ಶಾಲು, ಮಾಲೆ ಬದಲು ಪುಸ್ತಕ, ಪೆನ್ನು, ನೋಟಬುಕ್ಕ ತನ್ನಿರಿ : ಖಾದ್ರಿ
ಶಿಗ್ಗಾವಿ 03 : ಶಾಲು, ಮಾಲೆ, ಪೋಟೋ ಪ್ರೇಮ, ಸ್ವೀಟ ಸನ್ಮಾನಕ್ಕೆ ತರುವ ಬದಲಾಗಿ ಪುಸ್ತಕ, ಪೆನ್ನು, ನೋಟಬುಕ್ಕ ತಂದು ಕೊಟ್ಟರೇ ನಾನು ನಿಮ್ಮ ಹೆಸರಿನಲ್ಲಿ ತಾಲೂಕಿನ ಬಡಮಕ್ಕಳಿಗೆ ವಿತರಿಸುತ್ತೇನೆ ಎಂದು ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ ಹೇಳಿದರು.
ತಾಲೂಕಿನ ಹುಲಗೂರ ನಿವಾಸದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನನ್ನ ಅಭಿಮಾನಿಗಳು ಅಥವಾ ಮುಖಂಡರು, ಕಾರ್ಯಕರ್ತರು ಶುಭ ಹಾರೈಸಲು ಬರುವಾಗ ಶಾಲು, ಮಾಲೆ, ಪೋಟೋ ಪ್ರೇಮ, ಸ್ವೀಟ ತಂದು ಅನಾವಶ್ಯಕವಾಗಿ ಹಣ ವ್ಯಯ ಮಾಡುವ ಬದಲಾಗಿ ಮಕ್ಕಳ ವಿಧ್ಯಾಭ್ಯಾಸಕ್ಕೆ ಪುಸ್ತಕ, ಪೆನ್ನು, ನೋಟಬುಕ್ಕ ತಂದು ಕೊಡಿ ಅವುಗಳನ್ನು ನಮ್ಮ ಕ್ಷೇತ್ರದ ಬಡವ, ದಿನದಲಿತ, ಅಲೇಮಾರಿ ಮಕ್ಕಳಿಗೆ ನಿಮ್ಮ ಹೆಸರು ಹೇಳುವುದರ ಮೂಲಕ ವಿತರಿಸುತ್ತೇನೆ ಎಂದರು.
ಖಾದ್ರಿಯವರಿಗೆ ಸನ್ಮಾನಿಸಲು ಹೋದಾಗ ಶಾಲು, ಮಾಲೆ ಬದಲಾಗಿ ನೋಟಬುಕ್ಕ ಕೊಟ್ಟು ಹಾವೇರಿ ಜಿಲ್ಲೆ ವಕ್ಪ ಬೋರ್ಡ ಸದಸ್ಯ ಮಹ್ಮದಹನೀಫ ಅಂಬೂರ ನೇತೃತ್ವದಲ್ಲಿ ಸನ್ಮಾನಿಸಿದರು. ಅಬ್ದುಲ್ ಜಲೀಲ, ಮಹ್ಮದ ಹಸನೇನ ಉಪಸ್ಥಿತರಿದ್ದರು.