ಲೋಕದರ್ಶನ ವರದಿ
ವಿಜಯಪುರ 10:ನಗರದಲ್ಲಿ ಶೇಕಡ 40ರಷ್ಟು ಪ್ರದೇಶಗಳಿಗೆ ಪಾಲಿಕೆಯ ಕಸ ಸಂಗ್ರಹಣೆ ಗಾಡಿಗಳು ತಲುಪುತ್ತಿಲ್ಲವಾದ್ದರಿಂದ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಸಂಗ್ರಹಣೆ ಹೆಚ್ಚಿ ಅನೈರ್ಮಲ್ಯ ವಾತಾವರಣಕ್ಕೆ ಕಾರಣವಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಕೂಡಲೆ ಗಮನಹರಿಸಿ ನಗರದ ಎಲ್ಲೆಡೆ ಕಸ ಸಂಗ್ರಹ ವಾಹನಗಳು ತಲುಪುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ಸದಸ್ಯರಾದ ಲಕ್ಷ್ಮೀ ಬಾಗಪ್ಪ ಕನ್ನೊಳ್ಳಿ ಹೇಳಿದರು.
ಕೇಂದ್ರ ವಾತರ್ಾ ಮತ್ತು ಪ್ರಸಾರ ಸಚಿವಾಲಯದ, ಕ್ಷೇತ್ರ ಜನಸಂಪರ್ಕ ಕಾಯರ್ಾಲಯ, ವಿಜಯಪುರ ಹಾಗೂ ಮಹಾನಗರ ಪಾಲಿಕೆ, ಶಿಶು ಅಭಿವೃದ್ಧಿ ಯೋಜನೆ, ಎಸ್.ಎಸ್.ಪದವಿ ಪೂರ್ವ ಕಾಲೇಜು, ಬಿ.ಎಲ್.ಡಿ.ಇ. ಎಸ್.ಬಿ.ಎಸ್. ಮಹಿಳಾ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್.ಎಸ್.ಎಸ್.ಘಟಕ ಮತ್ತು ಹೆಣ್ಣು ಮಕ್ಕಳ ಪ್ರೌಡ ಶಾಲೆ, ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಎಸ್.ಬಿ.ಎಸ್. ಮಹಿಳಾ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ ಇಂದು ಹಮಿಕೊಳ್ಳಲಾಗಿದ್ದ ಸ್ವಚ್ಛ ಭಾರತ ಮಿಷನ್ (ನಗರ) ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ನಾವು ನಮ್ಮ ದೇಹವನ್ನು ಸ್ಚಚ್ಛವಾಗಿಟ್ಟುಕೊಳ್ಳುವಂತೆ ಸುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಇದರಲ್ಲಿ ಮಹಿಳೆಯರ ಪಾತ್ರ ಹೆಚ್ಚಿನದಿದ್ದು ಮುಂದಿನ ಎರಡು ವರ್ಷಗಳಲ್ಲಿ ವಿಜಯಪುರ ನಗರವನ್ನು ಶುಚಿ ಮತ್ತು ಸುಂದರವನ್ನಾಗಿ ಮಾಡಲು ಗುರಿಯಿಟ್ಟುಕೊಳ್ಳಲಾಗಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು. ವಿಜಯಪುರ ಮಹಾನಗರ ಪಾಲಿಕೆ ಮಹಾಪೌರರಾದ ಶ್ರೀದೇವಿ ಬಾಪು ಲೋಗಾಂವಿ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಬಿ ಎಲ್ ಡಿ ಇ ಸಂಸ್ಥೆಯ ಆಡಳಿತಾಧಿಕಾರಿಗಳಾದ ಬಿ ಆರ್ ಪಾಟೀಲ, ನಿಸರ್ಗವನ್ನು ಕಾಪಾಡಿಕೊಳ್ಳದಿದ್ದರೆ ಜೀವ ಸಂಕುಲಕ್ಕೆ ಉಳಿಗಾಲವಿಲ್ಲ. ಆದ್ದರಿಂದ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವ ಮೂಲಕ ಎಲ್ಲಾ ಜೀವ ಸಂತತಿಯನ್ನು ಉಳಿಸಬೇಕಿದೆ. ಇದರಲ್ಲಿ ಮಾನವನ ಪಾತ್ರ ಬಹಳ ಮುಖ್ಯವಾಗಿದ್ದು ಪ್ರತಿಯೊಬ್ಬರು ಜವಾಬ್ದಾರಿಯಿಂದ ಕಸ ವಿಲೇವಾರಿಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು. ಕೇವಲ ಕಾನೂನು ಕಟ್ಟಳೆಗಳಿಂದ ಎಲ್ಲವನ್ನು ಸಿರಿಪಡಿಸಲು ಸಾಧ್ಯವಿಲ್ಲ. ನಿತ್ಯ ಜೀವನದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದರು.
