ಧಾರವಾಡ 23: ನಮ್ಮ ಕನ್ನಡ ಭಾಷೆ ಅಭ್ಯಾಸ ಮಾಡಿ ಮತ್ತು ಸಂಸ್ಕೃತಿಯ ವೈಭವವನ್ನು ಅರಿತು, ಸಾಹಿತ್ಯದ ಪುಸ್ತಕಗಳನ್ನು ಓದಬೇಕು, ಆಗ ಮನಸ್ಸಿನ ದುಗುಡು-ದುಮ್ಮಾನ ದೂರ ಆಗಿ, ಪರಿಪಕ್ವ ಕವಿ, ಸಾಹಿತಿಯಾಗಿ ಹೊರಹೊಮ್ಮಲು ಸಾಧ್ಯ. ಬರವಣಿಗೆಯನ್ನು ಕೃಷಿ ಮಾಡಿಕೊಳ್ಳಿ, ಆನಂದ ಉಂಟಾಗುವುದು ಎಂದು ಹಿರಿಯ ಕವಿ ಡಾ. ವ್ಹಿ. ಸಿ. ಐರಸಂಗ ಹೇಳಿದರು.
ಅವರು ಕನರ್ಾಟಕ ವಿದ್ಯಾವರ್ಧಕ ಸಂಘ 63 ನೇ ಕನರ್ಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ 6 ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 'ಕಾವ್ಯಸಂಜೆ' ಕಾರ್ಯಕ್ರಮಕ್ಕೆ ಸೊಗಸಾಗಿ ಕನ್ನಡ ಗೀತೆ ಹಾಡಿ, ಖಂಝರಾ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದರು.
ನೋವು ಮನುಷ್ಯ ಜೀವನದ ಸಹಜ ಭಾಗವಾಗಿದೆ. ನೋವುಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಅವುಗಳನ್ನು ಮೆಟ್ಟಿ ನಿಲ್ಲಬೇಕು. ಜೀವನದಲ್ಲಿ ನೋವುಗಳೆಂಬ ಪ್ರವಾಹವನ್ನು ಈಜಬೇಕು, ಈಜಿ ಜಯಿಸಬೇಕು. ನೋವು ಉಂಟಾಗಿದೆಯೆಂದು ಚಿಂತಿಸುತ್ತಾ, ದುಃಖಿಸುತ್ತಾ ಕುಳಿತರೆ ಬದುಕಿನ ಸೊಬಗು ಹೋಗುವುದು, ಸ್ವಾರಸ್ಯ ಕ್ಷೀಣಿಸುವುದು. ನೋವು ಬಂದ ಕ್ಷಣ ಆಚೆ ಬಂದು ನಮ್ಮ ಸುತ್ತ ಮುತ್ತ ಇರುವ ಸುಂದರ ಪ್ರಪಂಚವನ್ನು ತೆರೆದ ಕಣ್ಣುಗಳಿಂದ ನೋಡಬೇಕು. ಇಂದಿನ ಯುವ ಪೀಳಿಗೆ ಸಾಹಿತ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಡಾ. ಐರಸಂಗ ಕರೆ ನೀಡಿದರು.
ಕಾವ್ಯ ಸಂಜೆಯಲ್ಲಿ ಕವಿಗಳಾದ ನರಸಿಂಹ ಪರಾಂಜಪೆ, ವಿಜಯಕಾಂತ ಪಾಟೀಲ (ಕ್ಯಾಸನೂರ), ಸುನಂದಾ ಕಡಮೆ, ಡಾ. ಮಲ್ಲಿಕಾಜರ್ುನ ಹಿರೇಮಠ, ಚನ್ನಪ್ಪ ಅಂಗಡಿ, ಜಯಶೀಲಾ ಬೆಳಲದವರ, ರಾಮಚಂದ್ರ ಪಾಟೀಲ, ಈಶ್ವರ ಕಮ್ಮಾರ, ಡಾ. ಚಂದ್ರಶೇಖರ ರೊಟ್ಟಿಗವಾಡ, ಲೀಲಾ ಕಲಕೋಟಿ, ಡಾ. ಬಸು ಬೇವಿನಗಿಡದ, ಡಾ. ಬಸವರಾಜ ಒಕ್ಕುಂದ, ನಿರ್ಮಲಾ ಶೆಟ್ಟರ, ಅಶೋಕ ಚೊಳಚಗುಡ್ಡ, ಎಂ.ಎಂ. ಪುರದನಗೌಡರ, ಡಾ. ಮಂದಾಕಿನಿ ಪುರೋಹಿತ, ಸಿ.ಎಂ. ಚನಬಸಪ್ಪ, ಎಸ್. ಎಸ್. ಚಿಕ್ಕಮಠ, ಡಾ. ಸ್ನೇಹಾ ಜೋಶಿ, ಮಹ್ಮದಅಲಿ ಗೂಢುಬಾಯಿ, ಸಂಧ್ಯಾ ದಿಕ್ಷೀತ, ಸರಸ್ವತಿ ಭೋಸಲೆ, ಶಿವಕುಮಾರ ಜಮದಂಡಿ, ಬಿ. ಕೆ. ಹೊಂಗಲ, ಅನುರಾಧಾ ಎಂ. ಕುಲಕಣರ್ಿ ಹಾಗೂ ರಾಧಾ ಶ್ಯಾಮರಾವ ಭಾಗವಹಿಸಿ ನೆರೆದ ಸಾಹಿತ್ಯಾಸಕ್ತರನ್ನು ತಮ್ಮ ಕವನ ವಾಚನದ ಮೂಲಕ ಪುಳಕಿತಗೊಳಿಸಿದರು.
