ಕೆರೆ ಹೂಳೆತ್ತುವ ಸ್ಥಳಕ್ಕೆ ಸಿ.ವಿ ಚಂದ್ರಶೇಖರ ಭೇಟಿ

ಲೋಕದರ್ಶನ ವರದಿ

ಕೊಪ್ಪಳ 18: ತಾಲೂಕಿನ ಶಿವಪುರ ಗ್ರಾಮದ ಕೆರೆ ಹೂಳೆತ್ತುವ ಸ್ಥಳಕ್ಕೆ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯರಾದ ಸಿ.ವಿ ಚಂದ್ರಶೇಖರ ಅವರು ಭೇಟಿ ನೀಡಿದರು. 

ನಂತರ ಸಿ.ವಿ ಚಂದ್ರಶೇಖರ ಮಾತನಾಡಿ ಇಂದು ಜಿಲ್ಲೆಯ ವಿವಿದೆಡೆ ಕೆರೆಯ ಹೂಳನ್ನು ರೈತರೇ ತೆಗೆಯುತ್ತಿದ್ದಾರೆ, ಸರಕಾರ ಮಾಡಬೇಕಾದ ಕೆಲಸವನ್ನು ರೈತರು ಮಾಡುತ್ತಿರುವುದು ಶ್ಲಾಘನೀಯ, ಸದಾ ನಾನು ನಿಮ್ಮ ಜೊತೆಯಲ್ಲಿ ಇದ್ದು ನನ್ನಿಂದಾಗುವ ಸೇವೆಯನ್ನು ಸಲ್ಲಿಸುತ್ತೇನೆ ಕೆರೆಯ ಹೂಳನ್ನು ತೆಗೆಯುವುದರಿಂದ ಅಂತರ್ಜಲ  ಮಟ್ಟ ಹೆಚ್ಚುತ್ತದೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ ಇಂತಹ ಸಾಮಾಜಿಕ ಕಾರ್ಯಗಳು ಹೀಗೆ  ಹೆಚ್ಚಾಗಿ ಆಗಲಿ ಎಂದರು.  

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಹಾಲೇಶ್ ಕಂದಾರಿ, ವಸಂತ ನಾಯಕ ಸೇರಿದಂತೆ ಮಂಜುನಾಥ ಹುಲಿಹೈದರ್, ಹನುಮೇಶ ಅಂಗೋಟಿ, ಮಂಜುನಾಥ ಶೇಲ್ಲೂಡಿ, ಮಾರುತಿ ನಾಯಕ್, ಬೀರಪ್ಪ ಶೇಲೂಡಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಯುವಕರು ಉಪಸ್ಥಿತರಿದ್ದರು.