ಆರೋಗ್ಯವಂತ ಭಾರತ ನಿಮರ್ಾಣಕ್ಕೆ ಕೈ ಜೋಡಿಸಲು ಕರೆ

ವಿಜಯಪುರ 03:  ಸಕರ್ಾರ ಜನಸಾಮಾನ್ಯರಿಗೆ ರೂಪಿಸಿರುವ ಕಾನೂನು ಸುವ್ಯವಸ್ಥೆ ಹಾಗೂ ಆರೋಗ್ಯ ಯೋಜನೆಗಳನ್ನು ಗ್ರಾಮೀಣ ಭಾಗದ ಜನರಿಗೆ ತಿಳುವಳಿಕೆ ಮೂಡಿಸುವ ಮೂಲಕ ಆರೋಗ್ಯವಂತ ಭಾರತ ನಿಮರ್ಾಣಕ್ಕೆ ಎಲ್ಲಾ ಇಲಾಖೆಗಳು ಕೈಜೊಡಿಸಬೇಕು ಎಂದು ನ್ಯಾಯವಾದಿಗಳು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಪ್ರಭಾಕರ್ರಾವ್ ಹೇಳಿದರು. 

ಭಾರತ ಸರಕಾರದ ಕ್ಷೇತ್ರ ಜನಸಂಪರ್ಕ ಕಾಯರ್ಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಜಯಪುರ ಹಾಗೂ ಶಿಶು ಅಭಿವೃದ್ಧಿ ಯೋಜನೆ, ಇಂಡಿ  ಇವರ ಸಂಯುಕ್ತ ಆಶ್ರಯದಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದ ಕಸ್ತೂರಿ ಬಾ ಗಾಂಧಿ ವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಜರುಗಿದ ಆಯುಷ್ಮಾನ್ ಭಾರತ ಹಾಗೂ ಬೇಟಿ ಬಚಾವ ಮತ್ತು ಬೇಟಿ ಪಡಾವ ಕುರಿತು ಏರ್ಪಡಿಸಿದ್ದ ವಿಶೇಷ ಜಾಗೃತಿ  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 

ಕಾನೂನಿನ ಪ್ರಕಾರ ಹೆಣ್ಣುಮಕ್ಕಳ ಮದುವೆಯ ವಯಸ್ಸು 18 ವರ್ಷ ಮೆಲ್ಪಟಿರಬೇಕು ಹಾಗೂ ಗಂಡು ಮಕ್ಕಳ ಮದುವೆಯ ವಯಸ್ಸು 21 ವರ್ಷ ದಾಟಿರಬೇಕು, ಅಂದಾಗಲೆ ಅವರು ಮಾನಸಿಕ ಮತ್ತು ಬೌದ್ದಿಕ ಬೆಳವಣಿಗೆ ಹೊಂದಿರುತ್ತಾರೆ, ಈ ನೀಯಮವನ್ನು ಮೀರಿ ಯಾರಾದರೂ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮದುವೆ ಮಾಡಿಸಲು ಮುಂದಾದಲ್ಲಿ ಅವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು, ಯಾರಿಗಾದರು ಇಂತಹ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ನೇರವಾಗಿ 1098 ಉಚಿತ ಸಹಾಯವಾಣಿಗೆ ಕರೆ ಮಾಡಿದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನೆರವಿಗೆ ಧಾವಿಸುತ್ತಾರೆ ಎಂದು ಹೇಳಿ, ಮಹಿಳೆಯರ ಮತ್ತು  ಮಕ್ಕಳ ಬಗ್ಗೆ ಇರುವ ವಿವಿಧ ಉಚಿತ ಕಾನೂನು ಸಲಹೆಗಳನ್ನು ತಿಳಿಸಿಕೊಟ್ಟರು.    

