ಗುಲರ್ಾಪೂರ ಪ್ರೌಢಶಾಲೆಯಲ್ಲಿ ಸಿ.ಎಸ್.ಎ.ಎಸ್ ಅಣಕು ಪರೀಕ್ಷೆ: ಮನ್ನಿಕೇರಿ ವೀಕ್ಷಣೆ

ಮೂಡಲಗಿ 27: ಕನರ್ಾಟಕ ರಾಜ್ಯದಲ್ಲಿ ಶಿಕ್ಷಣ ಇಲಾಖೆ ಹಮ್ಮಿಕೊಂಡಿರುವ ಶಾಲಾ ಗುಣಮಟ್ಟ ಮೌಲ್ಯಾಂಕ ಮತ್ತು ಅಂಗೀಕರಣ ಪರಿಷತ್ತಿನ ಕಲಿಕಾ ಸಾಧನಾ ಪರೀಕ್ಷೆಗಳು ಮಕ್ಕಳಲ್ಲಿ ಸ್ಪಧರ್ಾತ್ಮಕ ಮನೋಭಾವನೆ ಬೆಳೆಸುವಲ್ಲಿ ಸಹಾಯಕವಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ವಿನೂತನ ಶೈಲಿಯಲ್ಲಿ ಪ್ರಥಮವಾಗಿ ಐದು ಸರಣಿಯ ಅಣಕು ಪರೀಕ್ಷೆಗಳು ನಡೆದಿರುವದು ಹೆಮ್ಮೆಯ ವಿಷಯವಾಗಿದೆ ಎಂದು ಚಿಕ್ಕೋಡಿ ಡಿಡಿಪಿಐ ಕಛೇರಿ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ನುಡಿದರು.

  ಅವರು ಸಮೀಪದ ಗುಲರ್ಾಪೂರ ಗ್ರಾಮದ ಶಾಸಕರ ಮಾದರಿ ಪ್ರಾಥಮಿಕ ಹಾಗೂ ಸರಕಾರಿ ಪ್ರೌಢ ಶಾಲೆಗಳಿಗೆ ಶನಿವಾರ ಭೇಟಿ ನೀಡಿ ಸಿ.ಎಸ್.ಎ.ಎಸ್ ಅಣಕು ಪರೀಕ್ಷೆಗಳನ್ನು ವೀಕ್ಷಿಸಿ ಮಾತನಾಡಿದರು.       ರಾಜ್ಯದಲ್ಲಿಯೇ ಪ್ರಥಮವಾಗಿ ಮೂಡಲಗಿ ತಾಲೂಕಿನಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಅಣಕು ಪರೀಕ್ಷೆ ಏರ್ಪಡಿಸಿ ಯಶಸ್ವಿಯಾದ ಪ್ರಯುಕ್ತ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಸರಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ರಾಜ್ಯದಲ್ಲಿಯೇ ಪ್ರಥಮವಾಗಿ ಈ ವರ್ಷ ನಡೆಸಲಾಗಿದೆ. ಹಿರಿಯರು ಮಾರ್ಗದರ್ಶಕರಾದ ಚಿಕ್ಕೋಡಿ ಡಿಡಿಪಿಐ ಎಮ್.ಜಿ ದಾಸರ ಅವರ ನೇತೃತ್ವದಲ್ಲಿ ಈ ಅಣಕು ಪರೀಕ್ಷೆಗಳು ಯಶಸ್ವಿಯಾಗಿ ನಡೆಯಲ್ಪಟ್ಟಿವೆ. ರಾಜ್ಯ ಹಂತದ ಪರೀಕ್ಷೆಗಳು ಅ. 29,30 ರಂದು ನಡೆಯಲಿದ್ದು ಆ ಪರೀಕ್ಷೆಗೆ ಪೂರಕವೆಂಬಂತೆ ಪರೀಕ್ಷೆಗಳು ಮಕ್ಕಳಿಗೆ ಜಠಿಲವಾಗದೆ ಸುಗಮವಾಗಿ ನಡೆಯಲು ಸಹಾಯಕವಾಗುವದು ಎಂದರು. 

