ಕಾಂಗ್ರೇಸ್ ಸರಕಾರದ ಗೂಂಡಾವರ್ತನೆಯನ್ನು ಖಂಡಿಸಿ ದಿ, 12 ರಂದು ಬೆಳಿಗ್ಗೆ 10 ಗಂಟೆಗೆ ಬ್ರಹತ್ ಪ್ರತಿಭಟನೆ
ಮುದ್ದೇಬಿಹಾಳ 11 : 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಪಂಚಮಸಾಲಿ ಸಮಾಜದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಬೆಳಗಾಂವಿಯಲ್ಲಿ ನಡೆದ ಹೋರಾಟದಲ್ಲಿ ಪೋಲಿಸರು ಪಂಚಮಸಾಲಿ ಸಮಾಜ ಬಾಂಧವರ ಮೇಲೆ ಲಾಠಿ ಪ್ರಹಾರ ನಡೆಸಿದ್ದಲ್ಲದೇ ಸ್ವಾಮಿಗಳನ್ನು ಬಂಧಿಸಿ ಅಪಮಾನಗೊಳಿಸಿದ ಹಿನ್ನೇಲೆಯಲ್ಲಿ ಕಾಂಗ್ರೇಸ್ ಸರಕಾರದ ಗೂಂಡಾವರ್ತನೆಯನ್ನು ಖಂಡಿಸಿ ದಿ, 12 ರಂದು ಬೆಳಿಗ್ಗೆ 10 ಗಂಟೆಗೆ ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿ ಕಾರಣ ತಾಲೂಕಿನ ಸಮಸ್ತ ಪಂಚಮಸಾಲಿ ಹಾಗೂ ವೀರಶೈವ ಲಿಂಗಾಯತ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ನಿಕಟಪೂರ್ವ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ಕರೆ ನೀಡಿದರು.
ಪಟ್ಟಣದ ಹೊರವಲಯದಲ್ಲಿರುವ ಅವರ ಫಾರ್ಮ ಹೌಸನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಕೃಷಿಯನ್ನೇ ಮೂಲ ವೃತ್ತಿಯನ್ನಾಗಿ ನಂಬಿ ಬದುಕುತ್ತಿರುವ ಪಂಚಮಸಾಲಿ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಓದ್ಯೋಗಿಕವಾಗಿ ತೀರಾ ಹಿಂದುಳಿದ ಸಮಾಜಕ್ಕೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸರಿಸಮಾನ ಹಕ್ಕು ಪಡೆದುಕೊಳ್ಳಬೇಕು ಈ ನಿಟ್ಟಿನಲ್ಲಿ 2ಎ ಮೀಸಲಾತಿ ಪಡೆಯುವುದು ಅತ್ಯವಶ್ಯಕವಾಗಿದೆ ಎಂಬುದನ್ನು ಅರಿತುಕೊಂಡು ಕಳೇದ 12 ವರ್ಷಗಳಿಂದ ಲಿಂಗಾಯತ ಪಂಚಮಸಾಲಿ ಸಮಾಜದ ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು 2ಎ ಮೀಸಲಾತಿಗಾಗಿ ಆಗ್ರಹಿಸಿ ನಿರಂತರ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಸಧ್ಯ ಈಗಲೂ ಅವರು ಬೆಳಗಾಂವಿಯಲ್ಲಿ ನಡೆಯುತ್ತಿರುವ ಅಧಿವೇಶದಲ್ಲಿ ಹೋರಾಟದ ಮೂಲಕ ಸರಕಾರ ಕಣ್ಣು ತೆರೆಸುವ ಉದ್ದೇಶಹೊಂದಿದ್ದರು.
