ಕ್ಯಾನ್ಸರ್ ಒಂದು ಕಾಯಿಲೆಯಾಗಿದ್ದು, ಮೊದಲೇ ಪತ್ತೆ ಹಚ್ಚಿದರೆ ಅದನ್ನು ಗುಣಪಡಿಸಬಹುದು

Cancer is a disease that can be cured if detected early

ಕ್ಯಾನ್ಸರ್ ಒಂದು ಕಾಯಿಲೆಯಾಗಿದ್ದು, ಮೊದಲೇ ಪತ್ತೆ ಹಚ್ಚಿದರೆ ಅದನ್ನು ಗುಣಪಡಿಸಬಹುದು  

ಬ್ಯಾಡಗಿ 04: ಮನುಕುಲದ ಬಹುದೊಡ್ಡ ಶತ್ರುವಾಗಿರುವ ಕ್ಯಾನ್ಸರ್ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ  ಫೆಬ್ರವರಿ 4 ರಂದು ಪ್ರಪಂಚದಾದ್ಯಂತ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ ಎಂದು ಡಾ. ಪುಟ್ಟರಾಜ ಹೇಳಿದರು.ಮಂಗಳವಾರ ಅವರು ಪಟ್ಟಣದ ಸರ್ಕಾರಿ ಆಸ್ಪತ್ರೆಯ ಸಭಾಭವನದಲ್ಲಿ ವಿಶ್ವ ಕ್ಯಾನ್ಸರ್ ಜಾಗೃತಿ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕ್ಯಾನ್ಸರ್ ಇಂದು ಪ್ರಪಂಚದಾದ್ಯಂತ ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಮತ್ತು ಅದರ ಹೆಚ್ಚುತ್ತಿರುವ ಪ್ರಕರಣಗಳನ್ನು ಗಮನಿಸಿದರೆ, ಈ ದಿನದ ಮಹತ್ವ ಇನ್ನಷ್ಟು ಹೆಚ್ಚಾಗುತ್ತದೆ. ವಿಶ್ವ ಕ್ಯಾನ್ಸರ್ ದಿನದ ಉದ್ದೇಶವು ಈ ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮಾತ್ರವಲ್ಲದೆ, ಅದರ ತಡೆಗಟ್ಟುವಿಕೆ, ಚಿಕಿತ್ಸೆ ಮತ್ತು ನಿಯಂತ್ರಣಕ್ಕಾಗಿ ಸಂಯೋಜಿತ ಪ್ರಯತ್ನಗಳನ್ನು ಉತ್ತೇಜಿಸಲಾಗುತ್ತದೆ.ಕ್ಯಾನ್ಸರ್ ಒಂದು ಕಾಯಿಲೆಯಾಗಿದ್ದು, ಮೊದಲೇ ಪತ್ತೆ ಹಚ್ಚಿದರೆ ಅದನ್ನು ಗುಣಪಡಿಸಬಹುದು.  

ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ಜನರಿಗೆ ಕ್ಯಾನ್ಸರ್ನ ಲಕ್ಷಣಗಳ ಬಗ್ಗೆ ತಿಳಿದಿರುವುದಿಲ್ಲ, ಇದರಿಂದಾಗಿ ರೋಗವು ಮುಂದುವರಿದ ಹಂತವನ್ನು ತಲುಪುತ್ತದೆ ಮತ್ತು ಚಿಕಿತ್ಸೆಯು ಕಷ್ಟಕರವಾಗುತ್ತದೆ. ಆದ್ದರಿಂದ, ಕ್ಯಾನ್ಸರ್ ಜಾಗೃತಿ ಮೂಡಿಸುವುದು ಬಹಳ ಮುಖ್ಯವೆಂದರು.ಡಾ. ಬಸವರಾಜ ಗೊಂದಿ ಮಾತನಾಡಿ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸುವ ಹಿಂದಿನ ಉದ್ದೇಶವೆಂದರೆ ಕ್ಯಾನ್ಸರ್ಗೆ ಸಂಬಂಧಿಸಿದ ಎಲ್ಲಾ ಅಂಶಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಈ ರೋಗವನ್ನು ತಪ್ಪಿಸಲು ಅವರಿಗೆ ಸರಿಯಾದ ಮಾಹಿತಿ ಮತ್ತು ಸಂಪನ್ಮೂಲಗಳನ್ನು ಒದಗಿಸುವುದು.  

ವಿಶ್ವ ಕ್ಯಾನ್ಸರ್ ದಿನದ ಪ್ರಾಥಮಿಕ ಗುರಿ ಕ್ಯಾನ್ಸರ್ ನಿಂದ ಉಂಟಾಗುವ ಅನಾರೋಗ್ಯ ಮತ್ತು ಸಾವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುವುದಾಗಿದೆ.ಎಂದು ಹೇಳಿದರು, ಈ ಜಾಗೃತಿ ಕಾರ್ಯಕ್ರಮದಲ್ಲಿ ಡಾ, ಸುರೇಶ ಗುಂಡ್ಪಲ್ಲಿ, ಡಾ, ಮಹೇಶ ಭಜಂತ್ರಿ, ಡಾ ಚೇತನ,ಡಾ,ವಿಜಯಕುಮಾರ,ಡಾ,ಚಂದ್ರಶೇಖರ ಹೊತ್ತಿಗೌಡರ ಎಚ್ ಟಿ ಪ್ರಕಾಶ್, ಸೇರಿದಂತೆ ಇನ್ನಿತರರಿದ್ದರು,