  ನೂರಿತ ಸಂಪನ್ಮೂಲ ಶಿಕ್ಷಕ ವೃಂದದ ಸಹಾಯದಿಂದ ಅತೀ ಕಡಿಮೆ ವೆಚ್ಚದಲ್ಲಿ ಇಂದಿನ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಜಿಲ್ಲಾ ವ್ಯಾಪ್ತಿಯ ಶಾಲೆಗಳಲ್ಲಿ ಮಕ್ಕಳಿಗೆ ಸ್ಪಧರ್ಾತ್ಮಕ ಗುಣ ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯ ಮಾಡಲಾಗಿದೆ ಎಂದರು.ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಮಕ್ಕಳನ್ನು ಕೇವಲ ಟಿ.ವಿ, ಮೊಬೈಲ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳ ದಾಸರಾಗದಂತೆ ನೋಡಿಕೊಂಡು, ಮಕ್ಕಳಿಗೆ ಜ್ಞಾನಾರ್ಜನೆಗೆ ಸಾಮಾಜಿಕ ಜಾಲತಾಣಗಳ ಅರಿವು ಮೂಡಿಸುವ ಕಾರ್ಯ ಮಾಡುವದಾಗಿದೆ. ವಿಶೇಷವಾಗಿ ಜಿಲ್ಲೆಗೆ ಐದು ಅಣಕು ಪರೀಕ್ಷೆಯ ಪ್ರಶ್ನೆ ಪತ್ರಿಕೆ ತಯಾರಿ ಮಾಡಿಕೊಟ್ಟ ಸಂಪನ್ಮೂಲ ಶಿಕ್ಷಕರು, ಜಿಲ್ಲೆಯ ಬಿ.ಇ.ಓ, ಬಿ.ಆರ್.ಸಿ, ಬಿ.ಆರ್.ಪಿ, ಇಸಿಒ, ಸಿ.ಆರ್.ಪಿ, ಪ್ರಧಾನ ಗುರುಗಳ ಹಾಗೂ ಶಿಕ್ಷಕರ ಶ್ರಮದ ಬಗ್ಗೆ ಪ್ರಶಂಶಿಸಿದರು.

 ಚಿಕ್ಕೋಡಿ ಡೈಟ್ನ ಹಿರಿಯ ಉಪನ್ಯಾಸಕರಾದ ಎಮ್.ಡಿ ಬೇಗ್ ಮಾತನಾಡಿ, ಮಕ್ಕಳಿಗೆ ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ಅಣಿಗೋಳಿಸುವ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲಿಯೇ ಇಂತಹ ಅಣಕು ಪರೀಕ್ಷೆಗಳ ಕಲ್ಪನೆ ಕೊಟ್ಟಿದ್ದೆಯಾದರೆ ಮುಂದಿನ ನಮ್ಮ ದೇಶದ ಸಂಪತ್ತಾಗಿ ಮಾಪರ್ಾಡಾಗುತ್ತಾರೆ. ದೂಷ್ಟ ಚಟಗಳು ಹಾಗೂ ಆಚಾರ ವಿಚಾರಗಳಲ್ಲಿ ಬದಲಾವಣೆ ಮಾಡಿದ್ದೆಯಾದರೆ ಸಮಾಜ ಶಿಕ್ಷಕರ ಮೇಲಿಟ್ಟಿರುವ ಜವಾಬ್ದಾರಿ ನಿರ್ವಹಿಸಿದಂತಾಗುವದು ಎಂದು ಹೇಳಿದರು.

  ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಐ ಭಾಗೋಜಿ, ಬಿ.ಆರ್.ಪಿ ಕೆ.ಎಲ್.ಮೀಶಿ, ಪ್ರಧಾನ ಗುರುಗಳಾದ ಗೀತಾ ಕರಗಣ್ಣಿ, ಎಮ್ ಮಂಜುನಾಥ, ಎಸ್.ಡಿ.ಎಮ್.ಸಿ ಅಧ್ಯಕ್ಷ ಎಲ್.ಪಿ ನೇಮಗೌಡರ, ಸಂಪನ್ಮೂಲ ಶಿಕ್ಷಕರಾದ ಎಮ್.ಎಮ್ ಮೊಮಿನ, ದೀಪಿಕಾ ನಡೋಣಿ, ಎಸ್.ಸಿ ಅರಗಿ, ಎಸ್.ಕೆ.ಹಳದಕ್ಕಿ ಹಾಗೂ ಶಿಕ್ಷಕ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.