ಬೈಲಹೊಂಗಲ 06: ಕೊರೊನಾ ವೈರಸ್ ವಿರುದ್ಧ ಸಮರ ಸಾರಿ ಜನರ ರಕ್ಷಣೆಗೆ ಕಟ್ಟಿ ಬದ್ಧರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಶ್ರೀಮಾತಾ ದುಗರ್ಾ ಪರಮೇಶ್ವರಿ ದೇವಸ್ಥಾನ ಧರ್ಮದಶರ್ಿ ಡಾ.ಮಹಾಂತಯ್ಯಶಾಸ್ತ್ರೀ ಅರಾದ್ರಿಮಠ, ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ ನೇತೃತ್ವದಲ್ಲಿ ಭಾನುವಾರ ಅಲ್ಪೋಪಹಾರ ನೀಡಲಾಯಿತು.
ಪಟ್ಟಣದ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಮಾತೃಹೃದಯದಿಂದ ಉಪ್ಪಿಟ್ಟು, ಶೀರಾ, ಚೀ, ಬಿಸ್ಕೀಟ್, ಕುಡಿಯುವ ನೀರು ನೀಡಲಾಯಿತು. ವೇದಮೂತರ್ಿ ಡಾ.ಮಹಾಂತಯ್ಯಶಾಸ್ತ್ರೀ ಮಾತನಾಡಿ, ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೊಲೀಸರು, ಪುರಸಭೆ ಕಾಮರ್ಿಕರು ಹಗಲಿರುಳು ಶ್ರಮೀಸುತ್ತಿದ್ದಾರೆ. ಇದು ಉಳಿದೆಲ್ಲರಿಗೂ ಮಾದರಿ ಆಗಿದೆ. ದಾನಿಗಳು ಸ್ವಯಂ ಪ್ರೇರಣೆಯಿಂದ ಬಂಧು ಕೊರೊನಾ ವೈರಸ್ ವಿರುದ್ಧ ಹೋರಾಡಿ ಕರ್ತವ್ಯದಲ್ಲಿ ತೊಡಗಿರುವವರಿಗೆ ಆಹಾರ ನೀಡಬೇಕು. ದೇಶದ ಪ್ರಧಾನಂತ್ರಿಗಳ ಕರೆಗೆ ಎಲ್ಲರು ಸ್ಪಂದಿಸಬೇಕು. ಮನೆ ಬಿಟ್ಟು ಹೊರಗಡೆ ಭಾರದೆ ಮನೆಯಲ್ಲಿಯೇ ಇದ್ದು ಆರೋಗ್ಯವಂತರಾಗಿರಬೇಕು ಎಂದರು.
ನಿವೃತ್ತ ಯೋಧ ಈರಪ್ಪ ಕಾಡೇಶನವರ, ಮಲ್ಲಿಕಾಜರ್ುನ ಏಣಗಿಮಠ, ರವಿಕಿರಣ ಯಾತಗೇರಿ ಹಾಗೂ ಪೋಲಿಸ್ ಸಿಬ್ಬಂದಿ ಇದ್ದರು.