ಎಐಡಿವೈಓ ಯುವಜನ ಸಂಘಟನೆ ವತಿಯಿಂದ ಬೋಸ್‌ರವರ 128ನೇ ಜನ್ಮದಿನಾಚರಣೆ
ಬಳ್ಳಾರಿ 23: ಇಂದು ಎಐಡಿವೈಓ ಯುವಜನ ಸಂಘಟನೆ ವತಿಯಿಂದ ನೇತಾಜಿ ಸುಭಾಷ್‌ಚಂದ್ರ ಬೋಸ್‌ರವರ 128ನೇ ಜನ್ಮದಿನಾಚರಣೆಯನ್ನು ಬಳ್ಳಾರಿ ನಗರದ ಸಂಜಯ್ ಗಾಂಧಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಚರಿಸಲಾಯಿತು.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಹೂಗುಚ್ಚವನ್ನ ಅರ್ಿಸುವುದರ ಮೂಲಕ ಕಾರ್ಯಕ್ರಮ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳಾದ ಡಾ.ಎನ್.ಪ್ರಮೋದ್ ರವರು ಮಾತನಾಡುತ್ತಾ - "ಇಂದು ಭಾರತದಲ್ಲಿ ಯುವಕರಿಗೆ ಉನ್ನತ ವಿಚಾರಗಳ ಅವಶ್ಯಕತೆ ಇದೆ, ಮುಂದಿನ ಯುವಪೀಳಿಗೆ ಬೇರಿಲ್ಲದವರಂತಾಗುತ್ತಿದ್ದಾರೆ. ಹಾಗಾಗಿ ಇಂದಿನ ಪ್ರಸ್ತುತ ದಿನಮಾನಗಳಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂಥವರ ವಿಚಾರಗಳು ಯುವಕರಿಗೆ ಸ್ಪೂರ್ತಿಯಾಗಬೇಕಿದೆ. ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ರಾಜಿರಹಿತ ಹೋರಾಟದ ವಿಚಾರಗಳು ನಾವು ಇನ್ನೂ ಅಧ್ಯಯನ ಮಾಡಬೇಕಾಗಿದೆ. ಇಂತಹ ಮಹಾನ್ ವ್ಯಕ್ತಿಗಳ ವಿಚಾರಗಳನ್ನ ಯುವಕರಿಂದ ದೂರ ಇಡಿಸಲು ಮತ್ತು ಯುವಕರನ್ನ ವೈಚಾರಿಕವಾಗಿ, ನೀತಿ ನೈತಿಕತೆಗಳನ್ನ ದಾರಿ ತಪ್ಪಿಸಲು ನಮ್ಮ ಸರ್ಕಾರಗಳು ಅಶ್ಲೀಲ-ಸಿನಿಮಾ ಸಾಹಿತ್ಯ, ಮದ್ಯ-ಮಾದಕ ವಸ್ತುಗಳ ಹಾಗೂ ಕೋಮುವಾದಗಳಂತಹ ಸಾಮಾಜಿಕ ಪಿಡುಗುಗಳಿಗೆ ಯುವಕರನ್ನ ಬಲಿಕೊಡುತ್ತಿದೆ. ಹಾಗಾಗಿ ಇಂತಹ ಸಂಸ್ಥೆಗಳಿಂದ ಯುವಜನರನ್ನು ಹೊರತರಲು ನೇತಾಜಿಯವರು ಕಂಡ ಧರ್ಮ ನಿರಪೇಕ್ಷ ಪ್ರಜಾತಾಂತ್ರಿಕ ಮೌಲ್ಯಗಳನ್ನ ಯುವಕರಿಗೆ ಪರಿಚಯಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಹಾಗಾಗಿ ನೇತಾಜಿಯವರ ಕಾರ್ಯಕ್ರಮ ಮಾಡುವುದೊಂದೇ ನಮ್ಮ ಉದ್ದೇಶವಾಗದೆ, ಅವರ ವಿಚಾರಗಳನ್ನ ನಮ್ಮ ಜೀವನದಲ್ಲಿ ಸ್ವಲ್ಪವಾದರೂ ಅಳವಡಿಸಿಕೊಂಡು ಅವರ ಆದರ್ಶಗಳನ್ನ ಪಾಲಿಸಿದರೆ ನಾವು ಅವರಿಗೆ ನೀಡುವ ನಿಜವಾದ ಗೌರವ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್ - ಇಂದಿನ ದೇಶದ ಪರಿಸ್ಥಿತಿಯನ್ನ ನಾವೆಲ್ಲ ಗಮನಿಸಿದಾಗ ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರ, ಸಾಂಸ್ಕೃತಿಕ ಅಧಃಪತನಗಳಂತಹ ಸಾಮಾಜಿಕ ಪಿಡುಗುಗಳನ್ನ ಯುವಕರು ಎದುರಿಸುತ್ತಿದ್ದಾರೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ, ಬ್ರಷ್ಟಾಚಾರವನ್ನು ತಡೆಗಟ್ಟಿ ಇಂತಹ ಹಲವಾರು ಯುವಜನರ ಬೇಡಿಕೆಗಳನ್ನು ಎತ್ತುತ್ತಾ ಯುವಕರಲ್ಲಿ ಉನ್ನತ ನೀತಿ ನೈತಿಕತೆ ಮೌಲ್ಯಗಳನ್ನು ಬೆಳೆಸುವಲ್ಲಿ ಮತ್ತು ಕ್ರಾಂತಿಕಾರಿ ಹೋರಾಟಗಾರರ ಜೀವನವನ್ನು ಪರಿಚಯಿಸುತ್ತ ಯುವಕರ ಮಧ್ಯ ಉನ್ನತ ವಿಚಾರಗಳನ್ನು ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಯುವಜನ ಸಂಘಟನೆ ಕಾರ್ಯನಿರ್ವಹಿಸುತ್ತಿದೆ. ಇಂತಹ ಸಾಮಾಜಿಕ ಪಿಡುಗುಗಳನ್ನ ಮೆಟ್ಟಿ ನಿಲ್ಲುವಲ್ಲಿ ಯುವಕರು ಮುಂದೆ ಬರಬೇಕಾಗಿದೆ. ಹಾಗಾಗಿ ಯುವಕರಿಗೆ ಆದರ್ಶವಾಗ ಬೇಕಾಗಿರುವಂತಹ ನೇತಾಜಿ, ಭಗತ್ ಸಿಂಗ್ ರಂತಹ ವಿಚಾರಗಳನ್ನ ಇನ್ನು ಹೆಚ್ಚು ಹೆಚ್ಚು ಯುವಕರ ಮಧ್ಯೆ ಚರ್ಚೆ ಮಾಡಲು ಇಂತಹ ಮಹಾನ್ ವ್ಯಕ್ತಿಗಳ ದಿನಗಳು ಬಂದಾಗ ಎಐಡಿವೈಒ ಯುವಜನ ಸಂಘಟನೆ ನಿರಂತರ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ ಇಂತ ಹೋರಾಟಗಳಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಮುಖ್ಯಸ್ಥರಾದ ಬಸವರಾಜ್ ಸರ್ ಅವರು ಉಪಸ್ಥಿತರಿದ್ದರು. ಹಾಗೂ ಎಐಡಿವೈಓ ಸದಸ್ಯರುಗಳಾದ ಅರುಣ್ ಭಗತ್, ಬೊಮ್ಮಯ್ಯ ಕಾಲೇಜಿನ ವಿದ್ಯಾರ್ಥಿಗಳಾದ ವೇಣು, ಸಂದೀಪ, ಗೋವರ್ಧನ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು