ತರಬೇತಿಗಳಿಂದ ಕೌಶಲ್ಯ ಬೇಳೆಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಿ: ಆದಿತ್ಯ

ಲೋಕದರ್ಶನ ವರದಿ

ಹಾರೂಗೇರಿ:  ಹಳ್ಳಿಗಳಲ್ಲಿ ಹೈನುಗಾರಿಕೆಗೆ ಬೇಕಾದ ಎಲ್ಲಾ ಸೌಕರ್ಯಗಳು ಇರುವುದರಿಂದ ಸ್ವ ಸಹಾಯ ಸಂಘದ ಸದಸ್ಯರುಗಳು ಹೆಚ್ಚು ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಿ ಹೆಚ್ಚಿನ ಆದಾಯವನ್ನು ಪಡೆದು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಹಾಗೂ ನಬಾರ್ಡವು ಯಾವುದೇ ವ್ಯಕ್ತಿಯನ್ನು ಪ್ರತಿನಿಧಿಯಾಗಿ (ಏಜಂಟ್) ನೇಮಿಸಿರುವುದಿಲ್ಲಾ, ಹಲವಾರು ಜನ ನಬಾರ್ಡನ ಪ್ರತಿನಿಧಿ ಎಂದು ಜನರಿಗೆ ನಂಬಿಸಿ ಮೋಸಮಾಡುತ್ತಿದ್ದಾರೆ. ಹಾಗಾಗಿ ತಾವುಗಳು ಅದಕ್ಕೆ ಅವಕಾಶ ಕೊಡದೇ ತಮಗೆ ಸಹಾಯ ಧನ ಸಾಲ ಬೇಕಾದಲ್ಲಿ ನೇರವಾಗಿ ಬ್ಯಾಂಕುಗಳಿಗೆ ಹೋಗಿ ಅಜರ್ಿಗಳನ್ನು ಸಲ್ಲಿಸಿ, ಅಲ್ಲಿಂದಲೇ ಸಾಲ ಸೌಲತ್ತುಗಳನ್ನು ಪಡೆದುಕೊಳ್ಳಬಹುದು. ಹೈನುಗಾರಿಕೆಯು ಕೇವಲ ಒಂದು ಉದ್ಯೋಗ ಅಷ್ಟೇ ಆಗದೇ ಒಂದು ಉದ್ದಿಮೆಯಾಗಿ ಬೇಳೆಯಬೇಕು. ಎಂದು ಬೆಳಗಾವಿಯ ನಬಾರ್ಡ ಬ್ಯಾಂಕಿನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಆದಿತ್ಯ ಮಾವಿನ ಕುರವೆ ಹೇಳಿದರು.

ಅವರು ನಬಾರ್ಡ ಬೆಂಗಳೂರು ಹಾಗೂ ಜನನಿ ಸಮಗ್ರ ಅಭಿವೃದ್ಧಿ ಸಂಸ್ಥೆ ಮುನ್ಯಾಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಲೆವಲಿಹುಡ್ ಎಂಟರಪ್ರೈಜಸ್ ಡೆವೆಲಪಮೆಂಟ್ ಪ್ರೋಗ್ರಾಮ್ (ಐಇಆಕ) ಯೋಜನೆಯಡಿಯಲ್ಲಿ ಅಲಖನೂರಿನ 7 ದಿನಗಳ ಹೈನುಗಾರಿಕೆ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು. ಈ ರೀತಿಯ ತರಬೇತಿಗಳನ್ನು ಮಾಡಲು ನಬಾರ್ಡ ಬ್ಯಾಂಕು ಕೂಡಾ ಸಹಾಯ ಧನ ನೀಡುತ್ತದೆಂದು ಹೇಳಿದರು. 

