ಬಸ್ ಚಾಲಕನ ಸಮಯ ಪ್ರಜ್ಞೆ: ತಪ್ಪಿದ ಅವಘಡ

ಉಗಾರ-ಅಥಣಿ ಮಾರ್ಗದ ಮೋಳೆ ಹಳ್ಳದ ಹತ್ತಿರ ಸಂಭವಿಸಿದ ಅಪಘಾತದಲ್ಲಿ ಗದ್ದೆಯಲ್ಲಿ ಹೋದ ನಿಂತ ಅಥಣಿ ಡಿಪೊ ಬಸ್.

ಕಾಗವಾಡ 30: ಅಥಣಿಯಿಂದ ಉಗಾರಕ್ಕೆ ಬರುವ ಅಥಣಿ ಡಿಪೊ ಬಸ್ಸ ವೇಗವಾಗಿ ಹೋಗುತ್ತಿರುವಾಗ ಬಸ್ಸಿನ ಪಾಟಾ ಮುರೆದ ಪರಿಣಾಮ ಮೋಳೆ ಹಳ್ಳದಲ್ಲಿ ಉರುಳುವ ಸಮಯದಲ್ಲಿ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಪಕ್ಕದ ಕಬ್ಬಿನ ಗದ್ದೆಯಲ್ಲಿ ಬಸ್ಸು ಸಿಲುಕಿಸಿ ಸಂಭವಿಸುವ ಅವಘಡ ತಪ್ಪಿಸಿದ ಘಟಣೆ ಉಗಾರ-ಅಥಣಿ ಮಾರ್ಗದ ಮೋಳೆ ಹಳ್ಳದ ಹತ್ತಿರ ಸಂಭವಿಸಿದೆ. 

ಗುರುವಾರ ಮಧ್ಯಾಹ್ನ ಅಥಣಿ ಡಿಪೊ ಬಸ್ಸ್ ಉಗಾರಕ್ಕೆ ಬರುವಾಗ ಮೋಳೆ ಹಳ್ಳದ ಹತ್ತಿರ ಬಸ್ಸಿನ ಪಾಟಾ ಆಕಸ್ಮಿಕವಾಗಿ ಮುರಿಯಿತು. ಬಸ್ ಚಾಲಕನಾದ ಜೆ.ಎಸ್.ಚಾಕರಿ ಇವರು ವೇಗವಾಗಿ ಓಡುವ ಬಸ್ಸವನ್ನು ಕಬ್ಬಿನ ಗದ್ದೆಗೆ ತಿರುಗಿಸಿ, ಆಗುವ ಅನಾಹುತ ತಪ್ಪಿಸಿದ್ದಾರೆ, 

ಆಳವಾದ ಹಳ್ಳದಲ್ಲಿ ಬಸ್ ಉರುಳುವ ಸಾಧ್ಯತೆಯಿತ್ತು. ಬಸ್ಸಿನಲ್ಲಿ 13 ಪ್ರಯಾಣಿಕರಿದ್ದರು. ಇದರಲ್ಲಿಯ ಸುಶೀಲಾ ಅಂಬಿ, ರೂಪಾಲಿ ಅಂಬಿ(ಕುಡಚಿ), ಲತಾ ಕಸಕ್ತಿ(ಕೃಷ್ಣಾ ಕಿತ್ತುರ), ಮಹಾದೇವಿ ಬಾಗಡಿ, ಭಿಮಪ್ಪಾ ಬಾಗಡಿ(ಅಥಣ) ಇವರಿಗೆ ಸಣ್ಣು ಪುಟ್ಟ ಗಾಯಗಳು ಆಗಿದ್ದು, ಚಿಕಿತ್ಸೆಗೆ ಅಥಣಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಥಣಿ ಡಿಪೊ ಕಂಟ್ರೊಲರ್ ವೈ.ಕೆ.ಉಪ್ಪಾರ ಭೇಟಿನೀಡಿ ಪ್ರಯಾಣಿಕರಿಗೆ ಶಾಂತಿ ಹೇಳಿದ್ದಾರೆ. ಬಸ್ ಕಂಡಕ್ಟರ್ ಸುನೀಲ ಗಾಡಿವಡ್ಡರ ಮತ್ತು ಚಾಲಕರಿಗೆ ಯಾವುದೇ ಗಾಯಗಳಾಗಿಲ್ಲಾ ಎಂದು ಕಂಟ್ರೋಲರ್ ವೈ.ಕೆ.ಉಪ್ಪಾರ ಹೇಳಿದರು.