ಕುಷ್ಠರೋಗ ನಿಮರ್ೂಲನೆಗೆ ಕೈ ಜೋಡಿಸಲು ಕರೆ

ಲೋಕದರ್ಶನ ವರದಿ

ವಿಜಯಪುರ 01:ಸಮಾಜದಲ್ಲಿ ಕುಷ್ಠರೋಗಿಗಳನ್ನು ಗೌರವದಿಂದ ಕಾಣುವ ಜೊತೆಗೆ, ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಮೂಲಕ ಈ ರೋಗವನ್ನು ನಿಮರ್ೂಲನೆ ಮಾಡಲು ನಾವೆಲ್ಲರೂ ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಕರೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿಮರ್ೂಲನಾ ಕಾಯರ್ಾಲಯ, ವಿವಿಧ ನಸರ್ಿಂಗ್ ಕಾಲೇಜ್ಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡ ಸ್ಪರ್ಶ ಕುಷ್ಠ ಅರಿವು ಆಂದೋಲನ ಜನಜಾಗೃತಿ ಜಾಥಾಕ್ಕೆ  ಚಾಲನೆ ನೀಡಿ ಮಾತನಾಡಿದರು. 

ಈ ರೋಗಕ್ಕೆ ನಾವರ್ೇ ದೇಶದ ವಿಜ್ಞಾನಿ ಆರ್ಮರ್ ಹ್ಯಾನ್ಸನ್ 1983ರಲ್ಲಿ ಕಾಯಿಲೆಯನ್ನು ಕಂಡು ಹಿಡಿದು, ಈ ರೋಗವು ಮೈಕೋಬ್ಯಾಕ್ಟೇರಿಯಾ ಲೆಪ್ರೆ ಎಂಬ ಸೂಕ್ಷಾಣುವಿನಿಂದ ಬರುವ ಕಾಯಿಲೆಯಾಗಿದ್ದು, ಈ ರೋಗಕ್ಕೆ ಈಗ ಚಿಕಿತ್ಸೆ ಲಭ್ಯವಿದ್ದು, ಸಾಕಷ್ಟು ರೋಗಿಗಳ ಸಂಖ್ಯೆ ಇಳಿಮುಖವಾಗಿದ್ದು, ಎಲ್ಲರೂ ಕೈ ಜೋಡಿಸುವುದರಿಂದ ಈ ರೋಗವನ್ನು ಸಮಾಜದಿಂದ ನಿಮರ್ೂಲನೆ ಮಾಡಬಹುದಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಂದ್ರ ಕಾಪ್ಸೆ, ಸಂಘ-ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಪೀಟರ್ ಅಲೆಕ್ಸಾಂಡರ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ರಾಜೇಶ್ವರಿ ಗೊಲಗೇರಿ, ಡಾ.ಜ್ಯೋತಿ ಪಾಟೀಲ, ಡಾ.ಮಂಜುನಾಥ ಮಸಳಿ, ಸುರೇಶ ಹೊಸಮನಿ, ಆಯ್.ಸಿ.ಅಸ್ಕಿ, ಆರ್.ಪಿ.ಪಾಟೀಲ, ಡಿ.ಕೆ.ತೇಲಿ, ರಾಮು ಹೊನವಾಡ, ಕುಮಾರ ರಾಠೋಡ, ಅಲ್ಲಾಬಕ್ಷ ಹುಲ್ಯಾಳ, ಶ್ರೀಕಾಂತ ಕುಲಕಣರ್ಿ, ಉದಯ ಮಂಜುನಾಥ ಉಪ್ಪಿನ ಸೇರಿದಂತೆ ವಿವಿಧ ನಸರ್ಿಂಗ್ ಕಾಲೇಜ್ ವಿದ್ಯಾಥರ್ಿಗಳು, ಇತರರು ಉಪಸ್ಥಿತಿರಿದ್ದರು. ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಆರ್.ಬಾಗವಾನ್ ನಿರೂಪಿಸಿ ವಂದಿಸಿದರು.