ಧಾರವಾಡ, 02: ನಮ್ಮ ಕನ್ನಡ ನಾಡು ಹಲವು ಹಿರಿಮೆಗಳನ್ನು ಹೊಂದಿದ ಚಿನ್ನದ ನಾಡು. ವಿದ್ಯಾಥರ್ಿ ದೆಸೆಯಲ್ಲಿಯೇ ಎಲ್ಲರೂ ನಮ್ಮ ನಾಡು ನುಡಿಯ ಅಭಿಮಾನ ಬೆಳೆಸಿಕೊಳ್ಳಬೇಕೆಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯ ಅಬ್ದುಲ್ ವಾಜೀದ್ ಖಾಜಿ ಕರೆ ನೀಡಿದರು.
ಅವರು ಡಾ.ಎಚ್.ಎಫ್. ಕಟ್ಟಿಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನ ಹಾಗೂ ಹಿರೇಮಲ್ಲೂರು ಈಶ್ವರನ್ ಪದವಿ-ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಜಂಟಿ ಆಶ್ರಯದಲ್ಲಿ ಜಿಲ್ಲೆಯ ಪ್ರೌಢ ಶಾಲಾ ವಿದ್ಯಾಥರ್ಿಗಳಿಗಾಗಿ ಹಮ್ಮಿಕೊಂಡಿದ್ದ ಕನ್ನಡ ನಾಡು-ನುಡಿ-ಸಂಸ್ಕೃತಿ ಮೌಲ್ಯಗಳನ್ನು ಬಿಂಬಿಸುವ ಸಮೂಹ ಗೀತಗಾಯನ ಸ್ಪಧರ್ೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಸ್ಪಧರ್ೆಗಳನ್ನು ಉದ್ಘಾಟಿಸಿದ ಡಿಡಿಪಿಐ ಆರ್.ಎಸ್. ಮುಳ್ಳೂರ ಮಾತನಾಡಿ, ಕನ್ನಡ ನಾಡು-ನುಡಿ-ಸಂಸ್ಕೃತಿ ಮೌಲ್ಯಗಳ ಘನತೆಯನ್ನು ಅರಿತು ಸದಾಕಾಲ ಕನರ್ಾಟಕದ ಹಿರಿಮೆಗಾಗಿ ವಿಕಾಸಕ್ಕಾಗಿ ವಿದ್ಯಾಥರ್ಿಗಳು ಶ್ರಮಿಸಬೇಕು ಎಂದರು.
ಡೆಪ್ಯೂಟಿ ಚೆನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನದ ಗೌರವ ನಿದರ್ೆಶಕ ಎಸ್.ಬಿ. ಕೊಡ್ಲಿ ಅಧ್ಯಕ್ಷತೆವಹಿಸಿದ್ದರು. ಪ್ರತಿಷ್ಠಾನದ ಸಹಾಯಕ ನಿದರ್ೆಶಕ ಶಂಕರ ಗಂಗಣ್ಣವರ ಸ್ವಾಗತಿಸಿದರು. ಹೇಮಂತ ಲಮಾಣಿ ವಂದಿಸಿದರು.
ಜಿಲ್ಲೆಯ 23 ಪ್ರೌಢ ಶಾಲೆಗಳ ತಂಡಗಳು ಕನ್ನಡ ನಾಡು-ನುಡಿ-ಸಂಸ್ಕೃತಿ ಮೌಲ್ಯಗಳನ್ನು ಬಿಂಬಿಸುವ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಹುಬ್ಬಳ್ಳಿಯ ಜಿ.ಕೆ. ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಪ್ರಥಮ ಸ್ಥಾನ ಪಡೆಯಿತು. ನವಿಲುಗುಂದ ಮಾಡೆಲ್ ಹೈಸ್ಕೂಲ್ (ದ್ವಿತೀಯ) ಹಾಗೂ ನಗರದ ಕಮಲಾಪೂರ ಸರಕಾರಿ ಪ್ರೌಢ ಶಾಲೆ (ತೃತೀಯ), ಕಲಘಟಗಿಯ ಬಾಲಕಿಯರ ಸರಕಾರಿ ಪ್ರೌಢ ಶಾಲೆ ಮತ್ತು ತಾಲೂಕಿನ ಕುರುಬಗಟ್ಟಿ ಸರಕಾರಿ ಪ್ರೌಢ ಶಾಲೆಗಳು ಕ್ರಮವಾಗಿ 4 ಹಾಗೂ 5 ನೆಯ ಸ್ಥಾನವನ್ನು ತಮ್ಮದಾಗಿಸಿಕೊಂಡವು. ವಿಜೇತ ತಂಡಗಳಿಗೆ ನಗದು ಹಾಗೂ ಪುಸ್ತಕ ಪುರಸ್ಕಾರ ನೀಡಲಾಯಿತು.