ಗದಗ ಜಿಲ್ಲೆಗೆ ವಿಶೇಷ ಮಾನ್ಯತೆಯೊಂದಿಗೆ ಸರ್ವಧರ್ಮಗಳ ಜನಮೆಚ್ಚುಗೆಯ ಬಜೆಟ್ : ಅನಿಲ ಗರಗ
ಗದಗ 07:-ಇಂದು ರಾಜ್ಯದ ಪ್ರಸಕ್ತ ಸಾಲಿನ 2025-26 ನೇ ಸಾಲಿನ ಆರ್ಥಿಕ ವರ್ಷದ ಆಯವ್ಯೆಯ ಮಂಡಿಸಿದ ನಾಡಿನ ಜನಮೆಚ್ಚಿದ ಅಹಿಂದ ನಾಯಕ ಗ್ಯಾರಂಟಿಗಳ ಸರದಾರ ಸನ್ಮಾನ್ಯ ಸಿದ್ದರಾಮಯ್ಯನವರು ನಾಡಿನ ಸಮಸ್ತ ನಾಗರಿಕರಿಗೆ ಸಿಹಿ ಊಟದ ಭ್ಯಾಗ್ಯವನ್ನೇ ಕರುಣಿಸಿದಂತಾಗಿದೆ ಎಂದು ಗದಗ ಬೆಟಗೇರಿ ನಗರಸಭೆಯ ಮಾಜೀ ಸದಸ್ಯರು ಹಾಗೂ ಕಾಂಗ್ರೇಸ್ ಮುಖಂಡರಾದ ಅನಿಲ ಗರಗ ರವರು ನೆಚ್ಚಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.
ಪ್ರಸಕ್ತ ಸಾಲಿನ ಬಜೆಟ್ ಸಮಸ್ತ ನಾಡಿನ ನಾಗರಿಕರಿಗೆ ವೈಶಿಷ್ಟೇಪೂರ್ಣ ವಿಶೇಷ ಉಡುಗೊರೆಯನ್ನೇ ನೀಡಿದಂತಾಗಿದೆ. ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮವನ್ನು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರೆ್ಡ ಮಾಡುವ ಮೂಲಕ ಗದಗ ಜಿಲ್ಲೆಗೆ ವಿಶೇಷ ಮೆರಗನ್ನು ನೀಡಿರುವರು. ಅದರಂತೆ ಅತಿಥಿ ಉಪನ್ಯಾಸಕರ ಕೈ ಹಿಡಿದ ಈ ಬಜೆಟ್ ಅವರಿಗೆ ನೀಡಲಾಗುವ ಪ್ರೋತ್ಸಾಹಧನವನ್ನು 2000 ಹೆಚ್ಚುವರಿಯಾಗಿ ಘೋಷಣೆ ಮಾಡಿದೆ. ಜಿಲ್ಲೆಯ ದಂಬಳ ಗ್ರಾಮದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಅನುಷ್ಠಾನಕ್ಕೆ ಮುಂದಾಗುವ ಮೂಲಕ ಗದಗ ಜಿಲ್ಲೆಗೆ ವಿಶೇಷ ಸ್ಥಾನಮಾನ ನೀಡಲಾಗಿದೆ.
ಅದರಂತೆ ಶಾಲಾ ಮಕ್ಕಳ ಸೈಕ್ಷಣಿಕ ಹಿತದೃಷ್ಟಿಯಿಂದ ರಾಜ್ಯಾದ್ಯಠ 5000 ಎಲ್ ಕೆ ಜಿ ಮತ್ತು ಯು ಕೆ ಜಿ ಶಾಲೆಗಳನ್ನು ತೆರೆಯಲು ಮುಂದಾಗಿದೆ.ರಾಜ್ಯದ ಶಾಲೆಗಳಲ್ಲಿ ಒಂದನೇ ತರಗತಿಯಿಂದ 10 ನೇ ತರಗತಿಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರದ 6 ದಿನಗಳು ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ, ಬಾಗಲಕೋಟೆಯಲ್ಲಿ ರಾಜೀವ್ ಗಾಂಧಿ ವಿಶ್ವ ವಿದ್ಯಾಲಯ ಸ್ಥಾಪನೆ, ರಾಜ್ಯದಲ್ಲಿ 500 ಪಬ್ಲಿಕ್ ಶಾಲೆಗಳ ಸ್ಥಾಪನೆ, 2000 ಉಪನ್ಯಾಸಕರ ನೇಮಕಾತಿಗೆ ಘೋಷಣೆ,
ಅದರಂತೆ ರಾಜ್ಯದಲ್ಲಿ ರೈತರ ಹಿತರಕ್ಷಣೆಗೆ ಮುಂದಾಗಿ ವನ್ಯಜೀವಿಗಳ ದಾಳಿಯಿಂದ ಮೃತರಾದರೆ ಅವರ ಕುಟುಂಬಕ್ಕೆ 20 ಲಕ್ಷ ರೂಪಾಯಿಗಳ ಪರಿಹಾರಧನ ಘೋಷಣೆ
ರಾಜ್ಯದಲ್ಲಿರುವ 37 ಲಕ್ಷ ಅತೀ ಸಣ್ಣ ರೈತರಿಗೆ 28000 ಕೋಟಿ ರೂಪಾಯಿಗಳ ಸಾಲದ ಯೋಜನೆ, ಕೃಷಿ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುವ ಲೈಸೆನ್ಸ್ ಹೊಂದಿರುವವರು ಅಕಾಲಿಕ ಮೃತರಾದರೆ ಅವರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಆರ್ಥಿಕ ಸಹಾಯಧನ, ತೊಗರಿ ಬೆಳೆಗಾರರಿಗೆ 500 ಕೋಟಿ ರೂಪಾಯಿಗಳ ಹೆಚ್ಚುವರಿ ಪ್ರೋತ್ಸಾಹಕ ಅನುದಾನ.
ಮಹಿಳೆಯರು ಶ್ರೇಯೋಭಿವೃದ್ಧಿಗಾಗಿ, ಅವರ ಆರ್ಥಿಕ ನೆರವಿಗೆ ಧಾವಿಸಿದ ರಾಜ್ಯ ಸರಕಾರ ಸ್ತ್ರೀ ಶಕ್ತಿ ಸಂಘದ ಮೂಲಕ ಮಹಿಳೆಯರ ನೆರವಿಗೆ ಮುಂದಾಗಿದೆ. ಹೀಗೆ ಸಮಸ್ತ ನಾಡಿನ ನಾಗರಿಕರ ಉನ್ನತಿಗಾಗಿ ವಿಶೇಷವಾಗಿ ಮಾನ್ಯತೆಯನ್ನು ನೀಡುವ ಮೂಲಕ ಜನಸ್ನೇಹಿ ಬಜೆಟ್ ಮಂಡನೆ ಮಾಡಿದ ಘನ್ ರಾಜ್ಯ ಸರಕಾರದ ಆಡಳಿತ ವೈಖರಿಯನ್ನು ಗದಗ ಬೆಟಗೇರಿ ನಗರಸಭೆಯ ಮಾಜೀ ಸದಸ್ಯರು ಹಾಗೂ ಕಾಂಗ್ರೇಸ್ ಮುಖಂಡರಾದ ಅನಿಲ ಗರಗ ರವರು ಮೆಚ್ಚುಗೆಯನ್ನು ವ್ಯೆಕ್ತಪಡಿಸಿರುತ್ತಾರೆ.