ಕನ್ನಡದ ಶಾಸ್ತ್ರೀಯ ಸ್ಥಾನಮಾನದ ಲಾಭ ಪಡೆಯಲು ಕನ್ನಡಿಗರಿಗೆ ಕರೆ

ವಿಜಯಪುರ, ನ.1 : ಜ್ಞಾನಪೀಠ ಪ್ರಶಸ್ತಿಗಳ ಸಾಮ್ರಾಟರಾದ ಕನ್ನಡಿಗರು ತಮಗೆ ದಕ್ಕಿದ ಕನ್ನಡದ ಶಾಸ್ತ್ರೀಯ ಸ್ಥಾನ-ಮಾನದ ಸಂಪೂರ್ಣ ಲಾಭ ಪಡೆಯಬೇಕಾಗಿದೆ ಎಂದು ತೋಟಗಾರಿಕೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಸಿ.ಮನಗೂಳಿ ಅವರು ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿಂದು 63ನೇ ಕನರ್ಾಟಕ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರೆವೇರಿಸಿ, ವಿವಿಧ ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಕರುನಾಡಿನ ಕರುಣಾಮಯಿಗಳಾದ ನಾವು ಕನ್ನಡವನ್ನು ವ್ಯವಹಾರಿಕ ಭಾಷೆಯಾಗಿ, ಆಡಳಿತ ಭಾಷೆಯಾಗಿ ನೂರಕ್ಕೆ ನೂರರಷ್ಟು ಜಾರಿ ತರಬೇಕಾಗಿದೆ. ವ್ಯಾಪಾರಿಕರಣಗೊಳ್ಳುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದ ಹೂಬಳ್ಳಿ ಬೆಳೆಸಬೇಕಾಗಿದೆ ಎಂದು ಹೇಳಿದರು. 

ಅದರಂತೆ ಕನ್ನಡದ ನಾಮಫಲಕಗಳನ್ನು ಕಡ್ಡಾಯಗೊಳಿಸಿ ಕನ್ನಡ ಜಾಗೃತಿ ಮಾಡಬೇಕಾಗಿದೆ. ಪ್ರತಿ ಮನೆ-ಮನೆಯಲ್ಲಿ ಮಕ್ಕಳಲ್ಲಿನ ಇಂಗ್ಲೀಷ ಪದಗಳ ವ್ಯಾಮೋಹ ಬಿಡಿಸಿ ಕನ್ನಡವೆಂದರೆ ಕೀಳರಿಮೆಯಲ್ಲ ಅದು ತಾಯಿಯಷ್ಟೇ ಪವಿತ್ರವಾದದ್ದು ಎಂದು ತಿಳಿಹೇಳಬೇಕಾಗಿದೆ. ಕನ್ನಡದ ಅನ್ನ ತಿನ್ನುವ ಮುನ್ನ ಕನ್ನಡವನ್ನು ಕಲಿ" ಎಂದು ಹೇಳಬೇಕಾಗಿದೆ. ಕೇವಲ ನವ್ಹೆಂಬರ್ ಕನ್ನಡಿಗರಾಗದೇ ಜೀವಮಾನದ ಕೊನೆಯ ಉಸಿರು ಇರುವವರೆಗೂ ಕನ್ನಡವನ್ನೇ ಉಸಿರಾಡುವ ಕನ್ನಡಿಗರಾಗಬೇಕಾಗಿದೆ ಎಂದು ಹೇಳಿದರು. 

ಕನ್ನಡ ಬೇಕಾಗಿರುವುದು ಕೇವಲ ಕೂಲಿಕಾಮರ್ಿಕರಿಗೆ ಅಲ್ಲ, ತರಕಾರಿ ಮಾರುವವರಿಗಲ್ಲ, ರೈತರಿಗಲ್ಲ, ಕನ್ನಡ ಶಾಲಾ ಮಾಸ್ತರರಿಗಲ್ಲ, ಸಾಹಿತಿಗಳಿಗಲ್ಲ, ಪತ್ರಕರ್ತರಿಗಲ್ಲ ಅದು ಪ್ರತಿಯೊಬ್ಬ ಕನ್ನಡಿಗನಿಗೂ ಅವಶ್ಯವಿದೆ ಎಂದ ಅವರು,ಪ್ರತಿಯೊಬ್ಬರ ಮನೆ-ಮನೆಯಲ್ಲಿ ಮನ-ಮನದಲ್ಲಿ ನಿತ್ಯೋತ್ಸವದಂತೆ ಈ ನಾಡಹಬ್ಬ ನಡೆಯಬೇಕಿದೆ. ಪ್ರತಿಯೊಬ್ಬರ ಎದೆಗೂಡಿನಲ್ಲಿ ಈ ನಮ್ಮ ಕನ್ನಡ ನುಡಿ ಮೂಡಬೇಕಾಗಿದೆ ಏಕೆಂದರೆ ಯಾರು ಸದಾ ಜಾಗೃತಿಯಿಂದ ಕನ್ನಡ ನಾಡನ್ನು ಸಂರಕ್ಷಿಸುವವರೋ ಅವರೇ ನಿಜವಾದ ಕನ್ನಡಿಗರು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಹೇಳಿದರು. 

