ರೈತರ ನೋವಿಗೆ ಸಿಎಂ ಕಣ್ಣೀರು ಬಂದಿದೆ ಹೆಚ್ಚಿನ ಮಹತ್ವ ಬೆಕಿಲ್ಲ: ಕೆ.ಜೆ. ಜಾಜರ್್


ಬೆಳಗಾವಿ : ಮುಖ್ಯಮಂತ್ರಿ ಹುದ್ದೆ ಎನ್ನುವುದು ಹೂವಲ್ಲ, ಮುಳ್ಳಿನ ಹಾಸಿಗೆ ಇದ್ದಂತೆ. ಬಡವರ, ರೈತರ ನೋವನ್ನು ತನ್ನ ನೋವೆಂದು ತಿಳಿದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಾಗಿಯೇ ಸಹಜವಾಗಿ ಅವರ ಕಣ್ಣಲ್ಲಿ ನೀರು ಬರುತ್ತಿದೆ. ಇದಕ್ಕೆ ಹೆಚ್ಚಿನ ಮಹತ್ವ ಕೊಡಬೇಕಿಲ್ಲ ಎಂದು ಐಟಿ ಬಿಟಿ ಮತ್ತು ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾಜರ್್ ಇಂದಿಲ್ಲಿ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ದಿನದಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕುಮಾರಸ್ವಾಮಿ ಕಾಂಗ್ರೆಸನಿಂದ ತೊಂದರೆ ಇಲ್ಲ ಎಂದು ಹೇಳಿದ್ದಾರೆ. ಆದರೆ ಸಿಎಂ ಸಮಸ್ಯೆಗಳನ್ನು ಸ್ಪಂದಿಸುವ ವಿಚಾರದಲ್ಲಿ ಕಣ್ಣೀರು ಹಾಕಿದ್ದಾರೆ ಅವರು ವೀಕ್ ಸಿಎಂ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಹುದ್ದೆಯನ್ನು ಹೃದಯಪೂರ್ವಕವಾಗಿ ನಿಭಾಯಿಸುತ್ತಿರುವುದಕ್ಕೆ ಹೆಚ್.ಡಿ. ಕುಮಾರಸ್ವಾಮಿ ಅವರ ಕಣ್ಣಲ್ಲಿ ನೀರು ಬರುತ್ತಿದೆ ಹೊರತು ಬೇರೆ ಯಾವ ಕಾರಣ ಇಲ್ಲ ಎಂದಿದ್ದಾರೆ.

ಕುಮಾರಸ್ವಾಮಿ ಪವರ್ ಫುಲ್ ಇದ್ದಾರೆ. ಯಂಗ್ಸ್ಟಾರ್ ಇದ್ದಾರೆ. ಯಾರಿಗೂ ಸರಕಾರ ನಡೆಸುವುದು ಸುಲಭವಲ್ಲ. ಕುಮಾರಸ್ವಾಮಿ ಅಷ್ಟೇ ಅಲ್ಲಾ ಎಲ್ಲರಿಗೂ ಸರಕಾರ ನಡೆಸುವುದು ಹೂವಿನ ಹಾಸಿಗೆ ಅಲ್ಲ. ಅದೊಂದು ಮುಳ್ಳಿನ ಹಾಸಿಗೆ ಇದ್ದಂತೆ ಎಂದರು. ಸಿಎಂ ಹುದ್ದೆ ಎಂಜಾಯ್ ಮಾಡುವ ಪೋಸ್ಟ್ ಅಲ್ಲ. ಸಿಎಂ ಆದವರಿಗೆ ಜನರ ಕಷ್ಟ ಇರುತ್ತವೆ. ಆ ಕಷ್ಟವನ್ನ ಕುಮಾರಸ್ವಾಮಿ ಕಣ್ಣೀರು ಮೂಲಕ ತಮ್ಮ ಅನಿಸಿಕೆ ಹೊರ ಹಾಕಿದ್ದಾರೆ. ಕಣ್ಣೀರು ಹಾಕಿದ್ದಕ್ಕೆ ಕುಮಾರಸ್ವಾಮಿ ಅವರ ಅನಿಸಿಕೆ ಅಷ್ಟೇ ಎಂದು ಹೇಳಿದರು.

ಕುಮಾರಸ್ವಾಮಿ ಕಣ್ಣೀರು ಹಾಕಿರುವುದನ್ನ ಮಾಧ್ಯಮವರು ಒಳ್ಳೆ ರೀತಿಯಿಂದ ತೆಗೆದುಕೊಳ್ಳಬೇಕು. ನೀವು ಮಾಧ್ಯಮದವರು ಅಳ್ತಾರೆ ಅಳ್ತಾರೆ ಅಂದರೆ ಹೇಗೆ ಕುಮಾರಸ್ವಾಮಿ ಸಶಕ್ತರಾಗಿದ್ದಾರಾ ಎಂದರು. ಅಲ್ಲದೆ ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾರೆ. ಅವರು ಪತ್ರದ ಮೂಲಕ ತಮ್ಮ ಅಭಿಪ್ರಾಯ ತಿಳಿಸುತ್ತಾರೆ ಎಂದು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಪತ್ರದ ಮೂಲಕ ಸಮಸ್ಯೆ ತಿಳಿಸುವುದು ತಪ್ಪಲ್ಲ ಎಂದರು. 

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಣ್ಣಿರು ಹಾಕುತ್ತಿರುವ ಬಗ್ಗೆ ಸುದ್ದಿಯು ದೇಶದಲ್ಲಿದೆಲ್ಲೆಡೆಯಲ್ಲಿ ಚಚರ್ೆಯಾಗುತ್ತಿದೆ ಅಲ್ಲವೇ ಎಂಬ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಕೆ.ಜೆ ಜಾಜರ್್ ಅವರು ಕೇಂದ್ರದ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಬಿಜೆಪಿಯವರಲ್ಲವೇ. ಸಮ್ಮಿಶ್ರ ಸಕರ್ಾರ ಬಲಿಷ್ಠ ಆಗುತ್ತಿರುವುದನ್ನು ಸಹಿಸಿಕೊಳ್ಳಲು ಕೇಂದ್ರದ ಬಿಜೆಪಿ ನಾಯಕರಿಗೂ ಆಗುತ್ತಿಲ್ಲ. ಜೇಟ್ಲಿ ಅವರ ಪ್ರತಿಕ್ರಿಯೆಯನ್ನು ಬಿಜೆಪಿ ನಾಯಕರ ಪ್ರತಿಕ್ರಿಯೆ ಎಂದು ಭಾವಿಸಿದ್ದೇವೆ. ಈ ಬಗ್ಗೆ ನಿನ್ನೆ ಸಿಎಂ ಕುಮಾರಸ್ವಾಮಿ ಅವರು ಕೂಡ ಪ್ರತಿಕ್ರಿಯಿ ನೀಡಿದ್ದಾರೆ ಎಂದರು.

ಉತ್ತರ ಕನರ್ಾಟಕದ ಅಭಿವೃದ್ಧಿಗೆ ಸಮ್ಮಿಶ್ರ ಸಕರ್ಾರ ಸಿದ್ಧವಿದೆ. ಪ್ರತ್ಯೇಕ ರಾಜ್ಯ ಆಗಲು ಬಿಡುವುದಿಲ್ಲ. ನಮ್ಮದು ಅಖಂಡ ಕನರ್ಾಟಕವಾಗಿ ಇರಲಿದೆ ಎಂದರು