ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ದೀಪದಾನಹೀಬೀಳ್ಕೊಡುವ ಸಮಾರಂಭ

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ದೀಪದಾನಹೀಬೀಳ್ಕೊಡುವ ಸಮಾರಂಭ  Candle lighting ceremony for SSLC students

ಲೋಕದರ್ಶನ ವರದಿ 

ಯರಗಟ್ಟಿ 12 : ಸಮೀಪದ ಮುಗಳಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ 2025ಹಿ26ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ದೀಪದಾನ ಹಾಗೂ ಬೀಳ್ಕೊಡುವ ಸಮಾರಂಭವನ್ನು ಅತ್ಯಂತ ಭಕ್ತಿಭಾವದಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಿದರು. ವಿದ್ಯಾರ್ಥಿಗಳ ಮುಂದಿನ ಜೀವನ ಪಥ ಬೆಳಗಲಿ ಎಂಬ ಆಶಯದಿಂದ ಶಿಕ್ಷಕರು ಹಾಗೂ ಅತಿಥಿಗಳು ದೀಪದಾನ ಮಾಡುವ ಮೂಲಕ ಅವರಿಗೆ ಶುಭ ಹಾರೈಸಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಐ. ಜಿ. ಸುಬ್ಬಾಪುರಮಠ ಮಾತನಾಡಿ" ವಿದ್ಯಾರ್ಥಿಗಳು ಶಿಸ್ತು, ಪರಿಶ್ರಮ ಮತ್ತು ಧೈರ್ಯವನ್ನು ಅಳವಡಿಸಿಕೊಂಡು ತಮ್ಮ ಗುರಿಗಳನ್ನು ಸಾಧಿಸಬೇಕು ಎಂದು ಪ್ರೇರಣಾದಾಯಕವಾಗಿ ಹೇಳಿದರು. ಎಸೆಸೆಲ್ಸಿ ಪರೀಕ್ಷೆ ವಿದ್ಯಾರ್ಥಿಗಳ ಜೀವನದ ಮಹತ್ವದ ಹಂತವಾಗಿದ್ದು, ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಿ ಉತ್ತಮ ಫಲಿತಾಂಶ ಗಳಿಸಬೇಕು ಎಂದು ಅವರು ಸಲಹೆ ನೀಡಿದರು. 

ಮುಖ್ಯ ಅತಿಥಿಗಳಾದ ಎಸ್‌.ಆರ್‌. ಮಾಳಿ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಕ್ಷಣದ ಮಹತ್ವವನ್ನು ಅರಿತುಕೊಂಡು ಮುಂದೆ ಸಾಗಬೇಕು. ಗುರುಗಳ ಮಾರ್ಗದರ್ಶನ ಮತ್ತು ತಂದೆ-ತಾಯಿಯ ಆಶೀರ್ವಾದದಿಂದ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. 

ನಂತರ ಡಾ. ಬಿ.ಎಂ. ಬರಗಾಲಿರವರು  ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನ, ಶ್ರಮ ಮತ್ತು ಸಮಯದ ಸದ್ವಿನಿಯೋಗ ಅತ್ಯಂತ ಅಗತ್ಯ ಎಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ಗುರಿಯತ್ತ ದೃಢ ಸಂಕಲ್ಪದಿಂದ ಸಾಗಿದರೆ ಯಶಸ್ಸು ಖಚಿತ ಎಂದು ತಿಳಿಸಿದರು. 

ತದನಂತರ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಉದ್ದಂಡ ಗಾಂವಕರ ಅವರು ಮಾತನಾಡಿ, "ಶಾಲೆ ವಿದ್ಯಾರ್ಥಿಗಳ ಜೀವನಕ್ಕೆ ಭದ್ರ ಅಡಿಪಾಯವನ್ನು ನಿರ್ಮಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಹಾಗೂ ಶಾಲೆಯನ್ನು ಎಂದಿಗೂ ಮರೆಯಬಾರದು. ಶಿಕ್ಷಣವೆಂಬುವುದು ಹುಲಿ ಹಾಲು ಇದ್ದಂತೆ, ಅದನ್ನ ಕುಡಿದವರೆಲ್ಲರೂ ಘರ್ಜಿಸಲೇಬೇಕು. ಜೀವನದಲ್ಲಿ ಎಷ್ಟು ಎತ್ತರಕ್ಕೆ ಹೋದರೂ ಮೂಲಗಳನ್ನು ಮರೆಯದಿರುವುದು ಮಹತ್ವದ್ದು ಎಂದು ಹೇಳಿದರು. ವಿದ್ಯಾರ್ಥಿಗಳು ಉತ್ತಮ ನಡತೆ ಮತ್ತು ಶಿಸ್ತಿನೊಂದಿಗೆ ಸಮಾಜಕ್ಕೆ ಮಾದರಿಯಾಗಬೇಕು ಎಂದು ಕಿವಿಮಾತು ಹೇಳಿದರು. 

ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ನೆನಪುಗಳನ್ನು ಹಂಚಿಕೊಂಡು ಗುರುಗಳಿಗೆ ಕೃತಜ್ಞತೆ ಸಲ್ಲಿಸಿದರು.  ಈ ಸಂದರ್ಭದಲ್ಲಿ ಶಾಲೆಗೆ ಭೂ ಧಾನಿಗಳಾದ ಗೋಪಾಲಗೌಡ ಗಂಗರೆಡ್ಡಿ, ಗ್ರಾ.ಪಂ. ಸದಸ್ಯರಾದ ಪದ್ಮಾವತಿ ಮುರಗಟ್ಟಿ, ಬಿ ಆರ್ ಸಿ ಗುರುಗಳಾದ ಬಿ ಎನ್ ಬ್ಯಾಳಿ,  

ಎಪಿಎಂಸಿ ಸದಸ್ಯರಾದ ಲಕ್ಷ್ಮಣ ದಳವಾಯಿ, ಲಕ್ಷ್ಮಣ ದಳವಾಯಿ, ಮಾರುತಿ ಇಟ್ನಾಳ, ಪತ್ರೆಪ್ಪ ಪಟ್ಟಣಶೆಟ್ಟಿ, ಬಸವರಾಜ ಗಣಿ, ಬಸವರಾಜ ದಳವಾಯಿ, ಬಸವರಾಜ ಇಟಗೌಡ್ರ, ಪರಶು ಕತ್ತಿ, ವಿಠ್ಠಲ ಮಾಲದಿನ್ನಿ, ಹಾಗೂ ಹಿರಿಯರು, ಯುವಕರು, ಶಾಲಾ ಸಹ ಶಿಕ್ಷರುಗಳು ಮತ್ತಿತರರು ಉಪಸ್ಥಿತರಿದ್ದರು.