ಮುಖ್ಯ ಅಥಿತಿ ಲೀಡ್ ಬ್ಯಾಂಕ ಜಿಲ್ಲಾ ವ್ಯವಸ್ಥಾಪಕ ಬಿ. ನಾಗರಾಜು ಮಾತನಾಡಿ, ನಬಾರ್ಡ ದಿಂದ ಬಂದ ಪ್ರತಿಯೊಂದು ಯೋಜನೆಗೂ ನಮ್ಮ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಸೌಲಭ್ಯಗಳನ್ನು ಸಂಘಗಳಿಗೆ ನೀಡಿದ್ದೇವೆ. ಏಜಂಟ್ಗಳನ್ನು ನಂಬಿ ಮೋಸ ಹೋಗದಿರಿ. ಯವುದೇ ರೀತಿಯ ಸಾಲ ಸಹಾಯಧನ ಸೌಲಭ್ಯಗಳು ಬಂದರೂ ಅವೂ ಬ್ಯಾಂಕುಗಳಿಂದಲೇ ವಿತರಣೆಯಾಗುತ್ತವೆ ಆದ್ದರಿಂದ ಯಾರಿಗೂ ಲಂಚ ಕೋಡುವ ಅವಶ್ಯಕತೆ ಇರುವುದಿಲ್ಲಾ ಎಂದರು. 

ಮತ್ತೊರ್ವ ಅಥಿತಿಗಳಾದ ಅಂಗನವಾಡಿ ಮೇಲ್ವಚಾರಕಿ ಎಸ್.ಎಸ್. ತಮದಡ್ಡಿ ಮಾತನಾಡಿ, ಸ್ವ ಸಹಾಯ ಸಂಘದ ಸದಸ್ಯರುಗಳು ಇಂತಹ ತರಬೇತಿಗಳನ್ನು ಪಡೆದು ಅದರ ಸದುಪಯೋಗ ಪಡೆದುಕೋಳ್ಳಬೇಕು. ಈ ತರಬೇತಿಯನ್ನು ಆಯೋಜಿಸಿದ ನಬಾರ್ಡ ಹಾಗೂ ಜನನಿ ಸಂಸ್ಥೆಯ ಕಾರ್ಯ ನಿಜವಾಗಲೂ ಶ್ಲಾಘನಿಯ ಎಂದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರಾದ ಸದಾಶಿವ ಪೂಜೇರಿ, ಸೋನವ್ವಾ ಸನದಿ, ಕರೆಪ್ಪಾ ಪೂಜೇರಿ, ರಾಮಪ್ಪಾ ಪೂಜೇರಿ, ಸಂಸ್ಥೆ ಸಿಬ್ಬಂದಿ ವಿಶ್ವನಾಥ ಯಾಳವರಮಠ, ಕೆಂಪವ್ವಾ ಬಿರಾದಾರ ಹಾಗೂ ಅಂಗಣವಾಡಿ ಕಾರ್ಯಕತರ್ೆಯರು, ಆಶಾ ಕಾರ್ಯಕತರ್ೆಯರು ಮತ್ತು ಆಯ್ದ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರುಗಳು ಭಾಗಿಯಾಗಿದ್ದರು.

ಗ್ರಾ.ಪಂ. ಅಧ್ಯಕ್ಷ ಶಂಕರ ಕಾಂಬಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಜನನಿ ಸಂಸ್ಥೆಯ ಕಾರ್ಯದಶರ್ಿ ಆನಂದ ಸುಳ್ಳನವರ ಎಲ್ಲರನ್ನು ಸ್ವಾಗತಿಸಿ, ತರಬೇತಿಯ ಲಾಭಗಳನ್ನು ಹೇಳಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಭರಮು ಪೂಜೇರಿ ನೀರೂಪಣೆ ಮಾಡಿದರು. ಜನನಿ ಸಂಸ್ಥೆಯ ಸಿಬ್ಬಂದಿ ಪ್ರಭಾಕರ ಮುಗಳಖೋಡ ವಂದಿಸಿದರು.