ಅದರಂತೆ ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿಯೂ ಸಹ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಕೂಡಲ ಸಂಗಮದಿಂದ ಬೆಂಗಳೂರದವರೆಗೂ ಲಕ್ಷಾಂತರ ಜನ ಸಮಾಜ ಬಾಂದವರೊಂದಿಗೆ ಪಾದಯಾತ್ರೆ ನಡೆಸುವ ಮೂಲಕ ಸರಕಾರಕ್ಕೆ 2ಎ ಮೀಸಲಾತಿ ಬೇಡಿಕೆ ಇಡೇರಿಸಬೇಕು ಎಂದು ಆಗ್ರಹಿಸಿದ್ದರೂ ಆಗ ನಮ್ಮ ಬಿಜೆಪಿ ಸರಕಾರ ಅವರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಲ್ಲದೇ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯವರು 2ಡಿ ಎನ್ನುವ ವಿಶೇಷ ಮೀಸಲಾತಿ ನೀಡುವ ಘೋಷಣೆ ಮಾಡುವ ಮೂಲಕ ಸ್ಪಂದಿಸಿ ಗೌರವಿಸಿದ್ದೇವೆ. ಜೊತೆಗೆ ಪರಿಶಿಷ್ಟ ಪಂಗಡದ ಶೇಕಡಾ3.5 ಇದ್ದದ್ದನ್ನು ಶೇಕಡಾ7.5ರವೆಗೆ ಹೆಚ್ಚಿಸಲಾಯಿತು, ಪರಿಶಿಷ್ಟ ಜಾತಿಗೆ ಪಂಗಡಗಳ ಒಳಮಿಸಲಾತಿ ನೀಡುವ ಬಹುಮುಖ್ಯ ಐತಿಹಾಸಿಕ ನಿರ್ಧಾರವನ್ನು ಕೂಡ ಅಂದಿನ ನಮ್ಮ ಸರಕಾರ ಮಾಡಿದೆ. ಈಗಾಗಲೇ ಹಿಂದಿನ ನಮ್ಮ ಸರಕಾರ ಘೋಷಣೆ ಮಾಡಿ ಆದೇಶಿದೆ ಇನ್ನೇನು ಪ್ರಸ್ತುತ ಕಾಂಗ್ರೇಸ್ ಸರಕಾದ ಮುಖ್ಯಮಂತ್ರಿ ಸಿದ್ರಾಮಯ್ಯನವರು ಅನುಷ್ಠಾನಗೊಳಿಸಬಬೇಕಾಗಿರುವುದು ಅಷ್ಟೇ ಬಾಕಿ ಉಳಿದಿದೆ. ಆ ಸಂದರ್ಭದಲ್ಲಿ ಇದೇ ಕಾಂಗ್ರೇಸ್ ನಲ್ಲಿದ್ದ ಕೆಲ ಶಾಸಕರು ವೀರಾವೇಶದ ಭಾಷಣಗಳನ್ನು ಮಾಡಿ 2ಎ ಮೀಸಲಾತಿ ಆಗ್ರಹಿಸಿದ್ದರು, ಆದರೇ ಸಧ್ಯ ರಾಜ್ಯದಲ್ಲಿ ತಮ್ಮದೆಯಾದ ಸರಕಾರವಿದೆ ದ್ವಂದ ಹೇಳಿಕೆ ನೀಡುವುದನ್ನು ಬಿಟ್ಟು ಯಾಕೆ ಮೀಸಲಾತಿ ಕೊಡಿಸಬಾರದು ಎಂದು ಪ್ರಶ್ನಿಸಿದರು.