ಬನ್ನಿಕೊಪ್ಪ ಗ್ರಾಮದಲ್ಲಿ ಮದ್ಯ ವ್ಯರ್ಜನ ಶಿಬಿರ ಯಶಸ್ವಿಗೋಳಿಸಲು ಕರೆ

ಲೋಕದರ್ಶನ ವರದಿ

ಯಲಬುಗರ್ಾ: ಸೆ. 27ರಿಂದ ಅಕ್ಟೋಬರ 3ರ ವರೆಗೆ ಬನ್ನಿಕೊಪ್ಪ ಗ್ರಾಮದಲ್ಲಿ  ಜರುಗುವ 1265ನೇ ಮದ್ಯವರ್ಜನ ಶಿಬಿರ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜರುಗಿಸುವ ಬಗ್ಗೆ ಸೆ. 25ರಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಾಯರ್ಾಲಯದಲ್ಲಿ ಪೂರ್ವಭಾವಿ ಸಭೆ ಜರುಗಿದ ಸಮಯದಲ್ಲಿ ಜಿಲ್ಲಾ ನಿದರ್ೆಶಕ ಎಚ್.ಎಲ್.ಮುರಳಿಧರ ಅವರು ದೀಪ ಬೇಳಗಿಸಿ   ಮಾತನಾಡಿ ಶಿಬಿರವನ್ನು ಯಶಸ್ವಿಗೋಳಿಸಬೇಕು ಎಂದರು.

ಕ್ಷೇತ್ರ ಧರ್ಮಸ್ಥಳ ಗ್ರಾಮಿಣಾಭಿವೃದ್ಧಿ ಯೋಜನೆ ಯಲಬುಗರ್ಾ, ಅಖಿಲ ಕನರ್ಾಟಕ ಜನ ಜಾಗೃತಿ ವೇದಿಕೆ ಬೆಳ್ತಂಗಡಿ, ಕನರ್ಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರ, 1265 ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಭಾನಾಪೂರ ವಲಯ, ಈಶ್ವರ ಮಾರುತೇಶ್ವರ ಸಮುದಾಯ ಭವನ ಬನ್ನಕೊಪ್ಪ,  ಗ್ರಾಮ ಪಂಚಾಯಿತಿ ಬನ್ನಿಕೊಪ್ಪ, ಇಟಗಿ, ಭಾನಾಪೂರ, ತಳಕಲ್, ಬೆಣಕಲ್, ಮಸಬಹಂಚಿನಾಳ, ಮಂಡಲಗಿರಿ,  ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ, ಗ್ರಾಮೀಣ ಹಾಗೂ ವಿವಿಧ ಸಂಘಸಂಸ್ಥೆಗಳು ಹಾಗೂ ದಾನಿಗಳ ಸಹಕಾರದಲ್ಲಿ ಹಾಗೂ ಕ್ಷೇತ್ರದ ಧರ್ಮಸ್ಥಳದ ಧಮರ್ಾದಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಬನ್ನಿಕೊಪ್ಪದಲ್ಲಿ  ಜರುಗುವ  1265  ನೇ ಮದ್ಯವರ್ಜನ ಶಿಬಿರದಲ್ಲಿ ಶಿಭಿರಾಥರ್ಿಗಳು ಶಿಬಿರದ ಪ್ರಯೋಜನವನ್ನು ಪಡೆಯಬೇಕು ಎಂದರು.

ಕುಡಿತಕ್ಕೆ ದಾಸರಾದ ನಿಮ್ಮ ಬಂದು ಬಳಗದವರೆ ಇರಲಿ, ತಮ್ಮ ಸ್ನೇಹಿತರು ಹಾಗು ಇತರ ವ್ಯಕ್ತಿಗಳೆ ಇರಲಿ ಅವರನ್ನು ಇಂತಹ  ಮದ್ಯವರ್ಜನ ಶಿಬಿರಕ್ಕೆ  ಕರೆತಂದು ಅವರನ್ನು ಸಹ ನಿಮ್ಮ ಹಾಗೆ ಉತ್ತಮವ್ಯಕ್ತಿಯಾಗಿ ನಿಮರ್ಾಣಮಾಡುವ ಕಾರ್ಯಮಾಡಿ ತಾವು ಪುಣ್ಯವಂತರಾಗಬೇಕು  ಎಂದು ಶ್ರೀ ಕ್ಷೇತ್ರ  ಧರ್ಮಸ್ಥಳದ ಅಖಿಲ ಕನರ್ಾಟಕ ಕೊಪ್ಪಳ ಜಿಲ್ಲಾ ಜನ ಜಾಗೃತಿ ಸಮಿತಿ ಸದಸ್ಯ ಶರಣಬಸಪ್ಪ ಕೆ ದಾನಕೈ, ಮಾತನಾಡಿದರು.

ಧರ್ಮಸ್ಥಳ ಸಂಸ್ಥೆಯಿಂದ   ಮಹಿಳೆಯರು  ಆಥರ್ಿಕವಾಗಿ ಸಬಲರಾಗಲು ತುಂಬಾ ಸಹಕಾರಿಯಾಗಿದೆ ಮತ್ತು ಇತರ ಧಾಮರ್ಿಕ ಕ್ಷೇತ್ರಗಳಿಗೆ ಸಹಾಯ ಸಹಕಾರ ನೀಡುವ ಕಾರ್ಯ ಮೆಚ್ಚತಕ್ಕದ್ದು ಎಂದು ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ  ಮುನಿಯಪ್ಪ ಹುಬ್ಬಳ್ಳಿ ಮಾತನಾಡಿದರು.

ಜಿಲ್ಲಾ ಜನಜಾಗೃತಿ ಸಮತಿ ಸದಸ್ಯ ವೀರಣ್ಣ ನಿಂಗೋಜಿ, ಯೋಜನಾಧಿಕಾರಿ ರಾಜೇಶ,  ಮೇಲ್ವಿಚಾರಕರಾದ ಶ್ರೀಶೈಲ್, ಚಂದ್ರಮ್ಮ, ನವಜೀವನ ಸಮಿತಿಯ ಸಿದ್ದರೋಡ ಭಾವಿಕಟ್ಟಿ ಮಹಿಳಾ ಒಕ್ಕೂಟದ ಸದಸ್ಯರು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.