ಲೋಕದರ್ಶನ ವರದಿ
ಯಲಬುರ್ಗಾ 25: ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಪ್ರತಿ ನಿತ್ಯ ಕುಕನೂರು ತಾಲೂಕಿನ ಇಟಗಿ ಗ್ರಾಮದ ಆದರ್ಶ ಶಾಲೆಗೆ ಬಸ್ ಸೌಲಭ್ಯ ಅತ್ಯಂತ ಕಡಿಮೆ ಇದ್ದು ಇದರ ಬಗ್ಗೆ ಹಲವು ಬಾರಿ ಶಾಸಕರು ಹಾಗೂ ತಾಪಂ ಸಭೆಯಲ್ಲಿ ಸಾರಿಗೆ ಸಂಸ್ಥೆ ಘಟಕದ ವ್ಯವಸ್ಥಾಪಕರಿಗೆ ತಿಳಿಸಿದ್ದರು ಇವರು ಯಾವ ಕ್ರಮ ತೆಗೆದುಕೊಂಡಿರುವದಿಲ್ಲಾ ಎಂದು ಕರವೇ ಯುವಸೇನೆ ತಾಲೂಕ ಘಟಕದ ಗೌರವ ಅಧ್ಯಕ್ಷ ಕಲ್ಲೇಶಪ್ಪ ಕರಮುಡಿ ಹೇಳಿದರು.
ಪಟ್ಟಣದಲ್ಲಿ ತಹಸೀಲ್ದಾರ ರಮೇಶ ಅಳವಂಡಿಕರ್ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು,
ತಾಲೂಕಿಗೆ ಕೇವಲ ಒಂದು ಆದರ್ಶ ವಿದ್ಯಾಲಯವಿದ್ದು ಅದು ದೂರದ ಇಟಗಿ ಗ್ರಾಮದಲ್ಲಿ ಮಾತ್ರ ಇದ್ದು ಯಲಬುಗರ್ಾ ಸುತ್ತ ಮುತ್ತಲಿನ ಅನೇಕ ಗ್ರಾಮಗಳ ಮಕ್ಕಳು ಯಲಬುಗರ್ಾ ಪಟ್ಟಣಕ್ಕೆ ಆಗಮಿಸುತ್ತಾರೆ ಆದರೆ ಇಲ್ಲಿಂದ ಇಟಗಿಗೆ ಹೋಗಲು ಬಸ್ಗಳು ಇಲ್ಲದೆ ವಿದ್ಯಾಥರ್ಿಗಳು ಘಂಟೆಗಟ್ಟಲೇ ಬಸ್ ನಿಲ್ದಾಣದಲ್ಲೇ ಕಾಲ ಕಳೆಯುವಂತಾಗಿದೆ ಪ್ರತಿ ದಿನ ಆದರ್ಶ ಶಾಲೆಗೆ 70ಕ್ಕೂ ಹೆಚ್ಚು ವಿದ್ಯಾಥರ್ಿಗಳು ಹೊಗುತ್ತಿದ್ದು ಅದರ ಜೊತೆಗೆ ಕುಕನೂರಿನ ವಿವಿಧ ಶಾಲೆ ಕಾಲೇಜುಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾಥರ್ಿಗಳು ಪ್ರಯಾಣಿಸುತ್ತಿದ್ದು ಬಸ್ಗಳ ಕೊರತೆಯಿಂದ ಶಾಲಾ ಮಕ್ಕಳು ಪಡುವ ಪಾಡನ್ನು ನೋಡಿದರೇ ಎಂತವರು ಸಹಿತ ಮರುಗದೆ ಇರಲಾರರು ಎಂದರು.
ಕರವೇ ಯುವ ಸೇನೆ ತಾಲೂಕ ಅಧ್ಯಕ್ಷ ಶಿವಕುಮಾರ ನಾಗನಗೌಡರ ಮಾತನಾಡಿ, ಯಲಬುಗರ್ಾ ಘಟಕದಿಂದ ಹೆಚ್ಚಿನ ವಾಹನಗಳನ್ನ ಕೇವಲ ಬೆಂಗಳೂರಿಗೆ ಬಿಡುತ್ತಿದ್ದು ಸ್ಥಳೀಯ ಜನರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲಾ ಇನ್ನೂ ಹಲವಾರು ಹಳ್ಳಿಗಳಿಗಂತು ಯಾವಾಗಲೋ ಒಂದು ಸಾರಿ ಬಂದು ಹೋಗುತ್ತಿದ್ದರು ಯಾರು ಇತ್ತ ಗಮನ ಹರಿಸುತ್ತಿಲ್ಲಾ ಆದ್ದರಿಂದ ಮುಂದಿನ ದಿನಗಳಲ್ಲಾದರು ಶಾಲಾ ವಿದ್ಯಾಥರ್ಿಗಳಿಗೆ ಬೆಳಿಗ್ಗೆ ಮತ್ತು ಶಾಲೆ ಬಿಟ್ಟ ನಂತರ ಮರಳಿ ಬರಲು ಬಸ್ಗಳ ವ್ಯವಸ್ಥೆ ಶೀಘ್ರವಾಗಿ ಮಾಡಬೇಕು ಇಲ್ಲಾವಾದರೆ ಶಾಲಾ ಮಕ್ಕಳ ಜೊತೆ ಎಲ್ಲಾ ಸಂಘಟನೆಯವರು ಸೇರಿಕೊಂಡು ಉಗ್ರ ಪ್ರತಿಭಟನೆ ಮಾಡಲಾಗುವದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಶಿವಕುಮಾರ ನಿಡಗುಂದಿ, ಈಶ್ವರ ಕಲಕಬಂಡಿ, ಯಮನೂರಪ್ಪ ನಾಯಕ, ಸೇರಿದಂತೆ ಅನೇಕರು ಹಾಜರಿದ್ದರು.