ತಿರುಳುಗ್ನಡ ನಾಡಿನ ಕೊಪಣಚಲಾದಲ್ಲಿ ಜನಸಿದ ನಾವೇ ಧನ್ಯರು: ಮಹೇಶಬಾಬು

ಲೋಕದರ್ಶನ ವರದಿ

ಕೊಪ್ಪಳ 21: ಅಮೋಘವರ್ಷನ ಹೇಳಿಕೆಯಂತೆ ಕನ್ನಡನಾಡು ಕಾವೇರಿಯಿಂದ ಗೋದಾವರಿ ಪ್ರದೇಶಗಳಲ್ಲಿತ್ತು ಇದರಲ್ಲಿ ತಿರುಳುಗ್ನಡ ನಾಡು ಶ್ರೇಷ್ಠವೆಂಬತೆ ಕೊಪಣಚಲಾದ ಸಂಸ್ಕೃತಿ, ಪರಂಪರೆ, ಆಚಾರ,ವಿಚಾರ, ಪರಸ್ಪರ ಸಹಕಾರ ಮನೋಭಾವಗಳ ಅಡಿಯಲ್ಲಿ ಬೆಳೆಯುತ್ತಿರುವ ಕೊಪ್ಪಳದಲ್ಲಿ ಜನಸಿದ ನಾವೇ ಧನ್ಯರು ಎಂದು ಸಿರಿಗ್ನನಡ ವೇದಿಕೆಯ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷರಾದ ಮಹೇಶಬಾಬು ಸುವರ್ೆ ಹೇಳಿದರು.

ಅವರು ನಗರದ ಪ್ರವಾಸಿ ಮಂದಿರದಲ್ಲಿ ವೇದಿಕೆಯಿಂದ ಅಧಿಕೃತ ಆಹ್ವಾನದ ಸ್ವಾಗತ ಹಾಗೂ ಗೌರವವನ್ನು ಸ್ವೀಕರಿಸಿ ಮಾತನಾಡಿ, ಈ ನಾಡಿನ ಮೂಲಕ ಕನ್ನಡವನ್ನು ಕಟ್ಟಿ ಬೆಳೆಸುವಲ್ಲಿ ಇಲ್ಲಿಯ ಸಾಂಸ್ಕೃತಿಕ, ಸಾಹಿತ್ಯ, ಕಲೆ, ಸಮ್ಮೇಳನಗಳು ಸಹಾಯಕವಾಗಿವೆ. ಇಟಗಿ ಉತ್ಸವ, ಕೊಪ್ಪಳ ಜಿಲ್ಲಾ ಉತ್ಸವ, ತಿರುಗ್ನಡ ಸಮ್ಮೇಳನ, ಉದರ್ು ಕನ್ನಡಿಗರ ಸಮ್ಮೇಳನ ಸೇರಿದಂತೆ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಎರಡು ದಶಕಕಾಲ ಹಮ್ಮಿಕೊಂಡು ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರವನ್ನು ಸದೃಢಗೊಳಿಸಿ, ಪೋಷಿಸುತ್ತಾ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ತಮ್ಮ ಸಹಕಾರ ಅತ್ಯಅಗತ್ಯ ಎಂದರು.