ವಿಶ್ವ ಸಂಸ್ಥೆಯ ಭಾಷಾ ವಿಭಾಗದ ಒಂದು ವರದಿಯ ಪ್ರಕಾರ ಪ್ರಪಂಚದಲ್ಲಿ ಒಟ್ಟು 6000 ಭಾಷೆಗಳಿವೆ. ಅದರಲ್ಲಿ ಪ್ರಸಿದ್ಧ ಸಮೃದ್ಧ ಬಾಷೆಗಳಲ್ಲಿ ನಮ್ಮ ಹೆಮ್ಮೆಯ ಕನ್ನಡ ಭಾಷೆಯು ಮೊದಲು 30 ಭಾಷೆಗಳಲ್ಲಿ ಒಂದಾಗಿರುವುದು ನಾವೆಲ್ಲರೂ ಹೆಮ್ಮೆ ಪಡಬೇಕಾದ ಸಂಗತಿಯಾಗಿದೆ. "ನಮ್ಮ ಕನ್ನಡ ಭಾಷೆ ಸಾಯುವ ಭಾಷೆ ಅಲ್ಲ, ಸೂರ್ಯ ಚಂದ್ರರಿರುವ ತನಕ ಬಾಳುವ ಭಾಷೆ"ಯಾಗಿದೆ ಎಂದು ಹೇಳಿದರು.

          ಕನರ್ಾಟಕ ರಾಜ್ಯೋತ್ವವದ ಈ ಶುಭ ಸಂದರ್ಭದಲ್ಲಿ ಏಕೀಕರಣಕ್ಕಾಗಿ ಹೋರಾಟ ಮಾಡಿದ ನಮ್ಮವರೆ ಆದ ಶ್ರೀ ಆಲೂರು ವೆಂಕಟರಾಯರು, ಶ್ರೀ ಗಂಗಾಧರರಾವ ದೇಶಪಾಂಡೆರವರು, ಶ್ರೀ ಎಸ್. ನಿಜಲಿಂಗಪ್ಪನವರು, ಮುದವಿಡು ಕೃಷ್ಣರಾಯರು, ಚಿಕ್ಕೊಡಿ ತಮ್ಮಣ್ಣಪ್ಪನವರು, ಅಂದಾನಪ್ಪ ದೊಡ್ಡಮೇಟಿಯವರು, ಡಾ|| ಫ. ಗು ಹಳಕಟ್ಟಿಯವರು, ಮೊಹರೆ ಹನುಮಂತರಾಯರು, ರಾಜಾರಾಮ ದುಬೆಯವರು, ಚನ್ನಬಸಪ್ಪ ಅಂಬಲಿಯವರು, ಹೀಗೆ ಮುಂತಾದ ಪ್ರಾತ: ಸ್ಮರಣೆಯರನ್ನು ಈ ಸಂಧರ್ಭದಲ್ಲಿ ಸ್ಮರಿಸಲೇ ಬೇಕಾಗುತ್ತದೆ. ಇವರೆಲ್ಲರ ಪರಿಶ್ರಮದ ಫಲವೇ ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಭಾಷಾವಾರು ಪ್ರಾಂತಗಳ ರಚನೆಯ ಆಧಾರದ ಮೇಲೆ 1956 ನವೆಂಬರ 1 ರಂದು ಏಕೀರಕಣಗೊಂಡು ಅಂದು ವಿಶಾಲ ಮೈಸೂರು ರಾಜ್ಯವೆಂದು ನಾಮಕರಣಗೊಂಡಿತು, 1973 ರಲ್ಲಿ ಅಂದಿನ ಮುಖ್ಯ ಮಂತ್ರಿಗಳಾಗಿದ್ದ ದಿವಂಗತ ಸನ್ಮಾನ್ಯ ಡಿ. ದೇವರಾಜ ಅರಸು ಅವರ ವಿಶೇಷ ಕಾಳಜಿಯಿಂದ ಕನರ್ಾಟಕ ರಾಜ್ಯವೆಂದು ಮರು ನಾಮಕರಣಗೊಂಡಿತು ಎಂದು ಹೇಳಿದರು. 

