ಲೋಕದರ್ಶನ ವರದಿ
ರಾಮದುರ್ಗ: ಮಲಪ್ರಭಾ ನದಿ ಪ್ರವಾಹಕ್ಕೆ ತುತ್ತಾದ ಸಂತ್ರಸ್ಥರಿಗೆ ಸರಕಾರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದಲ್ಲ. ಶೀಘ್ರ ಕುಡಿಯುವ ನೀರು ವಿದ್ಯುತ್ ಸೇರಿದಂತೆ ಅವಶ್ಯಕ ಸೌಲಭ್ಯ ಒದಗಿಸುವಂತೆ ಒತ್ಥಾಯಿಸಿ ರೈತ ಸೇನಾ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ, ಅವರಾದಿ ಫಲಹಾರೇಶ್ವರ ಮಠದ ಶಿವಮೂರ್ತಿ ಸ್ವಾಮೀಜಿಗಳ ನೇತೃತ್ವದಲ್ಲಿ ಅವರಾದಿ ಗ್ರಾಮಸ್ಥರು ತಹಶೀಲ್ಧಾರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.
ಸಂತ್ರಸ್ಥರನ್ನು ಸುರಕ್ಷಿತ ಸ್ಥಳಗಳಲ್ಲಿ ಸ್ಥಳಾಂತರ ಮಾಡಲಾಗಿದೆ. ಅಲ್ಲಿ ಕುಡಿಯಲು ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದಲ್ಲ. ಪ್ರವಾಹ ಉಂಟಾಗಿ ತಿಂಗಳು ಕಳೆದರೂ ಶೆಡ್ ನಿರ್ಮಾಣ ಮಾಡಿಲ್ಲ. ಸರಕಾರ ಸಂತ್ರಸ್ಥರಿಗೆ ಶೀಘ್ರ ಶೆಡ್ ನಿಮರ್ಾಣ ಮಾಡಿ, ನಂತರ ಪ್ರವಾಹಪೀಡಿತ ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ತೆಗೆದುಕೊಳ್ಳಬೇಕು. ಮನೆ ನಿರ್ಮಾಣಕ್ಕೆ ಸರಕಾರ 15 ಲಕ್ಷ ಪರಿಹಾರ ನೀಡಬೇಕು.
ನೀರು ನುಗ್ಗಿದ ಮನೆಗಳು ಯಾವಾಗ ಬೀಳುತ್ತವೆ ಎಂಬುವುದು ತಿಳಿದಿಲ್ಲ. ಕಾರಣ ಅವುಗಳಲ್ಲಿಯೇ ಜನತೆ ಪುನಃ ವಾಸಿಸಲು ಪ್ರಾರಂಭಿಸಿದ್ದಾರೆ. ಮನೆಗಳು ಬಿದ್ದು ಅವಾಂತರಗಲು ಸೃಷ್ಠಿಯಾದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಸರಕಾರವೇ ನೇರ ಹೊನೆಯಾಗಬೇಕಾಗುತ್ತದೆ. ಪ್ರವಾಹದಿಂದ ವಾತಾವರಣ ಕಲುಷಿತಗೊಂಡು ಜನತೆ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅವರಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು. ಬೆಳೆ ನಾಶಕ್ಕೆ ಸರಕಾರ ಸೂಕ್ತ ಪರಿಹಾರ ನೀಡಿ ಗ್ರಾಮಗಳ ಜನತೆಗೆ ಸಂಕಷ್ಠಕ್ಕೆ ಸ್ಪಂದಿಸಬೇಕು. ಒಂದು ವಾರದೊಳಗಾಗಿ ಸೌಲಭ್ಯ ಕಲ್ಪಿಸಲು ತಾಲೂಕಾಡಳಿತ ಕ್ರಮ ತೆಗೆದುಕೊಳ್ಳದೇ ಹೋದಲ್ಲಿ ತಹಶೀಲ್ದಾರ ಕಾಯಾಲಯದ ಎದುರು ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಅವರು ಮನವಿ ಮೂಲಕ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರಾದಿ ಫಲಹಾರೇಶ್ವರ ಮಠದ ಶಿವಮೂರ್ತಿ ಸ್ವಾಮೀಜಿ, ರಾಮದುರ್ಗ ಶಿವಮೂತರ್ೇಶ್ವರ ಮಠದ ಶ್ರೀ ಶಾಂತವೀರ ಸ್ವಾಮೀಜಿ, ಮಹದಾಯಿ ಹೋರಾಟ ಸಮನ್ವಯ ಸಿತಿಯ ತಾಲೂಕಾಧ್ಯಕ್ಷ ವೆಂಕಟೇಶ ಹಿರೇರಡ್ಡಿ, ರೈತ ಸೇನಾ ತಾಲೂಕಾಧ್ಯಕ್ಷ ಗಿರಿಯಪ್ಪ ಹಂಜಿ, ಪ್ರಧಾನ ಕಾರ್ಯದಶರ್ಿ ಹಣಮಂತ ಮಡಿವಾಳರ, ಅವರಾದಿ ಗ್ರಾ.ಪಂ ಅಧ್ಯಕ್ಷೆ ಯಲ್ಲವ್ವ ಮೋಟೆ, ಗ್ರಾಮದ ನೂರಾರು ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಹಾಗೂ ಇತರರಿದ್ದರು.