ಲೋಕದರ್ಶನ ವರದಿ
ಕೊಪ್ಪಳ 17: ಕೊಪ್ಪಳವು ಪುರಾತನ ಕಾಲದಿಂದಲೂ ಚರಿತ್ರೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುತ್ತದೆ. ಮೌರ್ಯ ಚಕ್ರವರ್ತಿ ಆಶೋಕನನು ಇಲ್ಲಿ ನಿರ್ಮಿಸಿದ ಶಿಲಾಶಾಸನಗಳು ಕೊಪ್ಪಳದ ಪ್ರಾಚೀನತೆಗೆ ಸಾಕ್ಷಿ. ಕವಿರಾಜ ಮಾರ್ಗಕಾರ ಶ್ರೀವಿಜಯನು ಉಲ್ಲೇಖಿಸಿರುವ "ತಿರುಳ್ಗನ್ನಡ" ದ ನಾಡಿನಲ್ಲಿ ಕೊಪ್ಪಳವು ಒಂದಾಗಿದ್ದು ಗವಿಮಠವು ಈ ನಾಡಿನ ಬಹು ದೊಡ್ಡ ಮಠವಾಗಿ ಅನ್ನ,ಅರಿವು, ಆರೋಗ್ಯ ಮತ್ತು ದಾಸೋಹ ಪರಂಪರೆಯನ್ನು ಉಳಿಸಿಕೊಂಡಿದ್ದು ಇಂತಹ ನೆಲದಲ್ಲಿ ಬದುಕುವದೇ ಪುಣ್ಯವಾಗಿದ್ದು ಇಂತಹ ದಾಸೊಹ ಪರಂಪರೆ ಉಳಿಸಿಕೊಂಡಿರುವ ನೆಲದಲ್ಲಿ ವಾಸಿಸುವ ಜನ ಪುಣ್ಯವಂತರು ಎಂದು ಪೋಲಿಸ್ ಇಲಾಖೆ ಬಳ್ಳಾರಿ ವಲಯದ ಐಜಿಪಿ ಎಂ. ನಂಜುಂಡಸ್ವಾಮಿ ಬಣ್ಣಿಸಿದರು.
ಅವರು ಬುಧುವಾರ ಬೆಳಿಗ್ಗೆ ಇಲ್ಲಿನ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ "ಜೀವನದರ್ಶನ" ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡು ಬೃಹತ್ ವಿದ್ಯಾರ್ಥಿ ಸಮೂಹವನ್ನು ಉದ್ದೇಶಿಸಿ ಮಾತನಾಡಿ ಇತ್ತೀಚಿನ ಪೋಲಿಸ್ ನೇಮಕಾತಿಯಲ್ಲಿ ಕೊಪ್ಪಳದವರೇ ಹೆಚ್ಚಾಗಿ ಪೋಲಿಸರಾಗುತ್ತಿದ್ದಾರೆ. ಪ್ರಮುಖ ಜಿಲ್ಲೆಗಳಾದ ಬೆಂಗಳೂರ, ಮಂಗಳೂರ, ಉಡುಪಿ, ತುಮಕೂರ, ಚಾಮರಾಜ ನಗರ, ಮಂಡ್ಯ, ಹಾಸನ ಮೊದಲಾದ ಕಡೆ ಸೇವೆ ಸಲ್ಲಿಸುತ್ತಿರುವ ಪೋಲಿಸರಿಗೆ ನಿಮ್ಮ ಊರು ಯಾವುದು? ಎಂದರೆ ಕೊಪ್ಪಳ ಎನ್ನುತ್ತಾರೆ. ಕರ್ನಾಟಕ ಸ್ಟೇಟ್ ಪೋಲಿಸ್ ಎಂದರೆ ಕೊಪ್ಪಳ ಪೋಲಿಸ್ ಎಂಬಂತಾಗಿದೆ ಎಂದರು.
ಮುಂದುವರೆದು ಮಾತನಾಡಿದ ಅವರು ನಾವು ಎಲ್ಲಿಂದ ಬಂದಿದ್ದೇವೆ, ಎಲ್ಲಿ ಇರುತ್ತೇವೆ, ಎಲ್ಲಿಗೆ ಹೋಗಬೇಕೆಂದು ವಿಚಾರ ಸಹ ಮಾಡುತ್ತಿಲ್ಲ. ಈ ರೀತಿ ಸಾಗುವದು ಬದುಕಲ್ಲ. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಓದಿದಾಗ ಮಾತ್ರ ಯಶಸ್ಸು ಲಭಿಸುತ್ತದೆ. ಪಠ್ಯದ ಜೊತೆಗೆ ಹೊಸ ಜನರನ್ನು ಪರಿಚಯಿಸಿಕೊಳ್ಳುವದರ ಮೂಲಕ, ಹೊಸ ಸ್ಥಳಗಳಿಗೆ ತೆರಳುವದರ ಮೂಲಕ, ಹೊಸ ಆಲೋಚನೆಗಳನ್ನು ಮಾಡಿಕೊಳ್ಳುವದರ ಮೂಲಕ ಹಾಗೂ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವದರ ಮೂಲಕ ಪಕ್ವತೆಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯವನ್ನು ದಿನವಿಡೀ ತೆರದಿಟ್ಟು ವಿದ್ಯಾರ್ಥಿಗಳ ಜ್ಞಾನ ದಾಹವನ್ನು ನೀಗಿಸುವಂತಹ ಪ್ರಯತ್ನಗಳು ಜರುಗಲಿ. ಜೊತೆಗೆ ಬುದ್ದ, ಬಸವ, ಅಂಬೇಡ್ಕರ ಅವರ ಚಿಂತನೆಗಳು ಅಗತ್ಯವೆಂದು ಪೋಲಿಸ್ ಇಲಾಖೆ ಬಳ್ಳಾರಿ ವಲಯದ ಐಜಿಪಿ ಎಂ. ನಂಜುಂಡಸ್ವಾಮಿ ಹೇಳಿದರು.
ನಂತರ ಕಾಲೇಜಿನಲ್ಲಿ ಏರ್ಪಡಿಸದ್ದ ವಿದ್ಯಾರ್ಥಿಗಳ ಸಂವಾದದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿ ಸಮರ್ಪಕವಾದ ರೀತಿಯಲ್ಲಿ ವಿದ್ಯಾರ್ಥಿ ಸಮೂಹಕ್ಕೆ ಸಲಹೆ ಸೂಚನೆ ಮತ್ತು ಮಾಗ್ದಶ್ನ ನೀಡಿದರು ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದಶರ್ಿ ಎಸ್ ಮಲ್ಲಿಕಾರ್ಜುನ ಗವಿಸಿದ್ದೇಶ್ವರ ಪದವಿ ಕಾಲೇಜಿನ ಪ್ರಾಚಾರ್ಯ ಎಂ.ಎಸ್ ದಾದ್ಮಿ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಸಿದ್ದಲಿಂಗಪ್ಪ ಕೊಟ್ನೇಕಲ್, ಪ್ರಕಾಶ ಬಳ್ಳಾರಿ, ಅಲ್ಲದೇ ನಗರ ಪೋಲಿಸ್ ಠಾಣೆಯ ಪಿ.ಐ. ಶಿವಾನಂದ ವಾಲೀಕಾರ ಸೇರಿದಂತೆ ಸಂಯೋಜನಾಧಿಕಾರಿ ಪರೀಕ್ಷಿತರಾಜ ಸಮಸ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿ ಬಳಗ ಭಾಗವಹಿಸಿದ್ದರು. ಪ್ರಾರ್ಥನೆ ವಷರ್ಿಣಿ ಸಂಕ್ಲಾಪುರ ಸಂಗಡಿಗರು, ನಿರೂಪಣೆ ಪ್ರಾ. ಶರಣಬಸಪ್ಪ ಬಿಳಿಯಲಿ ನೆರವೇರಿಸಿದರು.