ಸಿ.ಬಿ.ಎಸ್.ಇ ಶಿಕ್ಷಕರ ಜಿಲ್ಲಾ ಕ್ರೀಡಾಕೂಟ : ದೆಹಲಿ ಸೆಂಟರ್ ಶಾಲಾ ಶಿಕ್ಷಕರ ಸಾಧನೆ
ರಾಣೇಬೆನ್ನೂರು 16 : ಇಲ್ಲಿನ ಹುಣಸಿಕಟ್ಟಿ ರಸ್ತೆಯ, ಖನ್ನೂರು ವಿದ್ಯಾನಿಕೇತನ, ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ಇತ್ತೀಚೆಗೆ, ಸಿ.ಬಿ.ಎಸ್.ಇ ಶಾಲೆಗಳ ಜಿಲ್ಲಾ ಮಟ್ಟದಲ್ಲಿ, ಶಿಕ್ಷಕರ ಕ್ರೀಡಾಕೂಟವು ಸ್ಪರ್ಧಾತ್ಮಕವಾಗಿ ನಡೆಯಿತು. ಹಾವೇರಿ ಜಿಲ್ಲಾ ಮಟ್ಟದಲ್ಲಿ ಇರುವ ಸಿಬಿಎಸ್‌ಇ ಶಾಲೆಗಳ ನೂರಾರು ಶಿಕ್ಷಕ - ಶಿಕ್ಷಕಿಯರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಎಂದಿನಂತೆ ಸಾಧನೆ ಮೆರೆದಿರುವ, ದೆಹಲಿ ಸೆಂಟ್ರಲ್ ಶಾಲೆಯ ಶಿಕ್ಷಕಿಯರು ಅಪ್ರತಿಮ ಸಾಧನೆ ಮೆರೆದು ಕೀರ್ತಿ ತಂದಿದ್ದಾರೆ. ಮಹಿಳೆಯರ ಥ್ರೋ ಬಾಲ್ ಆಟದಲ್ಲಿ ದ್ವಿತೀಯ ಸ್ಥಾನ. ಪ್ರಮೋದ್ ಗುಜ್ಜರ ನೂರು ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಸ್ಪರ್ಧೆಯಲ್ಲಿ ತಂಡದ ನಾಯಕಿ ಚೈತ್ರ ಆರ್. ಕೆ., ಸುನೀತಾ ಯಾದವಾಡ, ಪ್ರತಿಭಾ ಬಿ.ಕೆ. ಸರೋಜಾ ಕುಬಸದ, ಶಿಲ್ಪಾ ಗಾಣಿಗೇರ, ಪ್ರಫುಲ್ಲಾ ಜಿ.ಸಿ.ಶಾಂತಾ ಬೆಳ್ಳೊಡಿ, ಚೈತ್ರಾ ಜಾದವ್, ಚೈತ್ರ ಹಿರೇಮಠ ಸೇರಿದಂತೆ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯ ಶಾಲಿನಿ ತೊಗಟವೀರ ಅವರು, ವ್ಯಕ್ತಿತ್ವ ನಿರ್ಮಾಣಕ್ಕೆ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಚಟುವಟಿಕೆ ಜೊತೆಗೆ ಕ್ರೀಡೆಯ ಬಗ್ಗೆ ತಿಳುವಳಿಕೆ ನೀಡಬೇಕಾದ ಇಂದಿನ ಅಗತ್ಯವಿದೆ ಎಂದರು.
ಶಿಕ್ಷಕರು ಸಮಗ್ರ ಜ್ಞಾನವಂತರಾದರೆ, ತಮ್ಮಲ್ಲಿ ಕಲಿಯುವ ವಿದ್ಯಾರ್ಥಿಗಳು ಪರಿಪೂರ್ಣರಾಗಿ ವ್ಯಕ್ತಿತ್ವ ನಿರ್ಮಿಸಿಕೊಳ್ಳಲು ಸಾಧ್ಯವಾಗುವುದು ಎಂದ ಅವರು, ತಮ್ಮ ಶಿಕ್ಷಣ ಸಂಸ್ಥೆಯು ಇಂತಹ ಸ್ಪರ್ಧಾತ್ಮಕ ಕಾರ್ಯಕ್ರಮಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತದೆ ಎಂದು, ಕ್ರೀಡಾ ಸಾಧಕರಿಗೆ ಅಭಿನಂದಿಸಿದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ತೊಗಟವೀರ ಅವರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಶಿಕ್ಷಕರು ಆಡಳಿತ ಮಂಡಳಿ ಸದಸ್ಯರು ಮತ್ತಿತರರು ಗಣ್ಯರು ಉಪಸ್ಥಿತರಿದ್ದರು.