ಸಾರ್ವಜನಿಕ ಜನನಿಬಿಡ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಶೌಚಾಲಯ ನಿರ್ಮಿಸಿ : ಬಸವರಾಜ

Build more toilets in public congested areas: Basavaraja

ಸಾರ್ವಜನಿಕ ಜನನಿಬಿಡ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಶೌಚಾಲಯ ನಿರ್ಮಿಸಿ : ಬಸವರಾಜ

ಶಿಗ್ಗಾವಿ18  : ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿರುವ ಹಾಗೂ ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಆಗಮಿಸುವ ಜನರ ಸಂಖ್ಯೆಯೂ ಸಹಿತ ಹೆಚ್ಚಾಗುತ್ತಿರುವ ಕಾರಣ ಜನಕ್ಕೆ ಮಲಮೂತ್ರ ವಿಸರ್ಜನೆಗೆ ತೊಂದರೆ ಆಗುತ್ತಿದೆ ಎಂದುಶಿಗ್ಗಾವಿ ತಾಲೂಕ ಅಧ್ಯಕ್ಷ ಬಸವರಾಜ ಹುರಳ್ಳಿ ಹೇಳಿದರು.  ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಮುಖಾಂತರ ಮನವಿ ನೀಡಿ ಮಾತನಾಡಿದ ಅವರು ಸಾರ್ವಜನಿಕ ಜನನಿಬಿಡ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಶೌಚಾಲಯ ನಿರ್ಮಿಸಿಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಯುವ ಘಟಕ ಅಧ್ಯಕ್ಷ ಶಂಭುಲಿಂಗಪ್ಪ ಕೆರಿ ಮಾತನಾಡಿ ಶೌಚಾಲಯಗಳಿಲ್ಲದೇ ಎಲ್ಲೆಂದರಲ್ಲಿ ಸಾರ್ವಜನಿಕರು ಮಲಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಪಟ್ಟಣದ ಸೌಂದರ್ಯದ ಜೊತೆಗೆ ಸ್ವಚ್ಚತೆಗೆ ಹಿನ್ನಡೆಯಾಗುತ್ತದೆ ಎಂದರು.   ತಾಲೂಕು ಉಸ್ತುವಾರಿ ಅಧ್ಯಕ್ಷ ರವಿ ಕಡಕೋಳ ಮಾತನಾಡಿ ತ್ವರಿತಗತಿಯಲ್ಲಿ ಶೌಚಾಲಯ ನಿರ್ಮಿಸಿ ನಿರ್ವಹಣೆ ಮಾಡಬೇಕು. ಒಂದು ವೇಳೆ ಕ್ರಮ ಜರುಗಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಪುರಸಭೆ ಎದುರು ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪದಾಧಿಕಾರಿಗಳಾದ ರೂಪ ಬಂಗಿ, ಸಿದ್ದನಗೌಡ ಪಾಟೀಲ, ಶಿವು ನಾಗನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.