ಕಾಗವಾಡ 04: ಕಾಗವಾಡ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ವಲಯದ ಎಲ್ಲ ಸಕರ್ಾರಿ ಮತ್ತು ಅನುದಾನಿತ ಶಾಲೆಯ ಸುಮಾರು 1.80 ಲಕ್ಷ ಪುಸ್ತಕಗಳ ಬೇಡಿಕೆಯಿದ್ದು, ಇದರಲ್ಲಿ ಶೇ. 91 ಪುಸ್ತಕಗಳು ಲಭ್ಯವಾಗಿದ್ದು, ಮೇ 28ರ ವರೆಗೆ ಎಲ್ಲ ಶಾಲೆಗಳಲ್ಲಿ ತಲುಪಿಸಿ, 29ರ ಶಾಲಾ ಪ್ರಾರಂಭ ದಿನದಂದು ವಿದ್ಯಾಥರ್ಿಗಳಿಗೆ ಹಂಚಲಾಗಿದೆ ಎಂದು ಕಾಗವಾಡ ಬಿಇಒ ಇಲಾಖೆಯ ಶಿಕ್ಷಣ ಸಂಯೋಜಕ ಎಸ್.ಬಿ.ಪಾಟೀಲ ಹೇಳಿದರು.
ಕಾಗವಾಡದಲ್ಲಿ ಅವರನ್ನು ಸಂಪಕರ್ಿಸಿ ವಿಚಾರಿಸಿದಾಗ ಸನ್ 2019-20ರ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಸಕರ್ಾರದ ಶಿಕ್ಷಣ ಇಲಾಖೆಗೆ ಬಿಇಒ ಎ.ಎಸ್.ಜೋಡಗೇರಿ ಇವರ ಮಾರ್ಗದರ್ಶನದಲ್ಲಿ ಬೇಡಿಕೆ ಸಲ್ಲಿಸಿದ್ದರಿಂದ ಸಕಾಲದಲ್ಲಿ ಪಠ್ಯಪುಸ್ತಕಗಳು ಲಭ್ಯವಾಗಿವೆ. ಇವುಗಳನ್ನು ಶಾಲಾ ಪ್ರಾರಂಭ ದಿನದಂದು ಶಾಲೆಗಳಿಗೆ ತಲುಪಿಸಲಾಗಿದೆ.
ಮರಾಠಿ ಭಾಷೆಯ ವಿದ್ಯಾಥರ್ಿಗಳಿಗಾಗಿ ಶೇ. 88ರಷ್ಟು ಪಠ್ಯಪುಸ್ತಕಗಳು ಲಭ್ಯವಾಗಿವೆ. ಕಾಗವಾಡ ತಾಲೂಕಿನಲ್ಲಿ 1 ರಿಂದ 10ನೇ ತರಗತಿ ವರೆಗಿನ 106 ಸಕರ್ಾರಿ ಶಾಲೆಗಳಿದ್ದು, 28 ಅನುದಾನಿತ ಶಾಲೆಯ ವಿದ್ಯಾಥರ್ಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆ.
ಅನುದಾನರಹಿತ ಶಾಲೆಯ ವಿದ್ಯಾಥರ್ಿಗಳಿಗೆ ಮಾರಾಟ ಪುಸ್ತಕಗಳ ವ್ಯವಸ್ಥೆ ಮಾಡಲು ಸಕರ್ಾರಕ್ಕೆ ಆನ್ಲೈನ್ ಮುಖಾಂತರ ಹಣ ಪಾವತಿಸಿ, ಬೇಡಿಕೆ ಸಲ್ಲಿಸಬಹುದು. ಈ ವರೆಗೆ ಶೇ. 15ರಷ್ಟು ಶಾಲೆಯ ವಿದ್ಯಾಥರ್ಿಗಳಿಗೆ ಪೂರೈಕೆ ಮಾಡಲಾಗಿದೆ.
ಈ ವರೆಗೆ ಲಭ್ಯವಾದ ಪುಸ್ತಕಗಳಲ್ಲಿ 10ನೇ ತರಗತಿ 3 ಟೈಟಲ್, 2ನೇ ಮತ್ತು 5ನೇ ತರಗತಿಯ ವಿದ್ಯಾಥರ್ಿಗಳಿಗೆ ಪರಿಸರ ವಿಜ್ಞಾನ ಪುಸ್ತಕ ಸರಬರಾಜುವಾಗಿಲ್ಲಾ. ಜೂನ್ 5ರ ವರೆಗೆ ಸರಬರಾಜುವಾಗಲಿದೆ ಎಂದರು.
ಸಮವಸ್ತ್ರ ವಿತರಣೆ:
ಕಾಗವಾಡ ಬಿಇಒ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ ಶಾಲೆಯ ವಿದ್ಯಾಥರ್ಿಗಳಿಗೆ ಸಕರ್ಾರ ಸಮವಸ್ತ್ರವಿತರಣೆ ಮಾಡಿದ್ದರಿಂದ ಜೂನ್ 5ರ ವರೆಗೆ ಶಾಲೆಯ ವಿದ್ಯಾಥರ್ಿಗಳಿಗೆ ತಲುಪುವ ವ್ಯವಸ್ಥೆ ಮಾಡಲಾಗಿದೆ.ಕಳೇದ ವರ್ಷದಂತೆ, ಈ ವರ್ಷ ಯಾವುದೇ ತೊಂದರೆ ಆಗಲಿಲ್ಲಾ. ಸಕಾಲದಲ್ಲಿ ಬೇಡಿಕೆ ಸಲ್ಲಿಸಿದ್ದರಿಂದ ಎಲ್ಲ ವಿದ್ಯಾಥರ್ಿಗಳ ಬೇಡಿಕೆ ಪೂರೈಸಲಾಗಿದೆ ಎಂದು ಎಸ್.ಬಿ.ಪಾಟೀಲ ತಿಳಿಸಿದರು.
ಕಾಗವಾಡ ದೈಹಿಕ ಶಿಕ್ಷಣ ಪರಿವೀಕ್ಷಕ ಸಿ.ಎಂ.ಸಾಂಗಲೆ, ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿ ಸೋನಾಜೆ, ಸಹ ಶಿಕ್ಷಕರು ಉಪಸ್ಥಿತರಿದ್ದರು.