ಬೆಳಗಾಂವಿಯಲ್ಲಿ ಶಾಂತಿಯುತವಾಗಿ ಲಕ್ಷಾಂತರ ಜನ ಪಂಚಮಸಾಲಿ ಸಮಾಜದ ಮುಖಂಡರೊಂದಿಗೆ ಸ್ವಾಮಿಗಳು ಹೋರಾಟ ಮೆರವಣೆಗೆಯನ್ನ ತಡೆದಿದ್ದಲ್ಲದೇ ಆ ಸಮಾಜದ ಮುಖಂಡರ ಮೇಲೆ ಪೋಲಿಸರನ್ನು ಬಿಟ್ಟು ಲಾಠಿ ಪ್ರಹಾರ ನಡೆಸಿದ್ದಲ್ಲದೇ ಪೂಜ್ಯರನ್ನು ಬಂಧಿಸಿ ಇಡಿ ರಾಜ್ಯದಾಧ್ಯಂತ ಇರುವ ಪಂಚಮಸಾಲಿ ಸಮಾಜಕ್ಕೆ ಅಪಮಾನಗೊಳಿಸಿದ್ದಾರೆ ಈ ಘಟನೆಯನ್ನು ಬಲವಾಗಿ ಖಂಡಿಸುತ್ತೇನೆ. ಈ ನಿಟ್ಟಿನಲ್ಲಿ ದಿ, 12 ರದಂದು ಬೆಳಿಗ್ಗೆ 10 ಗಂಟೆಗೆ ಮುದ್ದೇಬಿಹಾಳ ಪಟ್ಟಣದ ಎಪಿಎಂಸಿಯಲ್ಲಿರುವ ಹನುಮಾನ ದೇವಸ್ಥಾನದಿಂದ ಅಂಬೇಡ್ಕರ ವೃತ್ತದ ಮಾರ್ಗವಾಗಿ, ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಬ್ರಹತ್ ಪ್ರತಿಭಟನೆ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡಲಾಗುವುದು ಎಂದು ತಿಳಿಸಿದರು. ಈ ವೇಳೆ ನಾಲತವಾಡದ ಮುತ್ತು ಸಾಹುಕಾರ ಅಂಗಡಿ, ಪ್ರಭು ಕಡಿ, ಮಲ್ಲಣ್ಣ ಹತ್ತಿ, ಡಾ, ವಿರೇಶ ಪಾಟೀಲ, ಪರುಶುರಾಮ ಢವಳಗಿ, ಶ್ರೀಶೈಲ ದೊಡಮನಿ, ಶಿವರಾಯ ಪ್ಯಾಟಿ ಮಾತನಾಡಿದರು.
ಬಿಜೆಪಿ ತಾಲೂಕಾ ಮಂಡಲದ ಅಧ್ಯಕ್ಷ ಜಗಧೀಶ ಪಂಪಣ್ಣವರ, ಸಂಗಣ್ಣ ಹತ್ತಿ, ಅನೀಲ ಹೊಳಿ, ಬಸಲಿಂಗಪ್ಪ ರಕ್ಕಸಗಿ, ಗುರುಪಾದ ಹೆಬ್ಬಾಳ, ಗುರಲಿಂಗಪ್ಪ ಸುಲ್ಲಳ್ಳಿ, ಶರಣಬಸು ಪಲ್ಲೇದ, ಅಶೋಕ ಕಾಟಿ, ಚನಬಸಪ್ಪಗೌಡ ಹಂಪನಗೌಡರ, ಈರಣ್ಣ ಪಣೇದಕಟ್ಟಿ, ಸಚೀನ ಬಿರಾದಾರ, ಭೀಮನಗೌಡ ಬಿರಾದಾರ, ಮಲ್ಲು ಹುಣಸಗಿ, ಶರಣಗೌಡ ಬೂದಿಹಾಳ, ಗುರಲಿಂಗಪ್ಪ ಬಿರಾದಾರ, ಅಶೋಕ ನಿಡಗುಂದಿ,ಸುಭಾಷ ಬಿದರಕುಂದಿ, ಕುಮಾರ ಸೂಳಿಭಾವಿ, ಈರಣ್ಣ ಪಣೇದಕಟ್ಟಿ, ರಮೇಶ ಢವಳಗಿ, ಮಹಾಂತೇಶ ನಿಡಗುಂದಿ, ಮಲ್ಲಿಕಾರ್ಜನ ಕತ್ತಿ, ಬಸವರಾಜ ಬೂದಿಹಾಳ ಸೇರಿದಂತೆ ಹಲವರು ಇದ್ದರು.