ಸಂಘದ ಹಿರಿಯ ಸದಸ್ಯ ಸರಸಾನಂದ ಜಿ. ದೊಡವಾಡ, ಸಿ. ಎಸ್. ಪಾಟೀಲ (ಛಾಯಾಚಿತ್ರಗ್ರಾಹಕ) ಹಾಗೂ ಅಶೋಕ ಮಠದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ, ಮಾತನಾಡಿದ ಹಿರಿಯ ಸದಸ್ಯರಾದ ಛಾಯಾಗ್ರಾಹಕರಾದ ಹುಬ್ಬಳ್ಳಿಯ ಸಿ.ಎಸ್. ಪಾಟೀಲ (ಚಂದ್ರಶೇಖರಯ್ಯಾ ಸಿದ್ಧಪ್ಪಯ್ಯಾ ಪಾಟೀಲ), ನನ್ನ ಮಾತಿನಲ್ಲಿ ಒಂದು ಅಭಿಪ್ರಾಯ ಹೊರ ಹೊಮ್ಮಿದರೆ, ನನ್ನ ಛಾಯಾಚಿತ್ರದಲ್ಲಿ ಸಾವಿರಾರು ಅಭಿಪ್ರಾಯ ಇರುವ ಚಿತ್ರಣ ಹೊರಹೊಮ್ಮುತ್ತದೆ. ಒಂದು ಚಿತ್ರ ಸಾವಿರ ಶಬ್ದಗಳಿಗೆ ಸಮಾನವಾಗಿದೆ ಎಂದ ಅವರು ಯಾವುದೇ ಕಾರ್ಯವಿರಲಿ, ವೃತ್ತಿಯಿರಲಿ ಅದನ್ನು ಶ್ರದ್ಧೆ, ಪ್ರಾಮಾಣಿಕತೆಯಿಂದ ಮಾಡಿದರೆ ಜೀವನದಲ್ಲಿ ಯಶಸ್ಸು ಮತ್ತು ನಮ್ಮ ಗುರಿ ಮುಟ್ಟಲು ಸಾಧ್ಯ ಎಂದರು.
ಅಶೋಕ ಮಠದ ಮಾತನಾಡಿ, ಸಾಹಿತಿಗಳು, ಕವಿಗಳು, ಹೋರಾಟಗಾರರು, ಸಂಗೀತಗಾರರು, ವಿದ್ವಾಂಸರು, ಅನೇಕ ಹಿರಿಯರು ಓಡಾಡಿದ ಸಂಘದ ಈ ಆವರಣದಿಂದ ಸಾಹಿತ್ಯದ ಚಟುವಟಿಕೆಗಳಲ್ಲಿ ಭಾಗವಹಿಸುವ ಸ್ಫೂತರ್ಿ ಬಂದಿದ್ದು, ಗೋಕಾಕ ಚಳುವಳಿಯಲ್ಲಿ ಭಾಗವಹಿಸಿದ್ದನ್ನು ಮತ್ತು ತಮ್ಮ ಕವನ ಸಂಕಲನ ಹೊರ ಬರಲು ಸಂಘದ ಒಡನಾಟ ಪ್ರೇರಣೆಯಾಯಿತು ಎಂದು ಮೆಲುಕು ಹಾಕಿದರು.
ಸಂಘದ ಅಧ್ಯಕ್ಷರಾದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಗೌರವ ಉಪಸ್ಥಿತರಿದ್ದರು.
ಉಪಾಧ್ಯಕ್ಷ ನಿಂಗಣ್ಣ ಕುಂಟಿ(ಇಟಗಿ), ಕಾರ್ಯಾಧ್ಯಕ್ಷ ಶಿವಣ್ಣ ಬೆಲ್ಲದ, ಕೋಶಾಧ್ಯಕ್ಷ ಕೃಷ್ಣ ಜೋಶಿ, ಸಹ ಕಾರ್ಯದಶರ್ಿ ಸದಾನಂದ ಶಿವಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯ ಸತೀಶ ತುರಮರಿ, ಮನೋಜ ಪಾಟೀಲ ಉಪಸ್ಥಿತರಿದ್ದರು. ಶಿಕ್ಷಕ, ಕಲಾವಿದ ಶಿವಾನಂದ ಹೂಗಾರ ಪ್ರಾಥರ್ಿಸಿದರು. ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ ನಿರ್ವಹಿಸಿ, ವಂದಿಸಿದರು. ವೀರಣ್ಣ ಒಡ್ಡೀನ ಮತ್ತು ವಾಯ್.ಸಿ. ಬಿಜಾಪೂರ ಅತಿಥಿಗಳನ್ನು ಗೌರವಿಸಿದರು.
ರಾಘವೇಂದ್ರ ಕುಂದಗೋಳ, ಶಂಕರ ರಾಜಗೂಳಿ, ಭರತ ಜಾಧವ, ಸುರೇಶ ಹಿರೇಮಠ, ಪ್ರಭು ಹಂಚಿನಾಳ, ಲೋಖಂಡೆ, ಕೊಪ್ಪದ, ಎಸ್.ಜಿ. ಹಂಚಿನಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.