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಬಿಎಲ್ಡಿಇ ಆಯುವರ್ೆದಿಕ ಮಹಾವಿದ್ಯಾಲಯದ ಸಹಪ್ರಾದ್ಯಾಪಕಿ ಡಾ. ವಾಸಂತಿ ಪಾಟೀಲ ಮಾತನಾಡಿ, ಹೆಣ್ಣು ಮಕ್ಕಳು ಪ್ರತಿದಿನ ಸರಿಯಾದ ರೀತಿಯ ಆಹಾರ ಕ್ರಮವನ್ನು ಅನುಸರಿಸುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ಆಧುನಿಕ ಕಾಲದ ಭರಾಟೆಗೆ ಸಿಲುಕಿ ರಾಸಾಯನಿಕ ಭರಿತ ವಸ್ತುಗಳನ್ನು ಉಪಯೋಗಿಸದೆ, ಸಹಜ, ನೈಸಗರ್ಿಕವಾದ ಪದಾರ್ಥಗಳ ಬಳಕೆ ಮಾಡುವ ಮೂಲಕ ತಮ್ಮ ಮುಖ, ಚರ್ಮದ ಹಾಗೂ ವ್ಯಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಅಲಹೆ ನೀಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೋಸಮನಿ ಮಾತನಾಡಿ, ವಿವಿಧ ವಿಮಾ ಹಾಗೂ ಆರೋಗ್ಯ ಯೋಜನೆಗಳ ಕುರಿತು ತಿಳಿಸಿಕೊಟ್ಟರು. ಸ್ಚಚ್ಛ ಭಾರತ ಅಭಿಯಾನದ ಜಿಲ್ಲಾ ಸಮಾಲೋಚಕ ಸಿದ್ದಣ್ಣ ಪೂಜಾರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪಯೋಜನಾ ಸಮನ್ವಯ ಅಧಿಕಾರಿ ಜೆ.ಟಿ. ತಳಕೇರಿ, ಬೇಟಿ ಬಚಾವ ಬೇಟಿ ಪಡಾವ ನೋಡಲ್ ಅಧಿಕಾರಿ ನಿರ್ಮಲಾ ದೊಡ್ಡಮನಿ, ಮಹಿಳಾ ಶಕ್ತಿ ಕೇಂದ್ರದ ಜಿಲ್ಲಾ ಸಂಯೋಜಕಿ ಯಶೋಧಾ ಜೋಷಿ ಮಾತನಾಡಿದರು. 

ವಿಜಯಪುರ ಕ್ಷೇತ್ರ ಜನಸಂಪರ್ಕ ಕಾಯರ್ಾಲಯದ ಮುರಳಿಧರ ಕಾರಭಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಆಯುಷ್ಮಾನ್ ಭಾರತ ಮತ್ತು ಭಾರತ ಸರಕಾರದ ವಿವಿಧ ಆರೋಗ್ಯ ಯೋಜನೆಯ ಕುರಿತು ವಿವರಣೆ ನೀಡಿದರು.   

ಆಯುಷ್ಮಾನ್ ಭಾರತ ಕಾರ್ಯಕ್ರಮ ಅಂಗವಾಗಿ ಏರ್ಪಡಿಸಿದ ವಿವಿಧ ಸ್ಪಧರ್ೆಯಲ್ಲಿ ವಿಜೇತರಾದವರಿಗೆ ಪ್ರಥಮ,ದ್ವತಿಯ ಹಾಗೂ ತೃತಿಯ ಬಹುಮಾನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅದ್ಯಕ್ಷ ಕಲ್ಯಾಣಿ ಗಣವಲಗಾ, ಉಪಾಧ್ಯಕ್ಷೆ ಸುನಂದಾ ವಾಲಿಕಾರ್ ಹಾಗೂ ಸದಸ್ಯರು, ಪಂಚಾಯತ್ ಅಭಿವೃದ್ದಿ ಅಧಿಕಾರಿ ಮಹೇಶ ನಾಯಕ,  ಡಬ್ಲೂ.ಸಿ.ಡಿ.ಯ ಸಂಯೋಜಕ ಕೃಷ್ಣ ಮೂತರ್ಿ, ರಾಜೇಶ್ವರಿ ಸಿಳ್ಳಿನ್, ಎಸ್.ಎಸ್.ಪಾಟೀಲ, ಮಹಿಳಾ ಶಕ್ತಿ ಕೇಂದ್ರದ ಸಂಯೋಜಕಿ ಶಿವಲಿಂಗಮ್ಮ, ಶಿಕ್ಷಣ ಸಂಯೋಜಕ ಎಮ್.ಡಿ.ಡೇಂಬ್ರೆ,  ಶಿಕ್ಷಣ ಮತ್ತು ಆರೋಗ್ಯ ಇಲಾಖೆ, ಇತರೆ ವಿವಿಧ ಇಲಾಖೆಗಳ ಸಿಬ್ಬಂದಿಗಳು, ಗ್ರಾಮದ ಮಹಿಳೆಯರು, ಅಂಗನವಾಡಿ, ಆಶಾ ಕಾರ್ಯಕತರ್ೆಯರು, ವಿದ್ಯಾಥರ್ಿಗಳು ಮತ್ತಿತರರು ಉಪಸ್ಥಿತರಿದ್ದರು. ಪ್ರೀಯಾಂಕ ಕೊಷ್ಠಿ ನಿರೂಪಿಸಿ, ಎ. ಬಿ ಕವಲಗಿ ಸ್ವಾಗತಿಸಿ, ವಂದಿಸಿದರು. ಬೇಟಿ ಬಚಾವ ಬೇಟಿ ಪಡಾವ ಹಾಗೂ ಬಾಲ್ಯ ವಿವಾಹ ನಿಷೇಧ ಕುರಿತು ಪ್ರತಿಜ್ಞಾ ವಿಧಿ ಭೋದಿಸಲಾಯಿತು.