ವಿಜಯಪುರ 15: ಕಟ್ಟಡ ಕಾಮರ್ಿಕರಿಗೆ ಸಕರ್ಾರದಿಂದ ವಿವಿಧ ರೀತಿಯ ಸೌಲಭ್ಯಗಳಿದ್ದು,
ಕಟ್ಟಡ ಕಾಮರ್ಿಕರು ಈ ಸವಲತ್ತುಗಳ ಸದುಪಯೋಗ ಪಡೆದುಕೊಳ್ಳುವಂತೆ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ
ಸದಾನಂದ ನಾಯಕ್ ಅವರು ಕರೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾಮರ್ಿಕ ಇಲಾಖೆ,
ಜಿಲ್ಲಾ ನ್ಯಾಯವಾದಿಗಳ ಸಂಘ, ಕನರ್ಾಟಕ ಈಶ್ವರಲಿಂಗ ಕಟ್ಟಡ ಮತ್ತು ನಿಮರ್ಾಣ ಕಾಮರ್ಿಕರ ಕ್ಷೇಮಾಭಿವೃದ್ದಿ
ಸಂಘ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ
ನಗರದ ಅಲ್ಲಾಪೂರ ಓಣಿಯಲ್ಲಿರುವ ಕಾಮರ್ಿಕ ಸಮುದಾಯ ಭವನದಲ್ಲಿ ಕಾಮರ್ಿಕರಿಗಾಗಿ ಏರ್ಪಡಿಸಿದ ಕಾನೂನು
ಕಾಯರ್ಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ, ಕಟ್ಟಡ ಕಾಮರ್ಿಕರು ವಿವಿಧ ಸವಲತ್ತುಗಳನ್ನು ಪಡೆದುಕೊಳ್ಳಲು
ಕಾಮರ್ಿಕ ಇಲಾಖೆಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡು ಸಕರ್ಾರದ ವಿವಿಧ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು
ಎಂದು ಹೇಳಿದರು.
ಬೆಳಗಾವಿ ವಿಭಾಗದ ಸಹಾಯಕ ಕಾಮರ್ಿಕ ಆಯುಕ್ತ ನಾಗೇಶ
ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ 2007 ರಿಂದ ಮಾಚರ್್ 2018ರವರೆಗೆ 63714 ಜನ ನೋಂದಾಯಿಸಿಕೊಂಡಿದ್ದಾರೆ.
ಒಟ್ಟು 5856 ಕಾಮರ್ಿಕರು ವಿವಿಧ ರೀತಿಯ ಸವಲತ್ತುಗಳನ್ನು ಪಡೆದುಕೊಂಡಿದ್ದಾರೆ. 212 ಜನ ಅಂತ್ಯ ಸಂಸ್ಕಾರ ಹಾಗೂ ಅನುಗ್ರರಾಶಿ ಧನ ಸಹಾಯವನ್ನು
ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ
ಸದಸ್ಯ ಕಾರ್ಯದಶರ್ಿ ಪ್ರಭಾಕರ್ರಾವ್, ಸಿವ್ಹಿಲ್ ನ್ಯಾಯಾಧೀಶ ಚಂದನ ಎಸ್. ಶ್ರೀನಾಥ, ಸತೀಶ ಕ.ಎಜಿ.
ಬಿ.ಎಂ.ಜಿರಾಳೆ, ಕಾಮರ್ಿಕ ಅಧಿಕಾರಿ ಅಶೋಕ ಬಾಳಿಗಟ್ಟಿ, ಕ್ಷೇಮಾಭಿವೃದ್ದಿ ಸಂಘದ ಪ್ರಶಾಂತ ದೇಶಪಾಂಡೆ,
ಪರಸನಗೌಡ ಪಾಟೀಲ, ಮೋಹನಸಿಂಗ್ ರಜಪುತ ಸೇರಿದಂತೆ ಇತರರು ಉಪಸ್ಥಿತರಿದ್ದರು.