ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗಕ್ಕೆ ಕರೆ

ಲೋಕದರ್ಶನ ವರದಿ

ರಾಮದುರ್ಗ, 2:ತಾಲೂಕಿನ ಜನತೆಯ ಅನಾರೋಗ್ಯ ಸಮಸ್ಯೆ ನಿವಾರಣೆ ಮಾಡಿ ಆರೋಗ್ಯಯುತ ಸಮಾಜ ನಿಮರ್ಾಣ ಮಾಡುವ ಉದ್ದೇಶದಿಂದ ರಾಜ್ಯದ ಪ್ರತಿಷ್ಠಿತ ಸಂಸ್ಥೆಯಾದ ಕೆ.ಎಲ್.ಇ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

ಪಟ್ಟಣದ ವಿದ್ಯಾಚೇತನ ಆವರಣದಲ್ಲಿ ಕೆ.ಎಲ್.ಇ ನೆಹರು ವೈಧ್ಯಕೀಯ ಮಹಾವಿದ್ಯಾಲಯ ಬಟಕುಕರ್ಿಯ ಈರಮ್ಮ ಯಾದವಾಡ ಸೇವಾ ಪ್ರತಿಷ್ಠಾನ ಹಾಗೂ ಪ್ರೆಸ್ ಕ್ಲಬ್ ಸೇರಿದಂತೆ ವಿವಿಧ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ನಂತರ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಶಿಕ್ಷಣದ ಜೊತೆಗೆ ಆರೋಗ್ಯ ವೃದ್ಧಿಗೆ ಶ್ರಮಿಸುತ್ತಿರುವ ಡಾ. ಪ್ರಭಾಕರ ಕೋರೆ ನೇತೃತ್ವದಲ್ಲಿ ನಡೆಯುತ್ತಿರುವ ಕೆ.ಎಲ್.ಇ ಸಂಸ್ಥೆಯ ಕಾರ್ಯ ಶ್ಲಾಘನೀಯ. ಜನತೆ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ 

ನೀಡಿದರು.

ಕೆ.ಎಲ್.ಇ ನೆಹರು ವೈಧ್ಯಕೀಯ ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಡಾ. ಮುಧೋಳ ಮಾತನಾಡಿ, ಕೇಂದ್ರ ಸರಕಾರದ ಆಯಷ್ಯಮಾನ ಭಾರತ ಯೋಜನೆ ಅಡಿಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡುವ ಸೌಲಭ್ಯ ಆಸ್ಪತ್ರೆಯಲ್ಲಿದೆ. ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯ ಒದಗಿಸಿದಲ್ಲಿ ಸದೃಢ ಸಮಾಜ ನಿಮರ್ಾಣ ಸಾಧ್ಯವಿದೆ. ಸಮಾಜದ ಬಡ ಜನತೆ ಆಸ್ಪತ್ರೆಯಲ್ಲಿ ದೊರೆಯುವ ಉಚಿತ ಸೌಲಭ್ಯಗಳ ಸದುಪಯೋಗ ಮಾಡಿಕೊಳ್ಳಬೇಕು. ಪ್ರತಿ ತಿಂಗಳಿಗೊಮ್ಮೆ ಬಡ ರೋಗಿಗಳು ಚಿಕಿತ್ಸೆಗಾಗಿ ರಾಮದುರ್ಗದಿಂದ ಬೆಳಗಾವಿಗೆ ಬರಲು ವಾಹನದ ವ್ಯವಸ್ಥೆ ಮಾಡಿ, ಉಚಿತವಾಗಿ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಕೆ.ಎಲ್.ಇ ಸಂಸ್ಥೆಯ ನಿದರ್ೇಶಕ ರಾಜೇಂದ್ರ ಮುನವಳ್ಳಿ, ಧನಲಕ್ಷ್ಮೀ ಸಕ್ಕರೆ ಕಾಖರ್ಾನೆಯ ನಿದರ್ೇಶಕ ಜಿ.ಜಿ. ಪಾಟೀಲ, ಮುಖಂಡರಾದ ಮಲ್ಲಣ್ಣ ಯಾದವಾಡ, ಕಟಕೋಳ ಜಿ.ಪಂ ಸದಸ್ಯ ಮಾರುತಿ ತುಪ್ಪದ, ಆನಂದ ಶಿರಸಂಗಿ, ಸೇರಿದಂತೆ ಕೆ.ಎಲ್.ಇ ಸಂಸ್ಥೆಯ ವೈಧ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ಶಿಬಿರದಲ್ಲಿ ಸುಮಾರು 5000 ಜನತೆಗೆ ಚಿಕಿತ್ಸೆ ನೀಡಿ, ಮುಂದಿನ ಐದು ದಿನಗಳ ವರೆಗೆ ಉಚಿತ ಔಷಧಿಗಳನ್ನು ವಿತರಿಸಿ, 2700 ಜನತೆಯ ರಕ್ತ ಹಾಗೂ ಸಕ್ಕರೆ ಕಾಯಿಲೆ ತಪಾಸಣೆ ಮಾಡಿ 1000 ಜನತೆಯನ್ನು ಶಸ್ತ್ರಚಿಕಿತ್ಸೆಗೆ ಶಿಪಾರಸ್ಸು ಮಾಡಿ, ವಾರಕ್ಕೊಮ್ಮೆ ಅವರನ್ನು ಚಿಕಿತ್ಸೆಗೆ ಕಡೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಯಿತು