ಸಂಸ್ಥೆಯಲ್ಲಿ ಕನ್ನಡ ಭಾಷೆಗೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಉದ್ಯಮಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು.
ಈ ಸಮ್ಮೇಳನದ ಅಂಗವಾಗಿ ನಮ್ಮ ನಾಡು ನಮ್ಮ ಸಂಸ್ಥೆ -2018 ಗಾಗಿ ಅಜರ್ಿಗಳನ್ನು ಆಹ್ವಾನಿಸಿದ್ದರು, ನಮ್ಮ ಕಾಖರ್ಾನೆಯ ವತಿಯಿಂದ ಈ ಪ್ರಶಸ್ತಿಗಾಗಿ ಅಜರ್ಿ ಸಲ್ಲಿಸಿತ್ತು.
ಕಿಲರ್ೊಸ್ಕರ್ ಕಾಖರ್ಾನೆಯು ಸ್ಥಾಪಿತವಾದಾಗಿನಿಂದಲೂ ತನ್ನ ವ್ಯಾಪಾರ - ವಹಿವಾಟಿನ ಜೊತೆಯಲ್ಲಿಯೇ ಕನ್ನಡ ಭಾಷೆಯನ್ನು ತನ್ನ ದಿನನಿತ್ಯದ ವ್ಯವಹಾರದಲ್ಲಿ, ಆಡಳಿತ ವ್ಯವಸ್ಥೆಯಲ್ಲಿ ಅನುಷ್ಠಾನಗೊಳಿಸುತ್ತಾ ಬಂದಿದ್ದು ಹಾಗೆಯೇ ಕನ್ನಡ ಬೆಳವಣಿಗೆಗೆ ಪೂರಕ ವಾತಾವರಣವನ್ನು ಸೃಷ್ಠಿಸಿದುದರ ಹಿನ್ನೆಲೆಯಲ್ಲಿ ನಮ್ಮ ನಾಡು - ನಮ್ಮ ಸಂಸ್ಥೆ - 2018 ಪ್ರಶಸ್ತಿಗೆ ಭಾಜನವಾಗಿದೆ.
ನ.24ರಂದು ಬೆಂಗಳೂರಿನ ಹೋಟಲ್ ಕ್ಯಾಪಿಟೋಲ್ನಲ್ಲಿ ನೆಡೆದ ಸಮಾರಂಭದಲ್ಲಿ ಕಿಲರ್ೊಸ್ಕರ್ ಕಾಖರ್ಾನೆಯ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಉಪಾಧ್ಯಕ್ಷರಾದ ಪಿ ನಾರಾಯಣ ಮತ್ತು ವ್ಯವಸ್ಥಾಪಕರಾದ ಶ್ರೀ ರವಿಕುಮಾರ್ ಯಾದವ್ ಇವರುಗಳು ಈ ಪ್ರಶಸ್ತಿಯನ್ನು ಸ್ವೀಕರಿಸಿರುತ್ತಾರೆ.