ಪ್ರಾಸ್ತವಿಕವಾಗಿ ಜಿ.ಎಸ್.ಗೋನಾಳ ಮಾತನಾಡಿ, ಸಿರಿಗನ್ನಡ ವೇದಿಕೆಯ ಮೂಲಕ ಹೈ-ಕ ಪ್ರದೇಶದಲ್ಲಿ ಸಿರಿಗನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿ, ಯಶಸ್ವಿಯಾಗಿ ನೆಡೆಸಲು ಸಾಹಿತ್ಯ, ಸಾಂಸ್ಕೃತಿಕ ರೂವಾರಿಯಾಗಿರುವ ಮಹೇಶಬಾಬು ಸುವರ್ೆ ರವರನ್ನು ಆಯ್ಕೆ ಮಾಡಿದ್ದು ಅವರ ಸರ್ವಾಧ್ಯಕ್ಷತೆಯಲ್ಲಿ ಇದೇ ಆ. 25ರಂದು ರವಿವಾರ ಸಾಹಿತ್ಯ ಭವನದಲ್ಲಿ ನಡೆಯಲಿದೆ, ಜಿಲ್ಲೆಯ ಸಾಹಿತ್ಯ ಆಸಕ್ತರು, ಕವಿಗಳು, ಕಲಾವಿದರು ಭಾಗವಹಿಸಿಸಲು ವಿನಂತಿಸಿದರು. ನಂತರ ಎಂ.ಸಾಧಿಕ್ ಅಲಿ, ಸಿದ್ದಪ್ಪ ಹಂಚಿನಾಳ, ಡಾ. ಭಾಗ್ಯಜ್ಯೋತಿ, ಶಾಂತವೀರ ಬನ್ನಿಕೊಪ್ಪ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಹಿರಿಯ ಸಾಹಿತಿ ಮಾಹಂತೇಶ ಮಲ್ಲನಗೌಡರ್ ಮಾತನಾಡಿ, ಸುರ್ವೆಯವರು ಸತತವಾಗಿ ಕೊಪ್ಪಳ ಜಿಲ್ಲೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರವನ್ನು ಬೆಳೆಗಿಸುತ್ತಿದ್ದಾರೆ. ಅಲ್ಲದೇ ಸಾಹಿತಿಗಳಿಗೆ, ಕವಿಗಳಿಗೆ ಕಲಾವಿದರಿಗೆ ವೇದಿಕೆಯನ್ನು ಒದಗಿಸಿ ಪ್ರೋತಾಹಿಸುತ್ತಾ ಬಂದಿದ್ದಾರೆ. ಅವರು ಪರಿಶ್ರಮಕ್ಕೆ ಸಿರಿಗನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷ ಸ್ಥಾನವು ಒಂದು ಗರಿಯಾಗಿದೆ ಎಂದರು. 

ಈ ಕಾರ್ಯಕ್ರಮದಲ್ಲಿ ಎಂ.ಬಿ.ಅಳವಂಡಿ, ಎನ್.ಎಂ. ದೊಡ್ಡಮನಿ, ವೈ.ಬಿ.ಜೂಡಿ, ಶಿವಕುಮಾರ್ ಹಿರೇಮಠ, ಎಸ್.ಕೆ.ದಾನಕೈ, ಶಿ.ಕಾ.ಬಡಿಗೇರ, ಎ.ಪಿ.ಅಂಗಡಿ, ವಿದ್ಯಾಧರ ಮೇಘರಾಜ, ಪತ್ರೇಪ್ಪ ಚತ್ತರಕಿ, ಗವಿಸಿದ್ದಪ್ಪ ಬಾರಕೇರ, ಮೈಲಾರಪ್ಪ ಉಂಕಿ, ವೆಂಕಟೇಶ ನಾಯಕ, ರಂಗನಾಥ, ಪುಷ್ಪಲತಾ ಏಳುಭಾವಿ, ಅಂಜನಾದೇವಿ, ಪಿ.ಬಿ.ಪಾಟೀಲ,  ಶ್ರೀನಿವಾಸ ಚಿತ್ರಗಾರ, ಮೆಹಬೂಬುಖಾನ್, ಎಸ್.ಪಿ.ಟಿ.ಅನೂಪ ಕುಮಾರ, ಬಸವರಾಜ ಮರದೂರು, ಉಮೇಶಪೂಜಾರ ಸೇರಿದಂತೆ ಇತರು ಇದ್ದರು. ಪ್ರಾರ್ಥನೆ ಕಲಾವತಿ ಕುಲಕರ್ಣಿ  ಮತ್ತು ಅನುಸೂಯಾ ಜಾಗೀರದಾರ ಹಾಡಿದರು.  ಕಲ್ಲಪ್ಪ ಕವಳಕೇರಿ ಸ್ವಾಗತಿಸಿದರು. ಮಂಜುನಾಥ ಚಿತ್ರಗಾರ ನಿರೂಪಿಸಿ ಹಾಗೂ ವಂದಿಸಿದರು.