ಪಾಲಿಕೆ ಪರಿಸರ ಅಭಿಯಂತರರಾದ ಜಗದೇಶ್ ಎಸ್ ಆರ್ ಮಾತನಾಡಿ, ಹೆಚ್ಚಿನ ಪ್ರಮಾಣದಲ್ಲಿ ಕಸ ಉತ್ಪತ್ತಿಯಾಗುತ್ತ್ತಿರುವುದರಿಂದ ಭೂಮಿಗೆ ಕಸವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ನೈಸಗರ್ಿಕ ವಿಕೋಪಗಳು ಹೆಚ್ಚುತ್ತಿದೆ. ಆದ್ದರಿಂದ ಸಾರ್ವಜನಿಕರು ಅನಾವಶ್ಯಕ ತ್ಯಾಜ್ಯವನ್ನು ಕಡಿಮೆಗೊಳಿಸಬೇಕು ಎಂದು ಮನವಿ ಮಾಡಿದರು. ಕಸ ನಿರ್ವಹಣೆಗಾಗಿಯೇ ಪಾಲಿಕೆಯಿಂದ 14 ರಿಂದ 16 ಕೋಟಿ ರೂಪಾಯಿ ಹಣ ವ್ಯಯವಾಗುತ್ತಿದ್ದು ಇದನ್ನು ತಗ್ಗಿಸಿ ಸಾರ್ವಜನಿಕರ ತೆರಿಗೆ ಹಣವನ್ನು ಇತರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕಿದೆ ಎಂದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಕಲಾವತಿ ಕಾಂಬಳೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಮಹಿಳೆಯರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಕ್ಷೇತ್ರ ಪ್ರಚಾರಾಧಿಕಾರಿಗಳಾದ ಜಿ ತುಕಾರಾಮಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ ಬಿ ಎಸ್ ಮಹಿಳಾ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪಿ ಎಸ್ ಹೂಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿಗಳಾದ ಅನ್ನಪೂರ್ಣ ಕುಬಕಟ್ಟಿ, ಎಸ್ ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಜೆ ವಿ ನಾವದಗಿ, ಬಿ.ಎಲ್.ಡಿ.ಇ ಹೆಣ್ಣು ಮಕ್ಕಳ ಪ್ರೌಢ ಶಾಲೆಯ ಮುಖ್ಯಗುರುಗಳಾದ ವಿ ಎಸ್ ತಿಮ್ಮನಗೌಡರ, ಬಿ.ಬಿ.ಹಚಡದ, ಗೀರಿಶ ಅಕಮಂಚಿ,ನರೇಶ ಪೋತೆದ್ದಾರ, ಶ್ವೇತಾ ಘಂಟಿ ಹಾಗೂ ಅಂಗನವಾಡಿ ಕಾರ್ಯಕರ್ತರು, ಮಹಿಳಾ ಸಂಘದ ಸದಸ್ಯರು ವಿದ್ಯಾಧರ್ಿಗಳು ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿದ್ಯಾಥರ್ಿಗಳಿಂದ ಸ್ವಚ್ಛ ಭಾರತ ಅಭಿಯಾನದ ಕುರಿತು ಜಾಗೃತಿ ಜಾಥಾ ಕಾರ್ಯಕ್ರಮ ನೆರವೇರಿತು. ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಿ ಕೆ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಮುರಳಿಧರ್ ಕಾರಬಾರಿ ಸ್ವಾಗತಿಸಿದರು.