ಮನುಷ್ಯನ ದೇಹದಲ್ಲಿ ರಕ್ತ ಸಂಚಲನ ಅತಿಮುಖ್ಯ : ಸೀತಾರಾಮ್ ಶೆಟ್ಟಿ
ಕಂಪ್ಲಿ 16: ಮನುಷ್ಯನ ದೇಹದಲ್ಲಿ ರಕ್ತ ಸಂಚಲನ ಆಗದೇ ಇದ್ದರೆ, ಆರೋ್ಯಗ ಮೇಲೆ ದುಶ್ಪರಿಣಾಮ ಬೀರುತ್ತದೆ. ಆದ್ದರಿಂದ ಇಂತಹ ಉಚಿತ ಆರೋಗ್ಯ ಥೆರಪಿ ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಎಂದು ಬೆಂಗಳೂರು ಥರೆಸಿ ಆರೋಗ್ಯ ತಜ್ಞ ಸೀತಾರಾಮ ಶೆಟ್ಟಿ ಹೇಳಿದರು. ಪಟ್ಟಣ ವಾಲ್ಕೀಕಿ ಸರ್ಕಾಲ್ ಹತ್ತಿರದ ವಾಲಿ ಕೊಟ್ರ್ಪ ಅವರ ಕಾಂಪ್ಲೇಕ್ಸ್ ಬಸವ ಸೇವಾ ಸಂಸ್ಥೆ, ಸಂಜೀವಿನಿ ಇನ್ಸಿಟ್ಯೂಟ್ ಆಪ್ ಪ್ಯಾರ ಮೆಡಿಕಲ್ ಸೈನ್ಸ್ ಮತ್ತು ರೋಟರಿ ಕ್ಲಬ್ ಗಂಗಾವತಿ ಹಾಗೂ ಕಂಪಾನೀಯಾ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉಚಿತ ಪೂಟ್ ಪಲ್ಸ್ ಥೆರಪಿ ಶಿಬಿರ ಸಮರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಒತ್ತಡ ಜೀವನದಲ್ಲಿ ಆರೋಗ್ಯದ ಕಾಳಜಿವಹಿಸಿ ಪೂಟ್ ಪಲ್ಸ್ ಥೆರಪಿಯಿಂದ ಮಧುಮೇಹ, ಅಧಿಕ ರಕ್ತದೊತ್ತಡ, ಸಂಧಿವಾತ, ಸ್ನಾಯು ಸೆಳೆತ, ಪಾರ್ಶ್ವವಾಯು, ಥೈರಾಯ್ಡ್, ಬೆನ್ನು ನೋವು, ಬೊಜ್ಜು ನಿವಾರಣೆಗೆಯಾಗಿ ರಕ್ತ ಸಂಚಾರಕ್ಕೆ ಅನುವು ಮಾಡಿ ಕೊಡುತ್ತದೆ. ಮೇಕ್ ಇನ್ ಇಂಡಿಯಾ ಯೋಜನೆಡಿಯಲ್ಲಿ ದೇಶಾದ್ಯಂತ 350 ಶಾಖೆಗಳು ಇವೆ. 90 ಲಕ್ಷಕಿಂತ ಹೆಚ್ಚಿನ ಜನರು ಪರಿಹಾರ ಪಡೆದಿದ್ದಾರೆ. 12ದಿವಸದಿಂದ ಥೆರಪಿ ಶಿಬಿರ ನಡೆಯಿತು. ಈ ಶಿಬಿರದಲ್ಲಿ 3ಸಾವಿರ ಜನ ಸದುಪಯೋಗ ಪಡೆಯುವ ಮೂಲಕ ಆರೋಗ್ಯವಾಗಿದ್ದಾರೆ. ಡಾ.ವೆಂಕಟೇಶ ಭರಮಕ್ಕನವರ್ ಅವರ ಸಹಕಾರದಿಂದ ಕಂಪ್ಲಿಯಲ್ಲಿ ಶಿಬಿರ ಯಶಸ್ವಿಗೆ ಕಾರಣವಾಗಿದೆ ಎಂದರು. ಬಸವ ಶ್ರೀ ಸೇವಾ ಸಂಸ್ಥೆ ಅಧ್ಯಕ್ಷ ಡಾ.ವೆಂಕಟೇಶ ಸಿ.ಭರಮಕ್ಕನವರ್ ಮಾತನಾಡಿ, ಪ್ರತಿಯೊಬ್ಬರ ಅರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ, ಈ ಸಂಸ್ಥೆ ಉಚಿತವಾಗಿ ಶಿಬಿರದ ಮೂಲಕ ಸಾರ್ವಜನಿಕರಿಗೆ ಮತ್ತು ಬಡವರಿಗೆ ಅನುಕೂಲ ಮಾಡಿಕೊಟ್ಟಿದೆ. ಇಂತಹ ಶಿಬಿರದಿಂದಾಗಿ ಆರೋಗ್ಯವನ್ನು ವೃದ್ಧಿಸಲು ಸಾಧ್ಯ. ಥೆರಪಿ ಮಿಷನ್ ಕೊಂಡುಕೊಳ್ಳುವವರು ಪೋ.ನಂ- 9620245460ಗೆ ಸಂಪರ್ಕಿಸಿ ಕಡಿಮೆ ದರದಲ್ಲಿ ಮಿಷನ್ ಪಡೆಯಬಹುದು ಎಂದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ರಾಮಾಂಜಿನೇಯಲು, ವಿದ್ಯಾಸಾಗರ ವಸತಿ ಶಾಲೆಯ ಪ್ರಾಚಾರ್ಯ ಪಿ.ನಾಗೇಶ್ವರರಾವ್, ಮುಖಂಡರಾದ ವಾಲಿ ಕೊಟ್ರ್ಪ, ಅರವಿ ಬಸವನಗೌಡ, ಮುಖಂಡರಾದ ನಾರಾಯಣಪ್ಪ, ಶಿಬಿರದ ಸಿಬ್ಬಂದಿಗಳಾದ ಸಿ.ಬಸವರಾಜ, ನಾಗರಾಜ ಸುಜ್ಜಿತ್ ಸೇರಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.