ಅತಿ ಹೆಚ್ಚು ಸಾಲ ಮಾಡಿರುವ ಹೆಗ್ಗಳಿಕೆಗೆ ಪಾತ್ರ ಸಿಎಂ ಸಿದ್ದರಾಮಯ್ಯ: ಎಂ.ಬಿ.ಬಸವರಾಜ
ಹೂವಿನಹಡಗಲಿ 13: ರಾಜ್ಯದ ಜನರ ತಲೆ ಮೇಲೆ ಲಕ್ಷ ಗಟ್ಟಲೇ ಸಾಲ ಹೊರಿಸಿ. ಬಡವರ ಪರ ಎಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ದಿವಾಳಿ ಮಾಡಿದೆ ಎಂದು ವಿಜಯನಗರ ಜಿಲ್ಲಾ ಬಿಜೆಪಿ ಮುಖಂಡ ಎಂ.ಬಿ.ಬಸವರಾಜ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಪರದಾಡಿ ಬಿ ಖಾತಾ ಎಂಬ ಹೊಸ ಹಾವು ಬಿಟ್ಟು ಭಾರಿ ಮೊತ್ತದ ತೆರಿಗೆ ಸಂಗ್ರಹಿಸಲು ಹೋರಟಿದೆ. ಜನಸಾಮಾನ್ಯರಿಗೆ ತೆರಿಗೆ ಭಾಗ್ಯ ನೀಡಿದ್ದಾರೆ. ಅತಿ ಹೆಚ್ಚು ಸಾಲ ಮಾಡಿರುವ ಹೆಗ್ಗಳಿಕೆ ಸಿಎಂ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಕಳೆದ ಎರಡು ವರ್ಷದಲ್ಲಿ ಸರ್ಕಾರ 2.21 ಲಕ್ಷ ಕೋಟಿ ಸಾಲ ಮಾಡಿದೆ. ಗೃಹಲಕ್ಷ್ಮಿಗೆ ಭಾರೀ ಪ್ರಮಾಣದಲ್ಲಿ 28 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ.ರಾಜ್ಯ ಸರ್ಕಾರ ವಿವಿಧ ಅಭಿವೃದ್ಧಿ ನಿಗಮಗಳ ಹಣ ಕಡಿತಗೊಳಿಸುವ ಮೂಲಕ ದಲಿತರ ಕಲ್ಯಾಣಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಗ್ಯಾರಂಟಿ ಹೆಸರಿನಲ್ಲಿ ಜನರನ್ನು ಯಾಮಾರಿಸುತ್ತಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ರಾಜ್ಯದ ಖಜಾನೆ ಖಾಲಿಯಾಗಿದೆ. ಸಾಲದ ಬಲೆಗೆ ಬಿದ್ದಿದೆ ಎಂದು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.