ಕಟ್ಟಡ ಭೂಮಿ ಪೂಜೆ, ಆಟದ ಮೈದಾನ ಉದ್ಘಾಟನೆ
ತಾಳಿಕೋಟಿ 08: ತಾಲೂಕಿನ ಅಸ್ಕಿ ಗ್ರಾಮದ ಶಾಂತಿನಿಕೇತನ ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ವಿದ್ಯಾಸಂಸ್ಥೆಗಳ ನೂತನ ಎರಡು ಎಕರೆ ಜಮೀನಿನಲ್ಲಿ ನೂತನ ಕಟ್ಟಡ ಭೂಮಿ ಪೂಜಾ ಹಾಗೂ ಆಟದ ಮೈದಾನದ ಉದ್ಘಾಟನಾ ಸಮಾರಂಭವನ್ನು ಎಲ್ಲ ಸಮಾಜದ ಮುಖಂಡರು ಸೇರಿ ಶುಕ್ರವಾರ ನೆರವೇರಿಸಿದರು. ಊರಿನ ಮುಖಂಡರಾದ ಎಸ್.ಕೆ. ದೆಸಾಯಿ ಸಂಸ್ಥೆಯ ಅಧ್ಯಕ್ಷ ಎಸ್. ಎಸ್. ಅಮರಖೇಡ, ಪ್ರಭುಗೌಡ ಅ ಬಿರಾದಾರ, ಮಲ್ಲಣ್ಣ ಹಿರೇಕುರುಬರ, ರಸುಲಸಾ ವಾಲಿಕರ, ಶರಣಯ್ಯ ಹಿರೇಮಠ, ಡಿ.ಎಸ್.ಕೊಳ್ಳಿ, ವಿಶ್ವನಾಥ ಬಿರಾದಾರ, ಎಸ್.ಎಂ.ಪೂಜಾರಿ, ಮಲ್ಲು ದಿಡ್ಡಿಮನಿ, ಈರ್ಪ ತಳವಾರ, ರಾಜು ತಳವಾರ, ಮಲ್ಲಪ್ಪ ಅಂಗಡಿ, ತಿಪ್ಪಣ್ಣ ಮಾದರ, ಬೆಕಿನಾಳ ಗ್ರಾಮ ಹಿರಿಯರಾದ ಎನ್‌ಎಸ್ ಪಾಟೀಲ ಬಾಬುಗೌಡ ಕರ್ಕಳ್ಳಿ ಬಸನಗೌಡ ಒಡ್ಡೊಡಗಿ ನಿಂಗನಗೌಡ ಕರ್ಕಳ್ಳಿ ಬನ್ನಟ್ಟಿ ಗ್ರಾಮದ ಹಿರಿಯರಾದ ಬಿ ಎನ್ ಪಾಟೀಲ್ ಶಿವನಗೌಡ ಪಾಟೀಲ ಜಲಪುರ ಗ್ರಾಮದಿಂದ ವೀರಗಂಟಪ್ಪ ಬ್ಯಾಕೋಡ, ಸಿದ್ದನಗೌಡ ಶಿವನಗೌಡ ಕರಿಗೌಡ, ನೀರಲಗಿ ಗ್ರಾಮದಿಂದ ಆರ್. ಸಿ.ಪಾಟೀಲ, ರಾಜುಗೌಡ ಎಂ ಯಾಳಗಿ ವೀರಾಪುರದಿಂದ ಮಲ್ಲನಗೌಡ ದೊಡ್ಮನಿ ಹೊಸಳ್ಳಿಯಿಂದ ಸೋಮನಗೌಡ ಹಾದಿಮನಿ ಗೊಟಗಣಿಕೆಯಿಂದ ಸೂಗರೆಡ್ಡಿ ಬೆಂಡೆಗುಂಬಳ್ ಶರಣಗೌಡ ಬಿರಾದಾರ ಬಂಟನೂರದಿಂದ ಎಸ್ ಬಿ ಆಲಾಳ ಅಸ್ಕಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗ ಹಾಗೂ ಪ್ರೌಢಶಾಲೆಯ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗ ಪಂಚಾಯಿತಿಯ ಎಲ್ಲ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಇದ್ದರು.