              ಕನ್ನಡ ನಾಡು ವರ್ಣಮಯ ಇತಿಹಾಸವನ್ನು ಹೊಂದಿದ್ದು, ಬಹುಭಾಷೆ, ಬಹುಸಂಸ್ಕೃತಿ ಮತ್ತು ಬಹುಧರ್ಮಗಳ ನೆಲೆಬೀಡು ಆಗಿದೆ. ಕನರ್ಾಟಕವೇ ನನ್ನ ಕರ್ಮಭೂಮಿ, ಕನ್ನಡವೇ ನನ್ನ ಉಸಿರು, ನಾಡ ನುಡಿಯ ಸಂರಕ್ಷಣೆಯ ನನ್ನ ಧ್ಯೇಯ, ಬಡವರ ರೈತರ ಏಳಿಗೆಯೇ ನನ್ನ ಪರಮಗುರಿ ಎಂಬ ಮಂತ್ರದೊಂದಿಗೆ ಕನ್ನಡ ತಾಯಿಯ ಸೇವೆ ಮಾಡಲು ಕಂಕಣಬದ್ಧರಾಗಿ ನಿಂತಿರುವ ನಾಡಿನ ಹೆಮ್ಮೆಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು ಈ ನಾಡಿನ ನೆಲ, ಜಲ, ನಾಡು ನುಡಿಯ ಅಭಿವೃದ್ಧಿಗಾಗಿ ಹೋರಾಟವನ್ನು ನಡೆಸಿಕೊಂಡು ಬರುತ್ತಿದ್ದಾರೆಂದು ಹೇಳಲು ತುಂಬಾ ಸಂತೋಷವೆನಿಸುತ್ತದೆ ಎಂದು ಹೇಳಿದರು. 

ಸಮಾರಂಭದಲ್ಲಿ  ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ವಿವಿಧ ಕ್ಷೇತ್ರಗಳ 24 ಜನ ಸಾಧಕರನ್ನು ಸನ್ಮಾನಿಸಿ ಗೌರವಿಸಿದರು.

      ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ), ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನೀಲಮ್ಮ ಮೇಟಿ, ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ ಕಿಶೋರ ಸುರಳಕರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾಜರ್ುನ ಯಂಡಿಗೇರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. 

ಅಂಬೇಡ್ಕರ ಕ್ರೀಡಾಂಗಣದಲ್ಲಿ ಇಂದು ಹಬ್ಬದ ವಾತಾವರಣ ನಿಮರ್ಾಣವಾಗಿತ್ತು. ನಗರಾದ್ಯಂತ ಇಡೀ ದಿನ ಕನ್ನಡ ಗೀತೆಗಳು ಅನುರಣಿಸಿದರವು. ಎಲ್ಲೆಡೆ ಕನ್ನಡಪರ ಘೋಷಣೆಗಳು ಮೊಳಗಿದವು. ಶಾಲಾ, ಕಾಲೇಜುಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಸಂಘಟಿಸಲಾಗಿತ್ತು.  

ಭವ್ಯ ಮೆರವಣಿಗೆ :

ಇದಕ್ಕೂ ಮೊದಲು ರಾಜ್ಯೋತ್ಸವದ ಅಂಗವಾಗಿ ನಗರದಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರದ ಭವ್ಯ ನಡೆಯಿತು. ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಅವರು ಚಾಲನೆ ನೀಡಿದರು.

ನಗರದ ಸಿದ್ದೇಶ್ವರ ದೇವಸ್ಥಾನದಿಂದ ವಿವಿಧ ವಾದ್ಯಮೇಳ, ಕಲಾತಂಡಗಳು ಹಾಗೂ ಸ್ಥಬ್ದಚಿತ್ರಗಳೊಂದಿಗೆ ಹೊರಟ ಮೆರವಣಿಗೆ ಜನರ ಗಮನ ಸೆಳೆಯಿತು. 

ಸುಸಜ್ಜಿತ ಜಿಮ್ ಉದ್ಘಾಟನೆ : 

ರಾಜ್ಯೋತ್ಸವ ಸಮಾರಂಭದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಅವರು ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಸಭಾಂಗಣದಲ್ಲಿ ಸ್ಥಾಪಿಸಲಾಗಿರುವ ಹತ್ತು ಲಕ್ಷ ರೂ. ವೆಚ್ಚದ ಸುಸಜ್ಜಿತ ಜಿಮ್ ಉದ್ಘಾಟಿಸಿದರು.