ಬಸ್ ದರ ಹೆಚ್ಚಳ ಪ್ರಸ್ತಾಪ ಖಂಡನೆ
ಇಂಡಿ 03: ಹೆಣ್ಣುಮಕ್ಕಳಿಗೆ ಕೊಟ್ಟು, ಗಂಡು ಮಕ್ಕಳ ಜೇಬಿನಿಂದ ಕಿತ್ತುಕೊಂಡ ಕಾಂಗ್ರೆಸ್ ಸರ್ಕಾರ ಎಂದು ತಾಂಬಾ ಗ್ರಾಮದ ಬಿಜೆಪಿ ಮುಖಂಡರಾದ ಶಿವರಾಜ್ ಕೆಂಗನಾಳ ಲೇವಡಿ ಮಾಡಿದರು.ರಾಜ್ಯದಲ್ಲಿ 5 ಪಂಚ ಗ್ಯಾರೆಂಟಿಗಳಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಕೆ ಎಸ್ ಆರ್ ಟಿ ಸಿ ನಿಗಮಗಳು ಮುಳುಗುವ ಹಂತಕ್ಕೆ ಬಂದಿದೆ ಎಂಬ ನೆಪ ಹೇಳಿ ನಮ್ಮ ರಾಜ್ಯದ ಹೆಣ್ಣು ಮಕ್ಕಳಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಿ, ಅದನ್ನು ಗಂಡು ಮಕ್ಕಳ ಜೇಬಿನಿಂದ ಕಿತ್ತುಕೊಳ್ಳುವ ಹುನ್ನಾರದಿಂದ ರಾಜ್ಯದಲ್ಲಿ ಜನವರಿ 5 ರಿಂದ ಸಾರಿಗೆ ಬಸ್ ಚಾರ್ಜ್ ಶೇಕಡ 15ರಷ್ಟು ಹೆಚ್ಚಿಗೆ ಮಾಡಿ,ಏಳನೇ ಗ್ಯಾರೆಂಟಿ ಗಂಡು ಮಕ್ಕಳ ತಲೆಗೆ ಕಟ್ಟುತ್ತಿದೆ. ಮತ್ತೆ ಯಾಕೇ ಪ್ರೀ ಬಸ್ ಶಕ್ತಿ ಯೋಜನೆ ಅಂತಾ ಎಂದು ಖಾರವಾಗಿ ಪ್ರಶ್ನೆ ಮಾಡಿ, ಪತ್ರಿಕಾ ಹೇಳಿಕೆಗೆ ಮಾತನಾಡಿದ ಕರವೇ ಅಧ್ಯಕ್ಷರು ಹಾಗೂ ಜಿಲ್ಲಾ ಉಪಾಧ್ಯಕ್ಷರು ಬಿಜೆಪಿ ರೈತ ಮೋರ್ಚಾ ವಿಜಯಪುರ ಶಿವರಾಜ್ ಕೆಂಗನಾಳ ಆಕ್ರೋಶ ವ್ಯಕ್ತಪಡಿಸಿದರು.