ಕೋಮುವಾದಿ ಸಂಘಟನೆಗಳಿಂದ ಹೊರಬರಲು ಲಿಂಗಾಯತ ಯುವಕರಿಗೆ ಕರೆ

ಲೋಕದರ್ಶನ ವರದಿ

ವಿಜಯಪುರ 17: ರಾಷ್ಟ್ರೀಯ ಬಸವ ಸೇನಾ ವಿಜಯಪುರ ಜಿಲ್ಲಾ ಘಟಕ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ  ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಮಾಸಿಕ ಬಸವ ಜ್ಯೋತಿ ಕಾರ್ಯಕ್ರಮ ಹಾಗೂ 12ನೇ ಶತಮಾನದ ಅಮರಗಣಂಗಳಲ್ಲಿ ಒಬ್ಬರಾದ ಕುರಿ ಮೇಯಿಸುವ ಕಾಯಕದ ಶರಣ ವೀರ ಗೊಲ್ಲಾಳರ ಜಯಂತಿ ಆರಿಸಲಾಯಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವ ಸೇನಾ ಜಿಲ್ಲಾಧ್ಯಕ್ಷ ಡಾ ರವಿಕುಮಾರ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಯಾವುದೇ ಜಾತಿ, ವರ್ಣ, ವರ್ಗ, ಲಿಂಗಭೇದವಿಲ್ಲದೇ  ವಿವಿಧ 99 ಕಾಯಕ ವರ್ಗದ ಶರಣರು 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ಅನುಭವ ಮಂಟಪದಲ್ಲಿ ಸೇರಿ ತಮ್ಮ ಅನುಭಾವವನ್ನು ವಚನಗಳ ಮೂಲಕ ಪ್ರಕಟಪಡಿಸಿದರು, ಅಂಥವರಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೆರಿಯಲ್ಲಿ ಜನಿಸಿದ ವೀರ ಗೊಲ್ಲಾಳರು ಅಗ್ರಗಣ್ಯರು, ಅವರು ತಮ್ಮ ಕುರಿ ಕಾಯುವ ಕಾಯಕ ಮಾಡುತ್ತಾ ಸುಮಾರು ವಚನಗಳನ್ನು ಬರೆದಿದ್ದಾರೆ, ಆದರೆ ಕಲ್ಯಾಣ ಕ್ರಾಂತಿಯ ನಂತರ ಹಲವಾರು ವಚನಗಳು ನಾಶವಾಗಿ ಅವರ ಹತ್ತು ವಚನಗಳು ಮಾತ್ರ ಲಭ್ಯ ಇವೆ. ಎಲ್ಲಾ ಲಿಂಗಾಯತರು ಸೇರಿ ಎಲ್ಲಾ ಕಾಯಕವರ್ಗದ ಶರಣರ ಜಯಂತಿಗಳನ್ನು ಒಟ್ಟಾಗಿ ಕೂಡಿ ಆಚರಿಸಿ ಬಸವಣ್ಣನವರ ಕನಸಿನ ಸಮಸಮಾಜ ನಿಮರ್ಿಸುವಲ್ಲಿ ಪಣತೊಡಬೇಕಾಗಿದೆ ಎಂದರು.

ಶರಣೆ ಅಕ್ಕಮಹಾದೇವಿ ಬುಲರ್ಿಯವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕುರುಬ ಗೊಲ್ಲಾಳರು ಕುರಿ ಹಿಕ್ಕೆಯನ್ನು ಇಷ್ಟಲಿಂಗವಾಗಿ ಪರಿವರ್ತಿಸಿದ ಶ್ರೇಷ್ಠ ಶರಣರಲ್ಲಿ ಒಬ್ಬರು. ಅವರ ವಚನಗಳನ್ನು ಎಲ್ಲರೂ  ಅಧ್ಯಯನ ಮಾಡಿ ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಲಬೇಕೆಂದು ಹೇಳಿದರು. 

ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಕಾರ್ಯದಶರ್ಿ ಜಗದೀಶ ಪಾಟೀಲ, ಉಪನ್ಯಾಸ ನೀಡಿ, ಎಲ್ಲಾ ಲಿಂಗಾಯತ ಯುವಕರು ಕೋಮುವಾದಿ ಸಂಘಟನೆಗಳಿಂದ ಹೊರಬಂದು ಬಸವಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಎಲ್ಲಾ ಒಳಪಂಗಡಗಳನ್ನು ಒಂದು ಮಾಡಿ ಕಲ್ಯಾಣ ರಾಜ್ಯ ನಿಮರ್ಿಸಲು ಹೊರಾಡಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಕನ್ನಡ ಸಾಹಿತ್ಯ  ಪರಿಷತ್ತಿನ ಅಧ್ಯಕ್ಷರಾದ ಮಲ್ಲಿಕಾರ್ಜುನ್  ಯೆಂಡಿಗೇರಿ ಮಾತನಾಡಿ ಬಸವಾದಿ ಶರಣರ ವಚನಸಾಹಿತ್ಯವು ಆಧುನಿಕ ವಿಜ್ಞಾನಕ್ಕೆ ಬಹಳ ಸಮೀಪವಾಗಿದ್ದು ಕನ್ನಡ ಸಾಹಿತ್ಯಕ್ಕೆ ಶ್ರೇಷ್ಟವಾದ ಕೊಡುಗೆ ಕೊಟ್ಟಿದ್ದು,ಎಲ್ಲಾ ಹಿಂದುಳಿದ ವರ್ಗದ ಶರಣರ ಜಯಂತಿಯನ್ನು ನಿರಂತರವಾಗಿ ಮಾಡುತ್ತಿರುವ ರಾಷ್ಟ್ರೀಯ ಬಸವ ಸೇನೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು,ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಸಮಾಜಮುಖಿ ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತದೆ ಎಂದು ಹೇಳಿದರು. 

ಶರಣೆ ಚಂದ್ರಕಲಾ ಗುಣದಾಳ ಪ್ರಾಥರ್ಿಸಿದರು, ರಾಜಶೇಖರ ಉಮರಾಣಿ ಸ್ವಾಗತಿಸಿದರು,ದ್ರಾಕ್ಷಾಯಿಣಿ ಬಿರಾದಾರ ವಂದಿಸಿದರು ಹಾಗೂ ಶರಣಗೌಡ ಪಾಟೀಲ ನಿರೂಪಿಸಿದರು.ಸೋಮಶೇಖರ ಕುಲರ್ೆ, ಸುರೇಶ ಆನಂದಿ, ಪಾರ್ವತಿ ಜೋರಾಪುರಮಠ, ವಚನಗಾಯನ ನಡೆಸಿಕೊಟ್ಟರು. ನಿಂಗಪ್ಪ ಸಂಗಾಪುರ, ಜಗದೀಶ ಬಳೂತಿ, ಶರಣಗೌಡ ಬಿರಾದಾರ, ಬಸವರಾಜ ಕುಂಬಾರ, ಕಲ್ಮೇಶ ಗೋಕಾಕ, ಯಲಗೊಂಡ ಬಿರಾದಾರ, ವಿಜಯಕುಮಾರ ಜಾಬಾ,ನೀಲಕಂಠ ಹಳ್ಳಿ, ಶಿವಾನಂದ ಸಾಂಗೊಳಿ, ಭಾರತಿ ಕೊಟೆಣ್ಣವರ, ಎಸ್ ಎಸ್ ಕೋನರೆಡ್ಡಿ, ಬಿ ಎಸ್ ಕೋನರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.