ಮೈಸಾಳ ಬಳಿ ಬಸ್ ಅಪಘಾತ..! ಕಂದಕ್ಕೆ ಉರುಳಿದ ರಾಜ್ಯ ಸಾರಿಗೆ ಬಸ್.. ಹಲವರಿಗೆ ಗಾಯ..
ಕಾಗವಾಡ 19 : ಮೈಶಾಳ ಬಳಿ ಕಾಗವಾಡ-ಮೈಶಾಳ ರಸ್ತೆಯಲ್ಲಿ ವಾಯ್ಯವ್ಯ ಕರ್ನಾಟಕ ಸಾರಿಗೆ ಬಸ್‌ಯೊಂದು ಟ್ರಾಕ್ಟರ್ ಓವರಟೇಕ್ ಮಾಡುತ್ತಿದ್ದ ವೇಳೆ ಮುಂದೆ ಬಂದ ಲಾರಿ ತಪ್ಪಿಸಲು ಹೋಗಿ ರಸ್ತೆ ಬದಿಯ ತೆಗ್ಗಿನಲ್ಲಿ ಉರುಳಿ ಬಿದ್ದು ಅಪಘಾತ ಸಂಭಿಸಿರುವ ಘಟನೆ ಬುಧವಾರ ದಿ. 19 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಸಂಭವಿಸಿದೆ. ಈ ಬಸ್ ಮಿರಜ್‌ನಿಂದ ಸಿಂದಗಿಗೆ ಹೊರಟಿತ್ತು. ಬಸ್ಸಿನಲ್ಲಿ ಸುಮಾರು 40 ಜನರು ಪ್ರಯಾಣಿಸುತ್ತಿದ್ದು ಸುಮಾರು 23 ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಮಿರಜನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ಬೀಳುತ್ತಿದ್ದಂತೆ ಸ್ಥಳೀಯರಿಂದ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದು ಸ್ಥಳಕ್ಕೆ ಕಾಗವಾಡ ಬಸ್ ಡಿಪೊ ಮ್ಯಾನೇಜರ್ ಭೇಟಿ ನೀಡಿದ್ದಾರೆ.