ಸ್ವಚ್ಚತಾ ಕಾರ್ಯಕ್ಕೆ ಆಧುನಿಕ ಯಂತ್ರಗಳನ್ನು ಉಪಯೋಗಿಸಲು ಕರೆ

ಲೋಕದರ್ಶನ ವರದಿ

ಧಾರವಾಡ 26: ಪೌರ ಕಾಮರ್ಿಕರ ದಿನಾಚರಣೆಯ ಅಂಗವಾಗಿ ಪಾಲಿಕೆಯ ಕೇಂದ್ರ ಕಛೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ವಲಯ ಕಛೇರಿ ಸಂಖ್ಯೆ 3 ರ ಸಹಾಯಕ ಆಯುಕ್ತರಾದ ಸಂತೋಷ ಅನಿಶೆಟ್ಟರ್ ಸ್ವಚ್ಚತಾ ಕಾರ್ಯಕ್ಕೆ ಆಧುನಿಕ ಯಂತ್ರಗಳನ್ನು ಉಪಯೋಗಿಸಲು ಕರೆ ನೀಡಿದರು. ಅಲ್ಲದೆ ಗುತ್ತಿಗೆದಾರರು ನೀಡಿದ ಸುರಕ್ಷಾ ಕವಚ, ಸಮವಸ್ತ್ರ, ಧರಿಸಿ ಕೆಲಸ ಮಾಡಲು ಹೇಳಿದರು, ತಮ್ಮ ಆರೋಗ್ಯದ ಕಾಳಜಿಯೊಂದಿಗೆ ನಿಮ್ಮ ಮಕ್ಕಳ ಶಿಕ್ಷಣಕ್ಕೆ ವತ್ತು ನೀಡಿ, ಅಂದರೆ ಮಾತ್ರ ಆಥರ್ಿಕವಾಗಿ ಸಾಮಾಜಿಕವಾಗಿ ಉನ್ನತಿಯಾಗಲು ಸಾಧ್ಯ ಎಂದರು. 

ಪಾಲಿಕೆಯ 9 ನೇ ವಾಡರ್ಿನ ಸದಸ್ಯ ಶಂಕರ ಶೇಳಕೆ ಮಾತನಾಡಿ ಪೌರಕಾಮರ್ಿಕರಿಗೆ ಬೇಡಿಕೆಗಳನ್ನು ಪಾಲಿಕೆಯಲ್ಲಿ ಚಚರ್ಿಸಿ ಸಹಾಯ ಸಹಕಾರ ನೀಡುವುದಾಗಿ ಆಶ್ವಾಸನೆ ಗೈದರು, 

ಲಕ್ಷ್ಮವ್ವ ಕೊಂಡಪಲ್ಲಿ, ಯಮನವ್ವ ಇಂಚನಾಳ, ಹನಮವ್ವ ಮಾದರ, ದೇವಪ್ಪ ಪೂಜಾರ, ಗುರವ್ವ ಮಾಳೆ, ಪೇದವ್ವ ಸಿಂಗನಳ್ಳಿ, ಶಿವಪ್ಪ ಹೆಗಡೆ, ಫಕೀರವ್ವ ತಿಲರ್ಾಪೂರ, ಚನ್ನವ್ವ ಬಾಬು, ನೀಲವ್ವ ಮಾದರ, ಪೀರಪ್ಪ ಅಡಗಿಮನಿ, ಫಕೀರಪ್ಪ ನಡುಗೇರಿ, ಹೊನ್ನಪ್ಪ ಸಿಂಗನಪಲ್ಲಿ, ಲಕ್ಷವ್ವ ಕರೆಪಾತ, ಕೆ.ಬಿ.ಹೊಡೆರ, ಶಿವರಾಮ ಸೂರ್ಯವಂಶಿ, ಎನ್.ಜಿ.ಗಿಡಬಡೆ, ನಿವೃತ್ತಿ ಹೊಂದಿದ ಪೌರ ಕಾಮರ್ಿಕರಗಳಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. 

ವೆಂಕಟೇಶ ಸಗಬಾಲ, ಪೌರ ಕಾಮರ್ಿಕರ ಸಂಘದ ಗೌರವಾಧ್ಯಕ್ಷ ಫಕೀರಪ್ಪ ನಡುಗೇರಿ, ಗಂಗಪ್ಪ ಹೆಗಡೆ, ಸಹಾಯಕ ಆಯುಕ್ತರುಗಳಾದ ಜಿ.ಎನ್. ಗುತ್ತಿ, ಎಮ್.ಬಿ.ಸಬರದ, ಹಿರಿಯರಾದ ಯಲ್ಲಪ್ಪ ಬ್ಯಾಟನ್ನವರ, ಚಂದ್ರಣ್ಣ ಬ್ಯಾಟನ್ನವರ, ರಾಜು ಸಣ್ಣಮನಿ, ರುದ್ರಪ್ಪ ಮೇಲಿನಮನಿ, ಹನುಮಂತ ಇಂಚನಾಳ, ಬಸವರಾಜ ರಾಮದುರ್ಗ, ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಡಿ ಗ್ರುಪ್ ನೌಕರರ ಸಂಘದ ಸದಸ್ಯರಾದ ಮಂಜುನಾಥ ಕೊಂಡಪಲ್ಲಿ, ಮಲ್ಲಿಕಾಜರ್ುನ ಬಿಜಾಪೂರ, ಹನುಮಂತ ಬೆಟಗೇರಿ, ದ್ಯಾಮಣ್ಣ ಮಾದರ, ರಮೇಶ ಮಾಳಗಿಮನಿ, ನಾಗೇಶ ಮಾದರ, ಅಶೋಕ ಮಾದರ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹು-ಧಾ-ಮ-ಪಾಲಿಕೆಯ ಅಭಿಯಂತಕರಾದ ಆರ್.ಎಮ್. ಕುಲಕಣರ್ಿ ಪ್ರಾಸ್ತಾವಿಕ ವಾಗಿ ಮಾತನಾಡಿದರು,  ಕಾರ್ಯಕ್ರಮ ನಿರೂಪಣೆ ಸಂಗಮೇಶ ಮಾದರ, ವಂದನಾರ್ಪಣೆ ಗಂಗಾಧರ ಬೆನಕಟ್ಟಿ ಮಾಡಿದರು.