ಬ್ರಾಹ್ಮಣ ಮಹಾಸಭಾ ಚುನಾವಣೆ: ಜಿಲ್ಲಾ ಪ್ರತಿನಿಧಿ ಸ್ಥಾನದಿಂದ ದತ್ತಾತ್ರೇಯ ನಾಡಿಗೇರ ಗೆಲುವು
ರಾಣೇಬೆನ್ನೂರು 15: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ 2024-25 ಸಾಲಿನ ಚುನಾವಣೆಯು, ರವಿವಾರ ನಡೆಯಿತು. ರಾಜ್ಯ ಸಮಿತಿಯ ಕಾರ್ಯಕಾರಿ ಮಂಡಳಿಗೆ ಹಾವೇರಿ ಜಿಲ್ಲಾ ಪ್ರತಿನಿಧಿ ಸ್ಥಾನದಿಂದ ಸ್ಪರ್ಧಿಸಿದ್ದ ದತ್ತಾತ್ರೇಯ ನಾಡಿಗೇರ ಹಾಗೂ ಡಾ: ಸಂಜಯ್ ಎಂ. ನಾಯ್ಕ ಅವರಲ್ಲಿ,629 ಮತಗಳು ಪಡೆದು ದತ್ತಾತ್ರೆಯ ಗೆಲುವು ಸಾಧಿಸಿದರು. 345 ಮತಗಳನ್ನು ಪಡೆದ, ಡಾ,ಸಂಜಯ್ ಪರಾಭವಗೊಂಡರು. ಒಟ್ಟು 25 ಮತಗಳು ತಿರಸ್ಕೃತಗೊಂಡಿವೆ ಎಂದು ಉಪ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಇಂದು ನಡೆದ ಚುನಾವಣೆಯು ಐದು ವರ್ಷಗಳ(2030) ಅವಧಿಯದ್ದಾಗಿದೆ. ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ, ಮಾಲ್ಹಸಾ ಮಾರ್ತಾಂಡಭೈರವ ದೇವಸ್ಥಾನದ ಆವರಣದಲ್ಲಿ ಜಮಾಯಿಸಿದ್ದ, ನಾಡಿಗೇರ ಅವರ ಅಭಿಮಾನಿಗಳು, ಸಮಾಜದ ಮುಖಂಡರು, ಯುವಕರು ಪರಸ್ಪರ ಗುಲಾಲು ಎರಚಿ, ಹೊಮಾಲೆ ಸಮರ್ಿಸಿ, ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು