ಬೀಳಗಿ ಪಪಂ ಅಧ್ಯಕ್ಷರಾಗಿ ಬೋರ್ಜಿ ಉಪಾಧ್ಯಕ್ಷರಾಗಿ ಗಡ್ಡದವರ ಆಯ್ಕೆ

Borji was chosen as vice-president by Baragi Papam as the president

ಬೀಳಗಿ ಪಪಂ ಅಧ್ಯಕ್ಷರಾಗಿ ಬೋರ್ಜಿ ಉಪಾಧ್ಯಕ್ಷರಾಗಿ ಗಡ್ಡದವರ ಆಯ್ಕೆ  

ಬೀಳಗಿ 03: ಇಲ್ಲಿನ ಪಟ್ಟಣ ಪಂಚಾಯತಿಯ ಆಡಳಿತ ಮಂಡಳಿಯ ಉಳಿದ ಅವಧಿಗಾಗಿ ಜರುಗಿದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯ ರಾಮಚಂದ್ರ ಯ ಬೋರ್ಜಿ ಅಧ್ಯಕ್ಷರಾಗಿ ಮತ್ತು ಕಲಾವತಿ ವಿ ಗಡ್ಡದವರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ತಹಸೀಲ್ದಾರರಾದ ವಿನೋದ ಹತ್ತಳ್ಳಿ ತಿಳಿಸಿದರು. 

   ಇಲ್ಲಿನ ಪಪಂ ಸಭಾಭವನದಲ್ಲಿ ಜರುಗಿದ ಚುನಾವಣೆಯ ಪ್ರಕ್ರೀಯೆ ಕುರಿತು ಮಾತನಾಡಿದ ಅವರು ಪಟ್ಟಣ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಚುನಾವಣೆ ಜರುಗಿದ್ದು ಸಾಮಾನ್ಯ ವರ್ಗ ಬ ಕ್ಕೆ ಮಿಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ರಾಮಚಂದ್ರ ಬೋರ್ಜಿ ಮತ್ತು ಯಲಗುರದಪ್ಪ ಮಾರುತಿ ಬೋರ್ಜಿ ಅವರು ನಾಮಪತ್ರ ಸಲ್ಲಿಸಿದ್ದರು, ಇಬ್ಬರಲ್ಲಿ ಅತಿ ಹೆಚ್ಚು 13 ಮತಗಳನ್ನು ಪಡೆದು ರಾಮಚಂದ್ರ ಬೋರ್ಜಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, ಯಲಗುರದಪ್ಪ (ರಾಜು) ಬೋರ್ಜಿ ಅವರು 7 ಮತಗಳನ್ನು ಪಡೆದು ಫರಾಭವಗೊಂಡಿದ್ದಾರೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಿಸಲಾಗಿದ್ದ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಕಲಾವತಿ ವಿಠ್ಠಲ ಗಡ್ಡದವರ ಹಾಗೂ ಅಬೇದಾಬೇಗಂ ಜಹಾಂಗೀರ ಜುಮನಾಳ  ಅವರು ನಾಮಪತ್ರ ಸಲ್ಲಿಸಿದ್ದರು, ಇಬ್ಬರಲ್ಲಿ ಅತಿ ಹೆಚ್ಚು 13 ಮತಗಳನ್ನು ಪಡೆದು ಕಲಾವತಿ ಗಡ್ಡದವರ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, 7 ಮತಗಳನ್ನು ಪಡೆದು ಅಬೇದಾಬೇಗಂ ಜುಮನಾಳ ಅವರು ಪರಾಭವಗೊಂಡಿದ್ದಾರೆ ಎಂದು ತಿಳಿಸಿದರು. 

 ಪಪಂ ಸದಸ್ಯರ ಬಲಾಬಲ- 

 ಪಪಂನಲ್ಲಿ ಬಿಜೆಪಿಯ 11 ಸದಸ್ಯರು ಮತ್ತು ಲೋಕಸಭಾ ಸದಸ್ಯ ಪಿ ಸಿ ಗದ್ದಿಗೌಡರ,ವಿಧಾನ ಪರಿಷತ್ತ ಸದಸ್ಯ ಹಣಮಂತ ನಿರಾಣಿ ಅವರು ಸೇರಿ ಒಟ್ಟು 13 ಮತಗಳಿದ್ದವು,ನಾಮಪತ್ರ ಸಲ್ಲಿಸಿದ್ದ ಬಿಜೆಪಿಯ ರಾಮಚಂದ್ರ ಬೋರ್ಜಿ ಮತ್ತು ಕಲಾವತಿ ಗಡ್ಡದವರ ಅವರು ತಲಾ 13 ಮತಗಳನ್ನು ಪಡೆದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು.ಕಾಂಗ್ರೆಸ ಪಕ್ಷ 6 ಸದಸ್ಯರು ಮತ್ತು ಪಕ್ಷೇತರ 1 ಸದಸ್ಯರು ಹಾಗೂ ಶಾಸಕ ಜೆ ಟಿ ಪಾಟೀಲ ಸೇರಿ ಒಟ್ಟು 8 ಮತಗಳಿದ್ದವು, ಆದರೆ ಶಾಸಕರು ಗೈರಾಗಿದ್ದರಿಂದ ಚುನಾವಣೆ ಪ್ರಕ್ರೀಯೆಯಲ್ಲಿ ನಾಮಪತ್ರ ಸಲ್ಲಿಸಿದ್ದ ಯಲಗುರದಪ್ಪ ಬೋರ್ಜಿ ಮತ್ತು ಅಬೇದಾಬೇಗಂ ಜುಮನಾಳ ಅವರು ತಲಾ 7 ಮತಗಳನ್ನು ಪಡೆದು ಪರಾಭವಗೊಂಡರು. ಚುನಾವಣಾ ಪ್ರಕ್ರೀಯೆಯಲ್ಲಿ ಕೈ ಎತ್ತುವ ಪ್ರಕ್ರೀಯೆ ನೆಡೆದಿದ್ದು, ನೂತನ ಅಧ್ಯಕ್ಷ ಉಪಾಧ್ಯಕ್ಷರ ಪರವಾಗಿ ಕೈ ಎತ್ತಿದ ಬಿಜೆಪಿ 13 ಸದಸ್ಯರು ಬಿಜೆಪಿ ಅಭ್ಯರ್ಥಿಗಳಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಜಯಶೀಲರಾಗಲು ಕಾರಣರಾದರು. 

ಬಿಜೆಪಿ ವಿಜಯೋತ್ಸವ ಹಿ  

ಅಧ್ಯಕ್ಷರಾಗಿ ರಾಮಚಂದ್ರ ಬೋರ್ಜಿ ಮತ್ತು ಉಪಾಧ್ಯಕ್ಷರಾಗಿ ಕಲಾವತಿ ಗಡ್ಡದವರು ಆಯ್ಕೆ ಘೋಷಣೆಯಾಗುತ್ತಿದಂತೆಯೇ ಪಟಾಕಿ ಸಿಡಿಸಿ ಸಿಹಿ ಹಂಚಿ, ಗುಲಾಲು ಎರಚಿ ಕಾರ್ಯಕರ್ತರು ಸಂಭ್ರಮಿಸಿದರು. 

ಸಂಸದ ಪಿ ಸಿ ಗದ್ದಗೌಡರ ಮಾತನಾಡಿ ಬೀಳಗಿ ಪಟ್ಟಣ ಪಂಚಾಯತನಲ್ಲಿ ಬಿಜೆಪಿ ಬಹುಮತವಿದ್ದು ಬಿಜೆಪಿಯಿಂದ ಮಾತ್ರ ಅಭಿವ್ರದ್ದಿ ಸಾದ್ಯವಿದ್ದು ಅದಕ್ಕಾಗಿ ಚುನಾವಣೆಯಲ್ಲಿ ಭಾಗವಹಿಸಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಿಂತು ಬೀಳಗಿ ಪಟ್ಟಣ ಅಭಿವ್ರದ್ದಿ ಆಗಲಿ ಎನ್ನುವ ಆಶೆಯೊಂದಿಗೆ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದರು. 

ವಿಧಾನ ಪರಿಷತ್ತ ಸದಸ್ಯ ಹಣಮಂತ ನಿರಾಣಿ, ಹಿರಿಯರಾದ ಎಂ ಎಂ ಶಂಬೋಜಿ, ವಿ ಜಿ ರೇವಡಿಗಾರ, ಬಸವರಾಜ ಉಮಚಗಿಮಠ, ಹೊಳೆಬಸು ಬಾಳಾಶೆಟ್ಟಿ, ಮಲ್ಲಿಕಾರ್ಜುನ ಅಂಗಡಿ, ಪ್ರಕಾಶ ಕಟಗೇರಿ, ರಾಮಣ್ಣಾ ಕಾಳಪ್ಪಗೋಳ, ವಿಠ್ಠಲ ನಿಂಬಾಳಕರ, ಶ್ರೀಶೈಲ ಯಂಕಂಚಿಮಠ, ನಿಂಗಪ್ಪ ದಂಧರಗಿ, ವಿಠ್ಠಲ ಯತ್ನಟ್ಟಿ, ಈರಣ್ಣ ತೋಟದ, ದ್ರಾಕ್ಷಾಯಣಿ ಜಂಬಗಿ, ಕಾವೇರಿ ರಾಠೋಡ ಸೇರಿದಂತೆ ಪಪಂನ ಬಿಜೆಪಿಯ ಎಲ್ಲ ಸದಸ್ಯರು ಇದ್ದರು.