ಮೈಲಾರಲಿಂಗೇಶ್ವರ ಸಮಿತಿ ಸದಸ್ಯರಿಂದ ಸನ್ಮಾನ ಸ್ವೀಕರಿಸಿದ ಬೊಮ್ಮಾಯಿ
ಶಿಗ್ಗಾವಿ 16: ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದ ವೇಳೆ ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಹಾಗೂ ಅಧಿವೇಶನ ಇರುವ ಕಾರಣ ಬರಲು ಆಗಿರಲಿಲ್ಲ ಇಂದು ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಮಾಡಿಸಿ ದೇವರ ಕೃಫೆಗೆ ಪಾತ್ರರಾದರು. ನಂತರ ಸಮಿತಿ ಸದಸ್ಯರಿಂದ ಸನ್ಮಾನವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಸುಭಾಸ ಚವ್ಹಾಣ, ಸಂಗಪ್ಪ ಕಂಕನವಾಡ, ನಿಂಗಪ್ಪ ಇಂಗಳಗಿ, ಮಾಲತೇಶ ಕಂಕಣವಾಡ,ರಾಜಣ್ಣ ಗಾಣಿಗೇರ, ಸಂತೋಷ ಮೊರಬದ, ಮಂಜುನಾಥ ಬ್ಯಾಹಟ್ಟಿ, ಸೋಮಣ್ಣ ಮತ್ತೂರ, ಮಾಲತೇಶ ಯಲಿಗಾರ ಸೇರಿದಂತೆ ಗಂಗಾಧರ ಸಾತಣ್ಣವರ, ಶಿವಪ್ರಸಾದ ಸುರಗೀಮಠ, ಜಯಣ್ಣಾ ಹೆಸರೂರ, ದೇವಣ್ಣಾ ಚಾಕಲಬ್ಬಿ, ಶಿವಾನಂದ ಮ್ಯಾಗೇರಿ, ವಿಶ್ವನಾಥ ಹರವಿ, ದಯಾನಂದ ಅಕ್ಕಿ, ಉಮೇಶ ಗೌಳಿ, ಆನಂದ ಸುಭೇದಾರ, ಸಂಜನಾ ರಾಯ್ಕರ, ನಿಂಗಪ್ಪ ಬೆಂಚಳ್ಳಿ, ಪ್ರತೀಕ ಕೊಳೇಕರ, ಸಚಿನ ಮಡಿವಾಳರ, ಅರ್ಜಪ್ಪ ಲಮಾಣಿ, ಕಾಳಪ್ಪ ಬಡಿಗೇರ ಸೇರಿದಂತೆ ಸದ್ಬಕ್ತರು ಉಪಸ್ಥಿತರಿದ್ದರು.