ರಕ್ತಕ್ಕೆ ಧರ್ಮ ಜಾತಿ ಇಲ್ಲ ಶಾಸಕ ಬಸವರಾಜ ಶಿವಣ್ಣನವರ

ರಕ್ತಕ್ಕೆ ಧರ್ಮ ಜಾತಿ ಇಲ್ಲ ಶಾಸಕ ಬಸವರಾಜ ಶಿವಣ್ಣನವರ Blood has no religion or caste: MLA Basavaraja Shivanna

 ಬ್ಯಾಡಗಿ  02 : ರಕ್ತ ಎಲ್ಲಿಯೂ ಉತ್ಪಾದನೆ ಆಗುವದಿಲ್ಲ. ಆದರೆ ಅರೋಗ್ಯವಂತ ಮನುಷ್ಯರ ದೇಹದಿಂದ ಮಾತ್ರ ರಕ್ತ ದೊರಕುತ್ತದೆ. ಎಲ್ಲರ ರಕ್ತ ಕೆಂಪು ಬಣ್ಣ ಹೊಂದಿದ್ದು ಅದಕ್ಕೆ ಯಾವದೇ ಧರ್ಮ ಜಾತಿ ಇಲ್ಲ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ರಕ್ತ ದಾನವು ಶ್ರೇಷ್ಠ ದಾನವಾಗಿದ್ದು ಸಾಯುವ ರೋಗಿಗಳನ್ನು ಬದುಕಿಸಿದ ಪುಣ್ಯ ರಕ್ತ ದಾನ ಮಾಡಿದರಿಗೆ ಸಿಗುತ್ತದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಇಂದು ಪಟ್ಟಣದ ವರ್ತಕರ ಸಂಘದ ಬಯಲು ಸಭಾ ಭವನದಲ್ಲಿ ಮೆಣಸಿನಕಾಯಿ ವರ್ತಕರ ಸಂಘ. ರೋಟರಿ ಕ್ಲಬ್‌. ಜಿಲ್ಲಾ ಅರೋಗ್ಯ ಇಲಾಖೆ ಹಾಗೂ ಸರಕಾರಿ ತಾಲೂಕು ಆಸ್ಪತ್ರೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರದ ಉದ್ಘಾಟನೆ ಮಾಡಿ ಮಾತನಾಡಿದರು. 

ರಕ್ತ ದಾನವು ಶ್ರೇಷ್ಠ ದಾನವಾಗಿದ್ದು ಸಾಯುವ ರೋಗಿಗಳನ್ನು ಬದುಕಿಸಿದ ಪುಣ್ಯ ರಕ್ತ ದಾನ ಮಾಡಿದರಿಗೆ ಸಿಗುತ್ತದೆ ಹಾಗಾಗಿ ಇಂದಿನ ಪೀಳಿಗೆ ಪ್ರತಿಯೊಬ್ಬ ಯುವಕರು ರಕ್ತದಾನವನ್ನು ಮಾಡಬೇಕು ಎಂದು ಹೇಳಿದರು.  ವರ್ತಕರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುರೇಶಗೌಡ್ರ ಮಾತನಾಡಿ ತಮ್ಮ ವರ್ತಕರ ಸಂಘ. ಕಾಲೇಜು. ಬ್ಯಾಂಕ್ ಹಾಗೂ ಇತರ ಸಂಘ ಸಂಸ್ಥೆಗಳು ರಕ್ತ ದಾನದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಬಹಳ ಜನರು ರಕ್ತ ದಾನ ಮಾಡುತ್ತಿದ್ದಾರೆ ಯುವ ಜನತೆ ಭಯ ಇಲ್ಲದೇ ಮುಂದೆ ಬಂದು ರಕ್ತ ದಾನ ಮಾಡುವಂತೆ ಕರೆ ನೀಡಿದರು.